ಕೂಡಿಗೆ, ಅ. ೧೦: ಕೂಡಿಗೆ ಶ್ರೀ ದಂಡಿನಮ್ಮ ತಾಯಿ ನವರಾತ್ರಿ ಪೂಜಾ ಸೇವಾ ಸಮಿತಿ ವತಿಯಿಂದ ನವರಾತ್ರಿ ಪೂಜೋತ್ಸವ ಕಾರ್ಯಕ್ರಮವು ತಾ. ೧೧ ರಿಂದ ೧೯ ರವರೆಗೆ ನಡೆಯಲಿದೆ. ಪ್ರತಿದಿನ ರಾತ್ರಿ ೭ ಗಂಟೆಗೆ ದೇವಿಗೆ ಅಭಿಷೇಕ ಮತ್ತು ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿವೆ. ತಾ. ೧೬ ರಂದು ಹೋಮ ಹವನ, ದೇವಿಗೆ ಅಭಿಷೇಕ ಮತ್ತು ವಿವಿಧ ಪೂಜಾ ಕೈಂಕರ್ಯಗಳು ನಡೆದು, ಮಧ್ಯಾಹ್ನ ಅನ್ನಸಂರ್ತಪಣೆ, ಸಂಜೆ ದೇವಿಗೆ ಬಾಗಿನ ಸಮರ್ಪಣೆ ಸೇರಿದಂತೆ ಹಲವು ಪೂಜಾ ವಿಧಿವಿಧಾನಗಳು ನಡೆಯಲಿವೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.