ಮಡಿಕೇರಿ, ಅ. ೧೨: ನಗರದ ನಾಲ್ಕು ಶಕ್ತಿದೇವತೆಗಳ ಪೈಕಿ ಹಿರಿಯ ಅಕ್ಕಳೆಂದೆ ಖ್ಯಾತಿಯಾಗಿರುವ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಮಂಟಪ ಸಮಿತಿ ೫೩ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಚನ್ನಪಂಡ ಹೇಮ ಕುಮಾರ್ ತಿಳಿಸಿದ್ದಾರೆ.
ಎರಡು ಟ್ರಾö್ಯಕ್ಟರ್ಗಳನ್ನು ಬಳಸಲಾಗುತ್ತಿದ್ದು, ಮಣಿಕಂಠನಿAದ ಮಹಿಷಿಯ ಸಂಹಾರವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದಿಂಡಿಗಲ್ನ ನ್ಯೂ ಮಾತ ಎಲೆಕ್ಟಿçಕಲ್ಸ್ನವರು ಲೈಟಿಂಗ್ ಬೋರ್ಡ್ ಅಳವಡಿಸಲಿದ್ದು, ಮಡಿಕೇರಿಯ ಇವೆಂಟ್ಟೆಕ್ನ ಅವಿನ್ ಕುಮಾರ್ ಸ್ಟುಡಿಯೋ ಲೈಟಿಂಗ್ ವ್ಯವಸ್ಥೆ ಮಾಡಲಿದ್ದಾರೆ. ೨೩ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಅಬ್ದುಲ್ ಖಾದರ್ ಮತ್ತು ತಂಡ ಹಾಗೂ ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾಕೃತಿಗಳನ್ನು ತಯಾರಿಸಲಿದ್ದಾರೆ.
ಕಲಾಕೃತಿಗಳಿಗೆ ಚಲನವಲನವನ್ನು ದೀಕ್ಷಾ ಫ್ಯಾಬ್ರಿಕೇಟರ್ನ ಮಂಜುನಾಥ್ ತಂಡದವರು ಮಾಡಲಿದ್ದಾರೆ. ಸೆಟ್ವರ್ಕ್ನ್ನು ಕಲಾ ನಗರದ ಮಂಜು ಮತ್ತು ತಂಡ ಮಾಡಲಿದೆ. ಒಟ್ಟು ೩೦ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದೆ ಎಂದು ಹೇಮಕುಮಾರ್ ಮಾಹಿತಿ ನೀಡಿದ್ದಾರೆ. - ಉಜ್ವಲ್ ರಂಜಿತ್