ಕೂಡಿಗೆ, ಅ. ೧೩: ೧೯೯೨-೯೪ನೇ ಸಾಲಿನ ಸರಸ್ವತಿ ವಿದ್ಯಾಸಂಸ್ಥೆ ಮಡಿಕೇರಿ ಪ್ರಶಿಕ್ಷಣಾರ್ಥಿಗಳ ಸ್ನೇಹಕೂಟ ಇವರ ವತಿಯಿಂದ ನಿವೃತ್ತರಿಗೆ, ಅಕಾಲಿಕ ಮರಣ ಹೊಂದಿದವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಕುಶಾಲನಗರದ ಮುಳ್ಳುಸೋಗೆ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಧ್ಯಕ್ಷತೆಯನ್ನು ಬಿ.ಸಿ. ಮಂಜುನಾಥ್ ವಹಿಸಿದ್ದರು. ಪ್ರಾಸ್ತಾವಿಕ ನುಡಿಗಳನ್ನು ಎಸ್. ಗಂಗಾಧರ ಪ್ರಶಿಕ್ಷಣಾರ್ಥಿಗಳನ್ನು ಕುರಿತು ಮಾತನಾಡಿದರು.

ಸಭೆಯಲ್ಲಿ ನಿವೃತ್ತರಿಗೆ ಹಾಗೂ ಅಕಾಲಿಕ ಮರಣ ಹೊಂದಿದವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ನಂತರ ಗೌರವ ಸ್ವೀಕರಿಸಿದ ನಿವೃತ್ತರಾದವರು ತಮ್ಮ ವೃತ್ತಿ ಜೀವನದ ಅನುಭವ ಹಂಚಿಕೊAಡರು. ಶಿಕ್ಷಕ ಟಿ.ಆರ್. ರಮೇಶ್ ನಿರೂಪಣೆ, ಶಿಕ್ಷಕಿ ವನಜ ವಂದಿಸಿದರು.