ಮಡಿಕೇರಿ, ಅ. ೧೩; ಮಡಿಕೇರಿ ದಸರಾ ಉತ್ಸವ ಅಂಗವಾಗಿ ದಸರಾ ಕ್ರೀಡಾ ಸಮಿತಿ ವತಿಯಿಂದ ವಿವಿಧ ಕ್ರೀಡಾಕೂಟಗಳನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದ್ದು, ಈ ಬಾರಿ ಇದೇ ಪ್ರಥಮ ಬಾರಿಗೆ ರಿಂಕ್ ಹಾಕಿ ಪಂದ್ಯಾವಳಿ ಏರ್ಪಡಿಸಲಾಗಿತ್ತು.
ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ ಅಧ್ಯಕ್ಷತೆಯ ಕ್ರೀಡಾ ಸಮಿತಿ ಜ.ತಿಮ್ಮಯ್ಯ ಕ್ರೀಡಾಂಗಣದ ರಿಂಕ್ ಮೈದಾನದಲ್ಲಿ ಆಯೋಜನೆ ಮಾಡಿದ್ದ ಪಂದ್ಯಾವಳಿಯಲ್ಲಿ ಪುರುಷರು, ಬಾಲಕರು, ಬಾಲಕಿಯರು ಸೇರಿದಂತೆ ಒಟ್ಟು ೨೬ ತಂಡಗಳು ಭಾಗವಹಿಸಿವೆ. ನಾಕ್ಔಟ್ ಮಾದರಿಯ ಪಂದ್ಯಾವಳಿಯಾಗಿದ್ದು, ತಾ. ೧೪ ರಂದು (ಇಂದು) ಕೂಡ ಪಂದ್ಯಾವಳಿ ನಡೆಯಲಿದೆ.
ಮೇಲಾಟಗಳು
ಕ್ರೀಡಾಕೂಟದ ಅಂಗವಾಗಿ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಕ್ಕಳು ಹಾಗೂ ಮಹಿಳೆ, ಪುರುಷರಿಗೆ ವಿವಿಧ ಮೇಲಾಟಗಳು, ಹಾಗೂ ಥ್ರೋಬಾಲ್, ಭಾರದ ಗುಂಡು ಎಸೆತ, ವಾಲಿಬಾಲ್ ಸೇರಿದಂತೆ ವಿವಿಧ ಪಂದ್ಯಾವಳಿಗಳು ನಡೆದವು.
ಕ್ರೀಡಾಜ್ಯೋತಿ ಆಗಮನ
ಕ್ರೀಡಾಕೂಟಕ್ಕೂ ಮುನ್ನ ಬನ್ನಿ ಮಂಟಪದಿAದ ಕ್ರೀಡಾಂಗಣದವರೆಗೆ ಕ್ರೀಡಾಜ್ಯೋತಿಯನ್ನು ತಂದು ಜ್ಯೋತಿ ಬೆಳಗಲಾಯಿತು. ಮಾಸ್ರ್ಸ್ ಅಥ್ಲೆಟಿಕ್ಸ್ನಲ್ಲಿ ರಾಷ್ಟç ಮಟ್ಟದಲ್ಲಿ ಚಿನ್ನದ ಪದಕ ವಿಜೇತ ಕ್ರೀಡಾಪಟು ಐಮುಡಿಯಂಡ ಶೈಲಾ ಕುಶಾಲಪ್ಪ ಕ್ರೀಡಾಜ್ಯೋತಿ ಹೊತ್ತು ತಂದರು.
ಇವರೊಂದಿಗೆ ಕ್ರೀಡಾಪಟುಗಳು, ಕ್ರೀಡಾ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡರು.