ಮಡಿಕೇರಿ, ಅ. ೧೦: ವೀರಾಜಪೇಟೆ ಶ್ರೀ ಕಾವೇರಿ ಆಶ್ರಮದಲ್ಲಿ ನವರಾತ್ರಿ ಉತ್ಸವ ಹಾಗೂ ಶ್ರೀ ಕಾವೇರಿ ಪೂಜೆ ಕಾರ್ಯಕ್ರಮಗಳು ನಡೆಯಲಿವೆ.

ತಾ.೧೧ ರಿಂದ ತಾ.೨೧ ರವರೆಗೆ ಶ್ರೀ ದೇವಿ ಪೂಜೆ, ಭಜನೆ, ಶ್ರೀ ಲಲಿತಾ ಸಹಸ್ರನಾಮಾರ್ಚನೆ, ದೇವೀ ಪಾರಾಯಣದೊಂದಿಗೆ ಆಚರಿಸಲಾಗುವುದು. ದೇವೀ ಪೂಜೆ ಬೆಳಿಗ್ಗೆ ೧೦:೩೦ರಿಂದ ಮಧ್ಯಾಹ್ನ ೧೨:೩೦ ರವರೆಗೆ ವೀರಾಜಪೇಟೆ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಪ್ರಮೋದ್ ಭಟ್ ಅವರ ನೇತೃತ್ವದಲ್ಲಿ ನಡೆಯಲಿದೆ.

ತಾ.೧೩ ರಂದು ಬೆಳಿಗ್ಗೆ ೯ ಗಂಟೆಗೆ ಪ್ರಧಾನ ಅರ್ಚಕ ಪ್ರಮೋದ್ ಭಟ್ ಅವರ ನೇತೃತ್ವದಲ್ಲಿ ಚಂಡಿಕಾ ಹೋಮ ನೆರವೇರಲಿದೆ. ತಾ.೧೯ ರಂದು ಬೆಳಿಗ್ಗೆ ೭ ಗಂಟೆಗೆ ಶ್ರೀ ಕಾವೇರಿ ತೀರ್ಥ ಪೂಜೆ ನಡೆಯಲಿದೆ. ನಂತರ ೧೦ ಗಂಟೆಗೆ ಚೇಂದಿರ ನಿರ್ಮಲ ಬೋಪಣ್ಣ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನೆರವೇರಲಿದೆ. ಬಳಿಕ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಲಿದೆ.