ಮಡಿಕೇರಿ, ಅ. ೧೩: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ಈ ಬಾರಿ ದಶಮಂಟಪ ಸಮಿತಿಯ ಜವಾಬ್ದಾರಿ ವಹಿಸಿಕೊಂಡಿರುವ ಶ್ರೀ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ಮಂಟಪ ಸಮಿತಿ ೩೧ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಬಲ್ಲಾರಂಡ ಸಚಿನ್ ಕಾರ್ಯಪ್ಪ ತಿಳಿಸಿದ್ದಾರೆ.

ಎರಡು ಟ್ರಾö್ಯಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ಶ್ರೀ ಕೃಷ್ಣ ಬಾಲಲೀಲೆ - ಅಸುರನ ಸಂಹಾರ - ಕಾಳಿಂಗ ಮರ್ದನ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದಿಂಡಿಗಲ್‌ನ ಸೆಲ್ವಂ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಮಡಿಕೇರಿಯ ಸ್ಕಂದ ತಂಡ ಧ್ವನಿವರ್ಧಕ ಒದಗಿಸಲಿದ್ದು, ಮುಂಬೈನ ಅನು ಪ್ರೊ ಇವೆಂಟ್‌ನವರು ಸ್ಟುಡಿಯೋ ಲೈಟಿಂಗ್ ವ್ಯವಸ್ಥೆ ಮಾಡಲಿದ್ದಾರೆ.

೨೦ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹಾದೇವಪ್ಪ ಆ್ಯಂಡ್ ಸನ್ಸ್ ಕಲಾಕೃತಿಗಳನ್ನು ತಯಾರು ಮಾಡಲಿದ್ದಾರೆ. ಪ್ಲಾಟ್‌ಫಾರಂ ನಿರ್ಮಾಣ, ಟ್ರಾö್ಯಕ್ಟರ್ ಸೆಟ್ಟಿಂಗ್ಸ್ ಹಾಗೂ ಕಲಾಕೃತಿಗಳಿಗೆ ಚಲನವಲನ ವ್ಯವಸ್ಥೆಯನ್ನು ಟೀಂ ಭಗವತಿ ಹಾಗೂ ಶೋಮಾನ್ ತಂಡ ಮಾಡಲಿದೆ. ದೆಹಲಿಯ ಮೈತ್ರಿ ಇವೆಂಟ್ ಸಂಸ್ಥೆ ಫೈರ್ ಎಫೆಕ್ಟ್ ನೀಡಲಿದ್ದು, ಕೊಡಗಿನ ವಾಲಗ ಮಂಟಪವನ್ನು ಮುನ್ನಡೆಸಲಿದೆ. ಒಟ್ಟು ರೂ. ೩೫ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರÀಲಾಗುತ್ತಿದೆ ಎಂದು ಸಚಿನ್ ಕಾರ್ಯಪ್ಪ ಮಾಹಿತಿ ನೀಡಿದ್ದಾರೆ.

- ಉಜ್ವಲ್ ರಂಜಿತ್