ಗೋಣಿಕೊಪ್ಪಲು, ಅ. ೧೦: ಶ್ರೀ ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ನಡೆಯುವ ೪೮ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವದ ಕಾರ್ಯಕ್ರಮದ ಪಟ್ಟಿಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಹಾಗೂ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಬಿಡುಗಡೆ ಮಾಡಿದರು.
ಗೋಣಿಕೊಪ್ಪ ದಸರಾ ಜನೋತ್ಸವದ ಯಶಸ್ವಿಗಾಗಿ ಸರ್ಕಾರದಿಂದ ೧ ಕೋಟಿ ಅನುದಾನ ಬಿಡುಗಡೆಯಾಗಿದ್ದು ೧೧ ದಿನಗಳ ಕಾಲ ನಡೆಯುವ ದಸರಾ ಕಾರ್ಯಕ್ರಮದಲ್ಲಿ ನಾಡಿನ ಸರ್ವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಜನೋತ್ಸವವನ್ನು ಸಂಭ್ರಮದಿAದ ಆಚರಿಸುವಂತೆ ಪೊನ್ನಣ್ಣ ಮನವಿ ಮಾಡಿದರು.
ಈ ಸಂದರ್ಭ ಕಾರ್ಯಾಧ್ಯಕ್ಷ ಪ್ರಮೋದ್ ಗಣಪತಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ದಿಲನ್ ಚಂಗಪ್ಪ, ಸಂಚಾಲಕಿ ಮನೆಯಪಂಡ ಶೀಲಾ ಬೋಪಣ್ಣ, ಪದಾಧಿಕಾರಿಗಳಾದ ವರಲಕ್ಷಿö್ಮ, ವಾಮನ, ಚಂದನ ಮಂಜುನಾಥ್, ಚಂದನ್ ಕಾಮತ್, ಎಂ.ಎನ್. ಶಕಿಲ್ ಅಹಮ್ಮದ್, ಕೊಕ್ಕಂಡ ರೋಶನ್, ಬಿ.ಎನ್. ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಗಳ ವಿವರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಕಾವೇರಿ ದಸರಾ ಸಮಿತಿ ಸಹಯೋಗದಲ್ಲಿ ೪೮ ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವ ಅಕ್ಟೋಬರ್ ೧೧ ರಿಂದ ಅ. ೨೧ ರವರೆಗೆ ಜರುಗಲಿದ್ದು, ತಾ. ೧೧ ರಂದು (ಇಂದು) ಬೆಳಿಗ್ಗೆ ೭ ಗಂಟೆಗೆ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ ಮತ್ತು ಸಂಜೆ ಕಾವೇರಿ ಕಲಾ ವೇದಿಕೆ ಉದ್ಘಾಟನೆಯೊಂದಿಗೆ ದಸರಾ ಉದ್ಘಾಟನೆಯಾಗಲಿದೆ. ಪ್ರತಿದಿನ ಬೆಳಗ್ಗೆ ೬.೩೦ ರಿಂದ ೮, ಸಂಜೆ ೬.೩೦ ರಿಂದ ೭.೩೦ ರವರೆಗೆ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿಗೆ ಪೂಜೆ ನೆರವೇರಲಿದೆ.
ಬೆಳಗ್ಗೆ ೭ ಗಂಟೆಗೆ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ದೇವಿ ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಬೆಳಗ್ಗೆ ೧೦.೩೦ ಗಂಟೆಗೆ ಉಮಾಮಹೇಶ್ವರಿ ದೇವಸ್ಥಾನ ಆವರಣದಿಂದ ಬಸ್ ನಿಲ್ದಾಣದವರೆಗೆ ಹುಲಿವೇಷ ಮೆರವಣಿಗೆ ನಡೆಯಲಿದೆ.
ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಿರುವ ಕಾವೇರಿ ಕಲಾ ವೇದಿಕೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾತ್ರಿ ೮ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಪಿ. ಎಂ. ನರೇಂದ್ರ ಸ್ವಾಮಿ ಉದ್ಘಾಟಿಸಲಿದ್ದಾರೆ. ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಸಂಸದ ಯದುವೀರ್ ಒಡೆಯರ್, ಮಡಿಕೆೆÃರಿ ಶಾಸಕ ಡಾ. ಮಂಥರ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಸೇರಿದಂತೆ ದಸರಾ ಸಮಿತಿ ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಭಾಗವಹಿಸಲಿದ್ದಾರೆ.
