ಮಡಿಕೇರಿ, ಅ. ೯: ತಲಕಾವೇರಿ - ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಕಗೊಳಿಸಿ ರಾಜ್ಯ ಧಾರ್ಮಿಕ ಪರಿಷತ್ ಮತ್ತು ಧಾರ್ಮಿಕ ದತ್ತಿಗಳ ಇಲಾಖೆ ಆದೇಶ ಹೊರಡಿಸಿದೆ.
ಸಮಿತಿಗೆ ಸದಸ್ಯರಾಗಿ ದೇವಾಲಯಗಳ ಪರವಾಗಿ ಓರ್ವ ಅರ್ಚಕರು ಇರುತ್ತಾರೆ. ಉಳಿದಂತೆ ತಣ್ಣಿಮಾನಿಯ ಎಂ.ಸಿ. ಲಕ್ಷö್ಮಣ, ಭಾಗಮಂಡಲದ ಕೆ.ಬಿ. ಕಾಂಚನ, ತಣ್ಣಿಮಾನಿಯ ಡಿ.ಎನ್. ಹರ್ಷ, ಹೆಬ್ಬಟ್ಟಗೇರಿಯ ಕೆ.ಎ. ತಿಮ್ಮಯ್ಯ, ಗೋಣಿಕೊಪ್ಪ ಮುತ್ತಣ್ಣ ಲೇಔಟ್‌ನ ಸಿ.ಎ. ಅಯ್ಯಣ್ಣ, ಮಾಯಮುಡಿಯ ಬಿ.ಎನ್. ಪ್ರಥ್ಯು, ಕುಂದಚೇರಿಯ ಕೆದಂಬಾಡಿ ಜೆ. ರಘುನಾಥ ಇವರುಗಳನ್ನು ಮುಂದಿನ ಮೂರು ವರ್ಷದ ಅವಧಿಗೆ ನೇಮಕ ಮಾಡಲಾಗಿದೆ.
ವ್ಯವಸ್ಥಾಪನಾ ಸಮಿತಿಯನ್ನು ರಚಿಸಲು ಆಸಕ್ತ ಭಕ್ತಾದಿಗಳು ಮತ್ತು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸಲಾಗಿದ್ದ ಪ್ರಕಟಣೆ ಸಂಬAಧ ನಿಗಧಿತ ಅವಧಿಯೊಳಗೆ ೩೮ ಅರ್ಜಿಗಳು ಸ್ವೀಕೃತವಾಗಿದ್ದವು. ಒಟ್ಟು ೩೮ ಅರ್ಜಿಗಳ, ಅರ್ಜಿದಾರರುಗಳ ಅರ್ಹತೆ, ಅನರ್ಹತೆ, ವಯಸ್ಸು ಮತ್ತು ಪೂರ್ವಾಪರಗಳ ಬಗ್ಗೆ ಸತ್ಯಾಪನಾ ವರದಿಯನ್ನು ಕಳುಹಿಸಿಕೊಡಲು ಸಂಬAಧಪಟ್ಟ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೋರಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಅರ್ಜಿಗಳ, ಅರ್ಜಿದಾರರ ಬಗ್ಗೆ ಸತ್ಯಾಪನೆ ಮಾಡಿ ವರದಿ ಸಲ್ಲಿಸಿದ್ದರು.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಧಾಯ ದತ್ತಿಗಳ ನಿಯಮಗಳು ೨೦೦೨ ನಿಯಮ ೨೨ ರ ಅನ್ವಯ ತಲಕಾವೇರಿ - ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಪ್ರಸ್ತಾವನೆಯನ್ನು ತಾ. ೧.೧೦.೨೦೨೬ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್‌ನ ಸಭೆಯ ತೀರ್ಮಾನಕ್ಕೆ ಮಂಡಿಸಲಾಗಿದ್ದು, ಸಭೆಯಲ್ಲಿ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲು ತೀರ್ಮಾನವಾಗಿತ್ತು.
ತಾ. ೧೭.೧೦.೨೦೨೬ ರಂದು ಕಾವೇರಿ ತೀರ್ಥ್ಭೋದ್ಭವ ಸಂಬAಧ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವುದು ತುಂಬಾ ಅವಶ್ಯಕತೆ ಇರುವುದನ್ನು ಮನಗಂಡು ೧.೧೦.೨೦೨೬ ರಂದು ನಡೆದ ಧಾರ್ಮಿಕ ಪರಿಷತ್‌ನ ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಿಸಲಾಗಿದೆ.
ಒಟ್ಟು ೯ ಸದಸ್ಯರ ಪೈಕಿ ೮ ಸದಸ್ಯರನ್ನು ನೇಮಕ ಮಾಡಲಾಗಿದ್ದು, ನೆಲಜಿಯ ದೇಚಮ್ಮ ಎಂಬವರ ಹೆಸರು ಸದಸ್ಯರ ಪಟ್ಟಿಯಲ್ಲಿ ಸದ್ಯದಲ್ಲಿಯೇ ಪ್ರಕಟಗೊಳ್ಳಲಿದೆ ಎಂದು ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ.