ಶ್ರೀಮಂಗಲ, ಅ. ೧೧: ಕಾಳಿಮಾಡ ಕುಟುಂಬದಿAದ ಕೊಡವ ಕೌಟುಂಬಿಕ ಪ್ರಥಮ ಮಂಗಲ ಸಮ್ಮಂಧ ಅಡ್ಕೊವೊ ನಮ್ಮೆಗೆ ಚಾಲನೆ ದೊರೆಯಿತು.
ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದಿಂದ ಪೊನ್ನಂಪೇಟೆ ಕೊಡವ ಸಮಾಜದವರೆಗೆ ಕಾಳಿಮಾಡ ಕುಟುಂಬದಿAದ ಸಾಂಪ್ರದಾಯಿಕ ಉಡುಪಿನಲ್ಲಿ ಸಾಂಸ್ಕೃತಿಕ ಮೆರವಣಿಗೆ ನಡೆಸಿದರು. ಮೆರವಣಿಗೆಯನ್ನು ಕಾಳಿಮಾಡ ಕುಟುಂಬದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಅವರು ಕೋವಿಯಲ್ಲಿ ಗುಂಡು ಹಾರಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಕೊಡವ ಜಾನಪದ ತಜ್ಞ ಬಾಚರಣಿಯಂಡ ಅಪ್ಪಣ್ಣ ಅವರು ಉದ್ಘಾಟನೆ ಮಾಡಿ ಮಾತನಾಡಿ, ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ಕೊಡವ ಪದ್ಧತಿ ಹಾಗೂ ಪರಂಪರೆ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಿದಂತಾಗಿದೆ, ಇಂತಹ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ನಮ್ಮ ಮಕ್ಕಳಿಗೆ ಇಂತಹ ಪದ್ಧತಿಯ ಮಹತ್ವದ ಬಗ್ಗೆ ತಿಳಿಸಿಕೊಟ್ಟಾಗ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಾತ್ರ ಅದನ್ನು ಅವರು ಕಲಿಯುತ್ತಾರೆ. ಭಾಷೆ ಹಾಗೂ ಸಂಸ್ಕೃತಿಯನ್ನು ನಾಶ ಮಾಡಿದರೆ ಆ ಜನಾಂಗವೇ ನಾಶವಾಗುತ್ತದೆ. ಹಳೆಯ ಪದ್ಧತಿ ಪರಂಪರೆ ಕ್ಷೀಣವಾಗುತ್ತಿರುವುದನ್ನು ಅರಿತು ಕೊಡವ ಜನಾಂಗದ ಮದುವೆಯಲ್ಲಿ ಜಾನಪದ ರೂಪದಲ್ಲಿರುವ ಒಪ್ಪಂದವನ್ನು ಎಲ್ಲರೂ ಕಲಿಯುವಂತಾಗಬೇಕೆAಬ ನಿಟ್ಟಿನಲ್ಲಿ ಕಾಳಿಮಾಡ ಕುಟುಂಬಸ್ಥರು ಸಂಸ್ಕೃತಿಯ ಬೆಳವಣಿಗೆಗೆ ಉತ್ತೇಜನಕ್ಕೆ ಮುಂದಾಗಿರುವುದು ಪ್ರಸಂಶನೀಯ ಎಂದು ಶ್ಲಾಘಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಂಖ್ಯೆ ತುಂಬಾ ಮುಖ್ಯವಾಗಿದೆ. ಕೊಡವ ಜನಾಂಗವು ಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ ವಿವಿಧ ಕ್ಷೇತ್ರದಲ್ಲಿ ಮಾಡಿದ ಸಾಧನೆ ದೊಡ್ಡದಿದೆ. ನಮ್ಮ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ರಕ್ಷಿಸಬೇಕು. ನಾಲ್ಕು ಕೋಟಿಗಿಂತ ಹೆಚ್ಚು ಜನರು ಮಾತನಾಡುವ ಕನ್ನಡ ಭಾಷೆ ಮುಂದಿನ ೩೦- ೪೦ ವರ್ಷದಲ್ಲಿ ಇಲ್ಲದಾಗುತ್ತದೆ ಎಂದು ಯುನೆಸ್ಕೋ ವರದಿ ಎಚ್ಚರಿಸಿದೆ. ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಮತ್ತಷ್ಟು ಕಡಿಮೆ ಇದ್ದು, ಎಚ್ಚೆತ್ತುಕೊಳ್ಳಬೇಕಾಗಿದೆ. ಭಾಷೆ, ಸಂಸ್ಕೃತಿಯ ಮೇಲೆ ಗಮನಕೊಟ್ಟು ರಕ್ಷಣೆ ಮಾಡಿದಾಗ ಮಾತ್ರ ಜನಾಂಗ ಉಳಿಯುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಳಿಮಾಡ ಕುಟುಂಬದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಅವರು ಕೊಡವ ಜನಾಂಗದಲ್ಲಿ ವಿವಿಧ ಕ್ರೀಡಾ ಪಂದ್ಯಾಟಗಳನ್ನು ಮಾಡಲಾಗುತ್ತಿದೆ. ಇವುಗಳಿಂದ ಕ್ರೀಡೆಯ ಬೆಳವಣಿಗೆಗೆ ಸಹಕಾರ ಆಗುತ್ತದೆ. ಆದರೆ ಕೊಡವ ಸಂಸ್ಕೃತಿಗೆ ಉತ್ತೇಜನ ನೀಡಬೇಕೆಂಬ ಉದ್ದೇಶದಿಂದ ಮಂಗಲ ಸಮ್ಮಂಧ ಅಡ್ಕೊವೊ ನಮ್ಮೆಯನ್ನು ಆಯೋಜಿಸಲಾಗಿದೆ. ಕೊಡವ ಜನಾಂಗದಲ್ಲಿ ಸಮ್ಮಂಧ ಅಡಕುವ ಪದ್ಧತಿ ಮದುವೆಯಲ್ಲಿ ತುಂಬಾ ಮಹತ್ವ ಪಡೆದಿದ್ದು, ಅಲಿಖಿತ ಜಾನಪದ ರೂಪದಲ್ಲಿರುವ ಇಂತಹ ಪದ್ಧತಿ ಇತ್ತೀಚೆಗೆ ಕ್ಷೀಣವಾಗುತ್ತಿದ್ದು, ಇದನ್ನು ಗಮನಿಸಿ ಪ್ರತಿ ಮದುವೆಯಲ್ಲಿ ಸರಿಯಾದ ರೀತಿಯಲ್ಲಿ ಈ ಪದ್ಧತಿ ನಡೆಸುವಂತಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಸ್ಪರ್ಧೆ ಅಲ್ಲ,
ಬದಲಿಗೆ ಕೊಡವ ಸಂಸ್ಕೃತಿಯನ್ನು ಬೆಳೆಸುವ ಹಬ್ಬವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕುಟುಂಬದ ಗೌ. ಕಾರ್ಯದರ್ಶಿ ಕಾಳಿಮಾಡ ರಶಿಕ್ ಕಾವೇರಪ್ಪ, ಸಂಚಾಲಕ ಕಾಳಿಮಾಡ ಪದ್ಮ ಬೆಳ್ಯಪ್ಪ ಹಾಗೂ ತೀರ್ಪುಗಾರರಾದ ಬೊಟ್ಟೋಳಂಡ ಪೊನ್ನಣ್ಣ, ಬೊಳ್ಳೇರ ಪೃಥ್ವಿ, ನೆಲ್ಲಮಾಡ ರಾಜ ತಿಮ್ಮಯ್ಯ, ಕರ್ತಮಾಡ ಹರೀಶ್, ಬೊಳ್ಳಿಮಾಡ ಧನು ದೇವಯ್ಯ ಉಪಸ್ಥಿತರಿದ್ದರು
ಸಮಾರೋಪ ಸಮಾರಂಭದಲ್ಲಿ ಕುಟುಂಬದ ಹಿರಿಯರಾದ ಕಾಳಪ್ಪ, ಶಿವಪ್ಪ, ರಾಣಾ, ಪಾಪುಣಿ, ಗಣೇಶ್, ಪಾರ್ವತಿ,ರಾಮು ಕಾಳಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ಕಾಳಿಮಾಡ ಶಿವಪ್ಪ ಪ್ರಾರ್ಥಿಸಿ, ರೇಷ್ಮಾಪೂಣಚ್ಚ ಮತ್ತು ಸೀಮಾ ಪ್ರಶಾಂತ್ ನಿರೂಪಿಸಿದರು. ಕುಟುಂಬದ ಅಧ್ಯಕ್ಷ ಮೋಟಯ್ಯ ಸ್ವಾಗತಿಸಿ, ಕಾರ್ಯದರ್ಶಿ ರಶೀಕ್ ಕಾವೇರಪ್ಪ ವಂದಿಸಿದರು.
- ಅಣ್ಣೀರ ಹರೀಶ್ ಮಾದಪ್ಪ