ಮಡಿಕೇರಿ, ಅ. ೧೩: ಕೊಡಗು ವಿದ್ಯಾಲಯದ ಮೂವರು ಪ್ರತಿಭಾವಂತ ಕ್ರಿಕೆಟ್ ಆಟಗಾರರು ಸಿಬಿಎಸ್ಇ ದಕ್ಷಿಣ ವಲಯ ಮಟ್ಟದ ಟಿ ೨೦ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಪುಣೆಯ ಲೋನಾವಾಲದ ಸಿಂಹ್ನಗಢ ಪಬ್ಲಿಕ್ ಸ್ಕೂಲ್ನಲ್ಲಿ ಸೆಪ್ಟೆಂಬರ್ ೨೭ ರಿಂದ ಅಕ್ಟೋಬರ್ ೨ ರವರೆಗೆ ನಡೆದ ಸಿಬಿಎಸ್ಇ ದಕ್ಷಿಣ ವಲಯ ಟಿ೨೦ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಮೆರೆದಿದ್ದಾರೆ. ೮ನೇ ತರಗತಿಯ ಆಲ್ವಿನ್ ಟಿ. ಪಿ. ಅವರು ಅಂಡರ್-೧೪ ತಂಡಕ್ಕೆ ವೇಗದ ಬೌಲರ್ ಆಗಿ ಆಯ್ಕೆಯಾಗಿದ್ದಾರೆ.
೯ನೇ ತರಗತಿಯ ಆದಿತ್ಯ ಕೆ. ಎಂ. ಅವರು ಅಂಡರ್-೧೭ ತಂಡಕ್ಕೆ ಎಡಗೈ ಆರಂಭಿಕ ಬ್ಯಾಟರ್ ಆಗಿ ಹಾಗೂ ಅದೇ ತರಗತಿಯ ದೇವಾವೃತ್ ಡಿ. ಬಿ. ಅವರು ಲೆಗ್ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳು ಅಕ್ಟೋಬರ್ ೧೫ರಿಂದ ೨೨ರವರೆಗೆ ನಡೆಯಲಿರುವ ವಿಶೇಷ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಅಕ್ಟೋಬರ್ ೨೪ ರಿಂದ ೩೦ರವರೆಗೆ ತಮಿಳುನಾಡಿನ ಮಧುರೈಲ್ಲಿ ನಡೆಯಲಿರುವ ಸಿಬಿಎಸ್ಇ ರಾಷ್ಟಿçÃಯ ಟಿ೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಕ್ಷಿಣ ವಲಯ-II ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ. ಎಸ್. ಸುಮಿತ್ರಾ ತಿಳಿಸಿದ್ದಾರೆ.