ನಾಪೋಕ್ಲು, ಅ. ೧೩: 'ಗ್ರಾಮಕ್ಕಾಗಿ ಒಂದು ದಿನ' ಅಭಿಯಾನದಡಿ, ಪೆರಾಜೆ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಸೂರ್ಯ ಸ್ವಸಹಾಯ ಸಂಘ ಪುತ್ಯ ಪೆರಾಜೆ ವತಿಯಿಂದ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪುತ್ಯದ ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದ ಬಳಿಯಿಂದ ಆರಂಭಗೊAಡ ಸ್ವಚ್ಛತಾ ಕಾರ್ಯವು ಪೆರಾಜೆಯ ಪಯಸ್ವಿನಿ ಸೇತುವೆಯ ತನಕ ನಡೆಯಿತು. ಸಂಘದ ಸದಸ್ಯರು ರಸ್ತೆ ಬದಿಗಳಲ್ಲಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಶ್ರಮದಾನ ಮಾಡಿದರು.

ಕೊಡಗು ಜಿಲ್ಲಾ ದಿಶಾ ಸಮಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ಸ್ಥಳಕ್ಕೆ ಭೇಟಿ ನೀಡಿ, ಸಂಘದ ಸಮಾಜಮುಖಿ ಕಾರ್ಯಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಂದಕುಮಾರ್ ಅಡ್ಕ, ಕಾರ್ಯದರ್ಶಿ ಪವನ್ ಬಂಗಾರಕೋಡಿ, ಹಾಗೂ ಸದಸ್ಯರುಗಳಾದ ಬಾಲಕೃಷ್ಣ ತೊಕ್ಕುಳಿ, ಲೋಕೇಶ್ ಹೊದ್ದೆಟ್ಟಿ, ಮಹಾಬಲ ನಿಡ್ಯಮಲೆ, ಸತೀಶ್ ಬಂಗಾರಕೋಡಿ, ಮನೋಜ್ ಪೀಚೆ, ಶಿವರಾಯ ಗುಡ್ಡೆಮನೆ, ವಸಂತ ಕರಿಂಬಿ, ವಿನಯ ಬಂಗಾರಕೋಡಿ, ಧರ್ಮಪಾಲ ಕಾಪಿಲ, ಮೋಹನ್ ಬಂಗಾರಕೋಡಿ, ಮಹಾಬಲ ಕಾಪಿಲ, ಕಿಶೋರ್ ಪೀಚೆ, ಜತ್ತಪ್ಪ ಯಾಪಾರೆ, ಪದ್ಮಯ ಅಡ್ಕ ಮತ್ತು ಹರ್ಷ ಬಂಗಾರಕೋಡಿ ಪಾಲ್ಗೊಂಡಿದ್ದರು.