ಮಡಿಕೇರಿ, ಅ. ೯: ಕಂಚಿಕಾಮಾಕ್ಷಿ ದೇವಾಲಯ ಆಡಳಿತ ಮಂಡಳಿಯ ಪ್ರಮುಖ ಹಾಗೂ ಪ್ರಧಾನ ಅರ್ಚಕರಾದ ಮಧುರಯ್ಯ ಅವರ ಪತ್ನಿ ರಾಜೇಶ್ವರಿ (೭೦) ಅವರು ತಾ. ೯ ರಂದು ನಿಧನರಾದರು.

ಇವರ ನಿಧನದಿಂದ ಶ್ರೀ ಕೋಟೆ ಮಾರಿಯಮ್ಮ ದೇವಾಲಯ, ಶ್ರೀ ಕಂಚಿಕಾಮಾಕ್ಷಿ ದೇವಾಲಯ ಹಾಗೂ ಶ್ರೀ ದಂಡಿನ ಮಾರಿಯಮ್ಮ ದೇವಾಲಯಗಳ ಕರಗ ವ್ರತಧಾರಿಗಳಿಗೆ ಸೂತಕ ಅನುಸರಿಸಬೇಕಾದ ಅಗತ್ಯ ಬಂದಿದೆ.

ಹಲವು ದಶಕಗಳಿಂದ ದಂಡಿನ ಮಾರಿಯಮ್ಮ ದೇವಾಲಯದ ಕರಗ ವ್ರತಧಾರಿಯಾಗಿ ಸೇವೆ ಸಲ್ಲಿಸುತ್ತಿರುವ ಉಮೇಶ್, ಕಂಚಿ ಕಾಮಾಕ್ಷಿ ದೇವಾಲಯದ ವ್ರತಧಾರಿ ಉಮೇಶ್ ಹಾಗೂ ಕೋಟೆ ಮಾರಿಯಮ್ಮ ದೇವಾಲಯದ ವ್ರತಧಾರಿ ಅನಿಶ್ ಇವರುಗಳು ತಾ. ೧೧ ರಂದು ಆರಂಭವಾಗುವ ಕರಗ ಉತ್ಸವದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಬದಲಿ ವ್ಯವಸ್ಥೆ ಕುರಿತು ತಾ. ೧೦ ರಂದು ತುರ್ತು ಸಭೆ ನಡೆಸಲಾಗುವುದೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ವ್ರತಧಾರಿ ಚಾಮಿ ಅವರು ಈ ಬಾರಿಯೂ ಕರಗವನ್ನೂ ಮುನ್ನಡೆಸಲಿದ್ದಾರೆ.