ಶನಿವಾರಸAತೆ, ಅ. ೯: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯ ಅರಿವು ಕೇಂದ್ರದಲ್ಲಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಸೆಪ್ಟೆಂಬರ್ ತಿಂಗಳ ಚಟುವಟಿಕೆಗಳ ಸಂಭ್ರಮ ಕಾರ್ಯಕ್ರಮ ನಡೆಯಿತು.

ಶಾಲಾ ವಿದ್ಯಾರ್ಥಿಗಳು ಅರಿವು ಕೇಂದ್ರದ ಸಭಾಂಗಣದಲ್ಲಿ ಸಂಭ್ರಮದಿAದ ಪಾಲ್ಗೊಂಡಿದ್ದರು. ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ದಿನದ ಮಹತ್ವದ ಕುರಿತು ಧನ್ಯವಾದ ಕಾರ್ಡ್ಗಳನ್ನು ತಯಾರಿಸುವ ಚಟುವಟಿಕೆ ನಡೆಯಿತು.

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆ ದಿನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಇಂಜಿನಿಯರ್ ದಿನಾಚರಣೆ ಬಗ್ಗೆ ಕೌಶಲ್ಯದ ಅರಿವು, ಅಂತರರಾಷ್ಟಿçÃಯ ಅಜ್ಜ-ಅಜ್ಜಿಯರ ದಿನಾಚರಣೆ ಪ್ರಯುಕ್ತ ಹಿರಿಯರ ಮಹತ್ವದ ಬಗ್ಗೆಯೂ ತಿಳುವಳಿಕೆ ನೀಡಲಾಯಿತು. ಜನಪದ ಗೀತೆ, ಕಥೆ, ಪೌರಾಣಿಕ ಕತೆ ಹೇಳಿಕೊಡುವ ಹಾಗೂ ಕೌಶಲ್ಯ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ಹೇಳಿಕೊಡಲಾಯಿತು. ಹಿರಿಯ ನಾಗರಿಕರಾದ ಕೆಂಚಮ್ಮ, ಶಾರದಮ್ಮ, ಗಂಗಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಜನಪದ ಗೀತೆಗಳು ಹಾಗೂ ಪೌರಾಣಿಕ ಕತೆಗಳನ್ನು ಹೇಳಿಕೊಟ್ಟು ರಂಜಿಸಿದರು.

ಗ್ರAಥಾಲಯ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ ಮಾರ್ಗದರ್ಶನದಲ್ಲಿ ಸೆಪ್ಟೆಂಬರ್ ತಿಂಗಳ ಚಟುವಟಿಕೆಗಳ ಕಾರ್ಯಕ್ರಮಗಳು ಸಂಭ್ರಮದಿAದ ನಡೆದವು.