ಕುಶಾಲನಗರ, ಅ. ೧೩: ಕುಶಾಲನಗರ ಪಿಎಂಶ್ರೀ ಶಾಲಾ ಮೈದಾನ ದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಅಂಡರ್-೧೭ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ (ಮಂಗಳೂರು) ತಂಡವು ಬಾಲಕ ಮತ್ತು ಬಾಲಕಿಯರ ಎರಡೂ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಮಹಿಳಾ ಫೈನಲ್ನಲ್ಲಿ ಮಂಗಳೂರು ಬಾಲಕಿಯರ ವಿಭಾಗದ ಮಂಗಳೂರು ತಂಡವು ಆತಿಥೇಯ ಕೊಡಗು ತಂಡವನ್ನು ೩೨-೫ ಅಂಕಗಳ ಭಾರೀ ಅಂತರದಿAದ ಮಣಿಸಿತು. ಮಂಗಳೂರು ತಂಡದ ಪರ ಜುನೈನಾ ಮತ್ತು ಹಾರ್ದಿಕಾ ಅವರು ಅತ್ಯುತ್ತಮ ಆಟ ಪ್ರದರ್ಶಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬಾಲಕರ ವಿಭಾಗದ ಫೈನಲ್ನಲ್ಲಿ ಮಂಗಳೂರು ತಂಡವು ಚಿಕ್ಕಮಗಳೂರು ತಂಡವನ್ನು ೪೦-೩೨ ಅಂಕಗಳಿAದ ಮಣಿಸಿತು. ಮಂಗಳೂರು ಪರ ಜೈರಾಜ್ ಅತ್ಯುತ್ತಮ ಆಟವಾಡಿದರೆ, ಚಿಕ್ಕಮಗಳೂರು ಪರ ದಿನೇಶ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು.
ಬಹುಮಾನ ವಿತರಣೆಯನ್ನು ಅರ್ಜುನ ಪ್ರಶಸ್ತಿ ಪುರಸ್ಕೃತ, ಭಾರತ ಕಬಡ್ಡಿ ತಂಡದ ಮಾಜಿ ನಾಯಕ ರಮೇಶ್ ವಿತರಿಸಿದರು. ಈ ಸಂದರ್ಭ ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಜಿ.ಎಲ್. ನಾಗರಾಜ್, ಉತ್ತಪ್ಪ, ಅವಿನಾಶ್, ಮಧು ಮತ್ತಿತರರು ಹಾಜರಿದ್ದರು.