ತಾ. ೧೧ ರಂದು ಸಂಜೆ ೬.೩೦ ಗಂಟೆಗೆ ಸ್ಥಳಿಯ ಕಾರ್ಯಕ್ರಮದಲ್ಲಿ ಸೈಕ್ಲೋನ್ ಅಕಾಡೆಮಿಯ ಡ್ಯಾನ್ಸ್ ಧಮಾಕ, ಸುವೃತ ನಾಟ್ಯಾಲಯ ವೈವಿದ್ಯಮಯ ನೃತ್ಯ ವೈಭವ ನೆರವೇರಲಿದೆ.
ತಾ. ೧೨ ರಂದು ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಆಟೋಟ, ಸಾಂಸ್ಕೃತಿಕ ಸ್ಪರ್ಧೆ ಬೆಳಗ್ಗೆ ೧೦ ಗಂಟೆಗೆ ನಡೆಯಲಿದೆ. ಸಂಜೆ ೬.೩೦ ರಿಂದ ಜಿಶಾ ಹರೀಶ್ ತಂಡ ನೃತ್ಯ ಪ್ರದರ್ಶನ, ಚೈತನ್ಯ ತಂಡ ತಿರುವಾದಿರ ನೃತ್ಯ, ಶ್ರೀ ಲಕ್ಷಿö್ಮ ಮಹಿಳಾ ವಿಭಾಗದ ಶಾಸ್ತಿçಯ ನೃತ್ಯ, ೭.೩೦ ಕ್ಕೆ ಸಭಾ ಕಾರ್ಯಕ್ರಮ, ೮.೩೦ ರಿಂದ ಭಾರ್ಗವಿ ಇವೆಂಟ್ಸ್ ಅವರ ನೃತ್ಯ ಸೌರಭ ನಡೆಯಲಿದೆ.
ತಾ. ೧೩ ರಂದು ಸಂಜೆ ೬.೩೦ ಕ್ಕೆ ಸುರಕ್ಷಾ ಹಾಗೂ ಅಭಿಜ್ಞ ವೈಲಾಯ ತಂಡದ ಭಾಗವತಿಕೆ ದೇವರ ನಾಮ, ಶಾಸ್ತಿçÃಯ ನೃತ್ಯ, ೭.೩೦ ಕ್ಕೆ ಯಾಹವಿ ಡಾನ್ಸ್ ಅಕಾಡೆಮಿಯ ನೃತ್ಯ ಕಾರ್ಯಕ್ರಮ, ೮.೩೦ ಕ್ಕೆ ಅರವಿಂದ ಬೋಳಾರ್ ನೇತೃತ್ವದಲ್ಲಿ ಲಕುಮಿ ತಂಡದ ಕುಸೆಲ್ದ ಕಲಾವದೆರ್ ಅವರ ಆಂಟಿ ಮತ್ತು ಅಂಕಲ್ ಹಾಸ್ಯ ನಾಟಕ ಇರಲಿದೆ.
ತಾ. ೧೪ ರಂದು ಬೆಳಗ್ಗೆ ಮಹಿಳಾ ದಸರಾ ನಡೆಯಲಿದೆ. ಸಂಜೆ ೬.೩೦ ಗಂಟೆಗೆ ಕಾವೇರಿ ಕಾಲೇಜು ತಂಡದ ನೃತ್ಯ, ಎಸ್‌ಎನ್‌ಡಿಪಿ ತಂಡದ ತಿರುವಾದಿರ ನೃತ್ಯ, ಕೂರ್ಗ್ ವಿಂಗ್ಸ್ ಆಫ್ ಪ್ಯಾಷನ್ ವತಿಯಿಂದ ಫ್ಯೂಷನ್ ನೃತ್ಯ, ರಾತ್ರಿ ೮.೩೦ ಕ್ಕೆ ನಾಣಚ್ಚಿ ಗಿರಿಜನ ಸಮಗ್ರ ಅಭಿವೃದ್ದಿ ಕಲಾ ಸಂಸ್ಥೆಯ ಜೇನು ಕುರುಬರ ಬುಡಕಟ್ಟು ಹಾಡು ಮತ್ತು ನೃತ್ಯ, ಕೊಡಗು ನೈಟ್ಸ್ ತಂಡದ ಹಾಡುಗಾರಿಕೆ ಇರಲಿದೆ.
ತಾ. ೧೫ ರಂದು ಬೆಳಗ್ಗೆ ೧೦.೩೦ ಗಂಟೆಗೆ ಗೋಣಿಕೊಪ್ಪ ಪ್ರಾಥಮಿಕ ಶಾಲಾ ಆವರಣದಲ್ಲಿ ಪೊನ್ನಂಪೇಟೆ ರೆಡ್‌ಕ್ರಾಸ್ ಸಂಸ್ಥೆಯ ರಕ್ತದಾನ ಶಿಬಿರ, ಸಂಜೆ ೬.೩೦ ಕ್ಕೆ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಜನಪದ ಗೀತೆ, ಭಾವಗೀತೆ, ರಂಗಗೀತೆ, ಕುಶಾಲನಗರ ಅಭಿತ ತಂಡದ ನೃತ್ಯ ವೈಭವ, ನಾದ ನೃತ್ಯ ನಾಟ್ಯ ಶಾಲೆಯ ನೃತ್ಯ ಕಾರ್ಯಕ್ರಮ, ೭.೩೦ ಕ್ಕೆ ಜಗನ್ಮೋಹನ ನಾಟ್ಯಾಲಯದ ಶಾಸ್ತಿçÃಯ ನೃತ್ಯ, ೮.೩೦ ಕ್ಕೆ ಮಂಗಳೂರಿನ ವಜ್ರದಂತ ಕಲಾವಿದೆರ್ ಕುಡ್ಲ ತಂಡದ ಕಾಂತಾರ ಖ್ಯಾತಿಯ ಪಾತ್ರಧಾರಿ ಸ್ವರಾಜ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಡಗಗ್ಗರ ನಾಟಕ ನಡೆಯಲಿದೆ.
ತಾ. ೧೬ ರಂದು ಬೆಳಗ್ಗೆ ೧೦ ಗಂಟೆಗೆ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕವಿಗೋಷ್ಠಿ, ಸಂಜೆ ೬.೩೦ ಕ್ಕೆ ಕುಶಾಲನಗರ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ, ೭.೩೦ ಕ್ಕೆ ಹೆಗ್ಗಳ ನಾಟ್ಯ ನಂದಿನಿ ತಂಡದ ನೃತ್ಯ, ೮.೩೦ ಕ್ಕೆ ಚಲನ ಚಿತ್ರ ಹಿನ್ನೆಲೆ ಗಾಯಕಿ ಡಾ. ಶಮಿತ ಮಲ್ನಾಡ್ ಅವರಿಂದ ಹಾಡುಗಾರಿಕೆ, ಜನನಿ ಮಹಿಳಾ ಬ್ಯಾಂಡ್ ಸಂಗೀತ ರಸ ಸಂಜೆ ನಡೆಯಲಿದೆ.
ತಾ. ೧೭ ರಂದು ಶಿವಾಜಿ ಯುವಸೇನೆ ವತಿಯಿಂದ ಕಬಡ್ಡಿ, ಸಂಜೆ ೬.೩೦ ಕ್ಕೆ ಐಕಿಯಾ ಏಮ್ ಹೈ ಡಾನ್ಸ್ ಸ್ಟುಡೆಯೋದಿಂದ ವೆಸ್ಟರ್ನ್ ಡಾನ್ಸ್, ಇಂಟೋಪೀಸ್ ಡ್ಯಾನ್ಸ್ ತಂಡ ನೃತ್ಯ, ಸುಳು ಬೆಳ್ಳಾರೆ ತಂಡದ ಡ್ಯಾನ್ಸ್ ಬೀಟ್ಸ್, ೮.೩೦ ಕ್ಕೆ ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ತಂಡದ ಜಾನಪದ ಸಂಜೆ, ಗಂಗಾವತಿ ಪ್ರಾಣೇಶ್ ತಂಡದ ಕಾಮಿಡಿ ನಡೆಯಲಿದೆ.
ತಾ. ೧೮ ರಂದು ಕಬಡ್ಡಿ ಪಂದ್ಯಾಟ, ಸಂಜೆ ೬.೩೦ ಕ್ಕೆ ಹಿಪ್ ಹಾಪ್, ರ‍್ಯಾಪ್ ಹಾಡು, ಅಶ್ವಿನ್, ನಾಗರಾಜು ತಂಡದ ಗೀತ ಗಾಯನ, ೭.೩೦ ಕ್ಕೆ ಸಭಾ ಕಾರ್ಯಕ್ರಮ, ೮.೩೦ ಕ್ಕೆ ಸಂಚಿತ್ ಹೆಗಡೆ ನೈಟ್ಸ್ ನಡೆಯಲಿದೆ.
ತಾ. ೧೯ ರಂದು ಯುವ ದಸರಾ ಪ್ರಯುಕ್ತ ಬೆಳಿಗ್ಗೆ ಅಥೆನಾ ಟರ್ಫ್ ಮೈದಾನದಲ್ಲಿ ಫುಟ್ಬಾಲ್ ಟೂರ್ನಿಗೆ ಚಾಲನೆ, ಸೈಕಲ್ ರೇಸ್, ಬೈಕ್ ಸ್ಟಂಟ್, ಸಂಜೆ ೬.೩೦ ಕ್ಕೆ ಯುವ ದಸರಾ ನೃತ್ಯ ವೈಭವ, ರಾಜ್ಯ ವೃತ್ತಿಪರ ನೃತ್ಯ ಸ್ಪರ್ಧೆ ಹಾಗೂ ಯುವ ಜನೋತ್ಸವ ಅಂತರ ಕಾಲೇಜು ನೃತ್ಯ ಸ್ಪರ್ಧೆ, ೭.೩೦ ಕ್ಕೆ ಸಭಾ ಕಾರ್ಯಕ್ರಮ, ೮.೩೦ ಕ್ಕೆ ಯುವ ದಸರಾ ನೃತ್ಯ ಸ್ಪರ್ಧೆ ನಡೆಯಲಿದೆ.
ತಾ. ೨೦ ರಂದು ಆಯುಧ ಪೂಜೆ, ಸಂಜೆ ೬.೩೦ ಕ್ಕೆ ಟೀಂ ಅಶೋಕ ತಂಡದ ಡೊಳ್ಳು ಕುಣಿತ, ತಮಟೆ, ನಂಜನಗೂಡು ತಂಡದ ಜನಪದ ಕುಣಿತ ಜುಗಲ್ ಬಂದಿ ನಡೆಯಲಿದೆ. ಸಭಾ ಕಾರ್ಯಕ್ರಮ ನಂತರ ಪ್ರಗತಿ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಜೇನ ದನಿಯೋಳೆ ಹಾಡಿನ ಖ್ಯಾತಿಯ ಜಸ್ ಕರಣ್ ಹಾಗೂ ಸರಿಗಮಪ ಖ್ಯಾತಿಯ ಅಂಕಿತ ಕುಂಡು ತಂಡದ ರಸಸಂಜೆ ನಡೆಯಲಿದೆ.
ತಾ. ೨೧ ರಂದು ಮಧ್ಯಾಹ್ನ ೨ ಗಂಟೆಗೆ ಆರ್‌ಎಂಸಿ ಆವರಣದಿಂದ ದಸರಾ ನಾಡ ಹಬ್ಬ ಸಮಿತಿ ವತಿಯಿಂದ ಸ್ತಬ್ಧಚಿತ್ರ ಮೆರವಣಿಗೆ, ರಾತ್ರಿ ೭ ಗಂಟೆಗೆ ದಶಮಂಟಪಗಳ ಶೋಭಾಯಾತ್ರೆ, ಸಂಜೆ ೬.೩೦ ರಿಂದ ರಿಫ್ಲೆಕ್ಷನ್ ತಂಡದಿAದ ನೃತ್ಯ ಸುನಾಮಿ, ನಾಟ್ಯಾಂಜಲಿ ಶಾಲೆಯ ನೃತ್ಯ, ಪಿವಿಆರ್ ಎಂಟರ್‌ಟೈನರ್ಸ್ ವತಿಯಿಂದ ಆಕೆಸ್ಟಾç ಹಾಗೂ ನೃತ್ಯ ಕಾರ್ಯಕ್ರಮ ಇರಲಿದೆ.