ಮಡಿಕೇರಿ, ಅ. ೧೧: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಎನ್.ಎಸ್.ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ಕಡಗದಾಳು ಪ್ರೌಢಶಾಲೆಯಲ್ಲಿ ನಡೆಯಿತು. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ, ಎನ್.ಎಸ್.ಎಸ್ ರಾಷ್ಟç ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾವು ನಮ್ಮತನವನ್ನು ರೂಪಿಸಿಕೊಳ್ಳುವಲ್ಲಿ ರಾಷ್ಟಿçÃಯ ಸೇವಾ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ನನಗಲ್ಲ ನಿನಗೆ ಎನ್ನುವುದು ನಮ್ಮ ಬದುಕಿಗೆ ಬಹಳ ಮುಖ್ಯ, ಈ ಸಂದೇಶವನ್ನು ಬದುಕಿಗೆ ಅಳವಡಿಸಿಕೊಂಡಲ್ಲಿ ಮತ್ತೊಬ್ಬರಿಗೆ ಆದರ್ಶ ವ್ಯಕ್ತಿತ್ವವನ್ನು ನಾವು ಗಳಿಸಿಕೊಳ್ಳಬಹುದು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಿ, ಕ್ಯಾಪಿಟಲ್ ವಿಲೇಜ್ ಮಾಲೀಕರಾದ ಬೊಟ್ಟೋಳಂಡ ದೇವಯ್ಯ ಅವರು ಮಾತನಾಡಿ, ಎನ್.ಎಸ್.ಎಸ್ ಶಿಸ್ತು ಹಾಗೂ ಸ್ವಚ್ಛತೆಗೆ ಹೆಸರುವಾಸಿ, ಎನ್.ಎಸ್.ಎಸ್ ಸ್ವಯಂ ಸೇವಕರು ಸದಾ ಸಾರ್ವಜನಿಕ ಸೇವೆಗೆ ಸಿದ್ಧರಾಗಿರುತ್ತಾರೆ ಎಂದರು.

ಅತಿಥಿ ಪ್ರಮೀಳಾ ಶೆಟ್ಟಿ ಮಾತನಾಡಿ, ಯುವಜನತೆ ಸಮಾಜದ ವಾಸ್ತವತೆಗೆ ತಕ್ಕಂತೆ ಬದಲಾಗಬೇಕು ಹಾಗೂ ಸಾರ್ವಜನಿಕ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಿಡಬೇಕು. ಯುವಜನತೆಯನ್ನು ವಿನೂತನ ಚಟುವಟಿಕೆಗಳಿಗೆ ಒಳಪಡಿಸಬೇಕು ಅನ್ನುವ ಕಾರಣಕ್ಕೆ ಮತ್ತೋರ್ವ ಅತಿಥಿ ಸ್ಮಿತಾ ಚೆಂಗಪ್ಪ ಎನ್.ಎಸ್.ಎಸ್ ನ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸ್ವಚ್ಛತೆಯ ಕುರಿತು ಹೆಚ್ಚಿನ ಗಮನಹರಿಸಬೇಕು, ಸಾರ್ವಜನಿಕರಿಗೆ ಈ ವಿಚಾರವಾಗಿ ಅರಿವು ಮೂಡಿಸಬೇಕು ಎಂದರು.

ಪ್ರೊಫೆಸರ್ ತಿಪ್ಪೇಸ್ವಾಮಿ ಮಾತನಾಡಿ, ರಾಷ್ಟಿçÃಯ ಸೇವಾ ಯೋಜನೆ ಯುವಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯವಾಗುತ್ತದೆ ಎಂದರು.

ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಮಾತನಾಡಿ, ಸಮಾಜದಲ್ಲಿ ಎನ್.ಎಸ್.ಎಸ್‌ಗೆ ಇರುವ ಪ್ರಾಮುಖ್ಯತೆ, ಎನ್.ಎಸ್.ಎಸ್‌ನಿಂದ ವಿದ್ಯಾರ್ಥಿಗಳ ಬದುಕಿಗೆ ಸಿಗುವ ಜೀವನ ಪಾಠ, ಸಮಾಜದಲ್ಲಿ ಅಸಹಾಯಕರಿಗೆ ನೆರವಾಗುವಂತದ್ದು, ಸ್ವಚ್ಛ ಸಮಾಜ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊಫೆಸರ್ ರಾಘವ ಬಿ. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ನಾಯಕತ್ವವನ್ನು ಬೆಳೆಸುವಲ್ಲಿ ಎನ್.ಎಸ್. ಎಸ್ ಪಾತ್ರ ದೊಡ್ಡದು. ಶಿಕ್ಷಣ, ಜ್ಞಾನವನ್ನು ತರಗತಿಯ ಒಳಗೆ ಕಲಿತರೆ ಸಾಮಾಜಿಕ ಜೀವನವನ್ನು ರಾಷ್ಟಿçÃಯ ಸೇವಾ ಯೋಜನೆ ಕಲಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಡಾ. ಶೈಲಶ್ರೀ, ಅಲೋಕ್ ಬಿಜೈ, ಶಿಬಿರಾಧಿಕಾರಿಗಳಾದ ಡಾ. ಪ್ರದೀಪ್ ಭಂಡಾರಿ, ಡಾ. ರೇಣುಶ್ರೀ, ಡಾ. ಸೌಮ್ಯ, ಶರತ್ ಪಿ.ಜಿ, ಮೋನಿಶಾ, ಹಾಜರಿದ್ದರು. ಅಶ್ವಿತಾ ಸ್ವಾಗತಿಸಿ, ಸುಶ್ಮಿತಾ ವಂದಿಸಿ, ಶೃಂಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು.