ಇತ್ತೀಚಿನ ಕೆಲವು ವರ್ಷ ಗಳಲ್ಲಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಸಾಮಾನ್ಯ ವಾಗಿ ಒಂದು ಸಮಸ್ಯೆಯನ್ನು ಹೇಳಿಕೊಂಡು ಬರುತ್ತಾರೆ, ಅದರಲ್ಲಿ ಮುಖ್ಯವಾಗಿ ಹಿಂದೆ ಬಹಳ ಚೆನ್ನಾಗಿ ಓದುತ್ತಿದ್ದವನು ಇತ್ತೀಚೆಗೆ ಓದುವುದನ್ನು, ಬರೆಯುವುದನ್ನು ಕಮ್ಮಿ ಮಾಡಿದ್ದಾನೆ ಮತ್ತು ಯಾವಾಗಲೂ ಮೊಬೈಲ್ ಮುಂದೆ ಅಥವಾ ಟಿವಿಯನ್ನು ನೋಡುತ್ತಾ ಕುಳಿತಿರುತ್ತಾನೆ. ಹಾಗೂ ಇದರಿಂದಾಗಿ ಶಾಲೆಯಲ್ಲಿ ಇವನು ಕಲಿಕೆಯಲ್ಲಿ ಹಿಂದುಳಿದಿದ್ದಾನೆ ಎಂದು ಕೊರಗುತ್ತಿರುತ್ತಾರೆ.

ಇದೇ ರೀತಿಯ ಉದಾಹರಣೆಯೊಂದಿಗೆ ಇತ್ತೀಚೆಗೆ ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ದಾಖಲಾಗಿ ಓದಿನಲ್ಲಿ ಮುಂಚೂಣಿಯಲ್ಲಿ ಇದ್ದ, ಆದರೆ ಕ್ರಮೇಣ ಕಲಿಕೆಯಲ್ಲಿ ಹಿಂದುಳಿದು ಶಿಕ್ಷಕರಿಗೆ ಹಾಗೂ ಪೋಷಕರಿಗೆ ಚಿಂತೆಗೆ ಕಾರಣನಾಗಿದ್ದ ಒಬ್ಬ ಹುಡುಗನನ್ನು ಆತನ ಪೋಷಕರು ಕರೆದುಕೊಂಡು ಬರುತ್ತಾರೆ.

ಮೇಲ್ನೋಟಕ್ಕೆ ಶಾರೀರಿಕವಾಗಿ ಆರೋಗ್ಯವಂತನಾಗಿ ಕಂಡರೂ ಸಹ, ಆತನ ಮುಖಚರ್ಯೆಯಲ್ಲಿ ಯಾವುದೋ ಗೊಂದಲವಿರುವAತೆ ಮತ್ತು ಆತನ ಚಲನವಲನಗಳಲ್ಲಿ ಮನಸ್ಸಿನಲ್ಲಿ ಯಾವುದೋ ಆತಂಕ ಇರಬಹುದು ಎಂದು ಅನಿಸುತ್ತದೆ.

ಈ ವಿಚಾರವಾಗಿ ಪೋಷಕರಲ್ಲಿ ವಿಚಾರಿಸಿದಾಗ, ಅವರು ನಮ್ಮ ಮಗನಿಗೆ ಯಾವುದು ತೊಂದರೆ ಇಲ್ಲ ಸರ್. ಅವನನ್ನು, ಅವನು ಕೇಳಿದ ಶಾಲೆಗೆ ಸೇರಿಸಿದ್ದೇವೆ. ಮತ್ತು ಅವನು ಯಾವುದೇ ವಸ್ತುವನ್ನು ಕೇಳುವ ಮುಂಚೆಯೇ ನಾವು ಅವನಿಗೆ ಎಲ್ಲವನ್ನು ಕೊಡಿಸುತ್ತೇವೆ.

ಶಿಕ್ಷಕರು ಸಹ ಚೆನ್ನಾಗಿ ಪಾಠ ಮಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇವನ ಮೇಲೆ ಒಂದು ಆರೋಪ ಬಂದಿದೆ. ಇವನು ಶಿಕ್ಷಕರು ಶಾಲೆಯಲ್ಲಿ ಪಾಠ ಮಾಡುವಾಗ ಯಾವಾಗಲೂ ಹಿಂದೆ ತಿರುಗಿ ನೋಡುತ್ತಿರುತ್ತಾನೆ, ಮತ್ತು ಶಿಕ್ಷಕರು ಹೇಳಿದ ಪಾಠದ ಕಡೆಗೆ ಗಮನವನ್ನು ಹರಿಸುವುದಿಲ್ಲ. ಹಾಗಾಗಿ ಹೇಳುವ ವಿಚಾರಗಳು ಇವನಿಗೆ ಅರ್ಥವಾಗದೆ ಮನೆಯಲ್ಲೂ ಸಹ ಓದಲು, ಬರೆಯಲು ಕಷ್ಟ ಪಡುತ್ತಿರುತ್ತಾನೆ. ಏನು ಸಮಸ್ಯೆ ಎಂದು ವಿಚಾರಿಸಿದರೆ ಸುಮ್ಮನೆ ಮಂಕಾಗಿ ಕೂರುತ್ತಾನೆಯೇ ವಿನಃ ಯಾವೊಂದು ವಿಚಾರವನ್ನು ಹೇಳಿಕೊಳ್ಳುತ್ತಿಲ್ಲ. ಹಾಗಾಗಿ ನಮಗೆ ಈತನ ವಿದ್ಯಾಭ್ಯಾಸದ ಬಗ್ಗೆ ತುಂಬಾ ಯೋಚನೆಯಾಗಿದೆ.

ದಯವಿಟ್ಟು ಏನಾದರೂ ಚಿಕಿತ್ಸೆಯನ್ನು ಮಾಡಿ ಈತ ಕಲಿಕೆಯಲ್ಲಿ ಮುಂದುವರೆಯುವAತೆ ಮಾಡಿ. ಮತ್ತು ಆತನ ಮನಸ್ಸಿನಲ್ಲಿ ಏನು ವಿಚಾರಗಳು ಇದೆ ಎಂದು ಪರೀಕ್ಷೆ ಮಾಡಿ ಎಂದು ವಿನಂತಿಸಿಕೊAಡರು.

ಎಲ್ಲರ ಎದುರಿಗೆ ಮಾತನಾಡಲು ಸಂಕೋಚ ಪಟ್ಟಂತೆ ಕಂಡ ಹುಡುಗ ಎಷ್ಟು ಹೊತ್ತು ಪ್ರಯತ್ನ ಪಟ್ಟರೂ ಮೌನವಾಗಿಯೇ ಇದ್ದ.

ಆತನ ಜೊತೆಗೆ ಏಕಾಂಗಿಯಾಗಿ ಮಾತನಾಡಬೇಕಾಗಬಹುದು ಎಂದು ಅನ್ನಿಸಿ, ಬೇರೆಯವರನ್ನೆಲ್ಲ ಹೊರಗೆ ಕಳುಹಿಸಿ ವಿಚಾರಿಸಿದಾಗ, ಆತ ಗಳಗಳನೆ ಅಳಲು ಶುರು ಮಾಡಿದ.

ಸರ್ ನಾನು ನನ್ನ ಇಷ್ಟದಂತೆ ಶಾಲೆಯನ್ನು ಸೇರಿದ್ದೇನೆ, ಪ್ರಾರಂಭದಲ್ಲಿ ನನಗೆ ಅಲ್ಲಿ ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತಿತ್ತು, ಆದರೆ ಕಲಿಕೆಯ ವಿಚಾರಗಳು ನನಗೆ ಇಷ್ಟವಾಗಿದ್ದವು. ಆದರೆ ಈಗ ಒಂದೆರಡು ತಿಂಗಳಿನಿAದ ನಾನು ಶಾಲೆಯಲ್ಲಿ ಕೂರುವ ಸ್ಥಳವನ್ನು ಬದಲಾಯಿಸಿದ್ದಾರೆ, ಶಿಕ್ಷಕರು ಬೋರ್ಡ್ ಕಡೆ ತಿರುಗಿ ಪಾಠ ಮಾಡಬೇಕಾದರೆ ನನ್ನ ಹಿಂದೆ ಕುಳಿತಿರುವ ಹುಡುಗರು ನನ್ನ ತಲೆಗೆ ಹೊಡೆಯುತ್ತಾರೆ ಮತ್ತು ನಾನು ಅವರು ಯಾರೆಂದು ತಿರುಗಿ ನೋಡುವ ಸಂದರ್ಭದಲ್ಲಿ ಶಿಕ್ಷಕರು ನಮ್ಮ ಕಡೆಗೆ ತಿರುಗುತ್ತಾರೆ.

ಅಂತಹ ಸನ್ನಿವೇಶದಲ್ಲಿ ನಾನು ಹಿಂದೆ ತಿರುಗಿರುವುದನ್ನು ನೋಡಿ ಅವರು ಕೋಪಿಸಿಕೊಂಡು, ನನ್ನನ್ನು ಎದ್ದು ನಿಲ್ಲಿಸಿ, ಒಂದೆರಡು ಬಾರಿ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ಆಗ ನನ್ನ ಹಿಂದೆ ಕುಳಿತಿದ್ದವರು ನನ್ನನ್ನು ಅಣಕಿಸಿ ನಗುತ್ತಾರೆ. ಈ ವಿಚಾರವನ್ನು ಶಾಲೆಯಲ್ಲಿ ಅಥವಾ ಮನೆಯಲ್ಲಿ ಹೇಳಿದರೆ ನಿನಗೆ ಇನ್ನೂ ಸಮಸ್ಯೆ ಮಾಡುತ್ತೇವೆ ಎಂದು ಹೆದರಿಸುತ್ತಾರೆ.

ಹಾಗಾಗಿ ನಾನು ಇದನ್ನು ಯಾರ ಬಳಿಯೂ ಹೇಳಲು ಸಾಧ್ಯವಾಗಿಲ್ಲ ಇತ್ತೀಚೆಗಂತೂ ಅವರ ಪುಂಡಾಟ ಜಾಸ್ತಿಯಾಗಿದೆ. ನಾನು ಹಲವು ಬಾರಿ ಬೆಂಚ್ ಬದಲಿಸಿದರೂ ಸಹ, ಅವರು ನನ್ನ ಹಿಂದಿನ ಬೆಂಚಿಗೆ ಬಂದು ಕೂರುತ್ತಾರೆ. ಮತ್ತು ಪ್ರತಿದಿನ ಹಲವು ಬಾರಿ ನನ್ನ ತಲೆಗೆ, ಬೆನ್ನಿಗೆ ಹೊಡೆದು ಹಿಂಸೆ ನೀಡುತ್ತಿರುತ್ತಾರೆ.

ಇದರಿಂದ ನನಗೆ ಓದು ಬರಹದಲ್ಲಿ ಆಸಕ್ತಿ ಕಮ್ಮಿಯಾಗಿದೆ. ಬೇರೆ ಶಾಲೆಗೆ ಸೇರೋಣವೆಂದರೆ, ನಾನೇ ಇಷ್ಟಪಟ್ಟು ಸೇರಿದ ಶಾಲೆಯನ್ನು ಬಿಟ್ಟು ಹೋಗಲು ನನಗೆ ಮನಸ್ಸಾಗುತ್ತಿಲ್ಲ.

ಅಂಕಗಳು ಕಡಿಮೆಯಾಗುತ್ತಿವೆ ಎಂದು ಮತ್ತಷ್ಟು ಅಳಲು ಪ್ರಾರಂಭಿಸಿದ. ಆತನಿಗೆ ಸಮಾಧಾನವನ್ನು ಮಾಡುತ್ತಾ ಈ ಸಮಸ್ಯೆಗೆ ಎಲ್ಲರೂ ಸೇರಿ ಪರಿಹಾರ ಹುಡುಕೋಣ ಎಂದು ತಿಳಿಸಿ ಅವರ ಪೋಷಕರನ್ನು ಕರೆಸಿ, ಈ ವಿದ್ಯಾರ್ಥಿಗೆ ಶಾಲೆಯಲ್ಲಿ ಆಗುತ್ತಿರುವ ಸಮಸ್ಯೆಯ ಬಗ್ಗೆ ವಿವರವಾಗಿ ತಿಳಿಸಲಾಯಿತು.

ಮತ್ತೊಂದು ದಿನ, ಶಾಲಾ ಶಿಕ್ಷಕರನ್ನು ಸಹ ಕರೆಯಿಸಿ ಹಿಂದಿನ ಬೆಂಚಿನ ವಿದ್ಯಾರ್ಥಿಗಳು ಈತನಿಗೆ ಕಿರುಕುಳ ನೀಡುತ್ತಿರುವುದನ್ನು ಸೂಕ್ಷ್ಮವಾಗಿ ವಿವರಿಸಿ, ಶಾಲೆಯಲ್ಲಿ ಎಲ್ಲಾ ಮಕ್ಕಳ ಬಗ್ಗೆ ನಿಗಾ ಇಡಬೇಕೆಂದು ತಿಳಿಸಲಾಯಿತು. ಇದಕ್ಕೆ ಪೋಷಕರು ಮತ್ತು ಶಿಕ್ಷಕರೂ ಸಹ ಒಪ್ಪಿದರು.

೧೫ ದಿನಗಳ ನಂತರ ಫಾಲೋ ಅಪ್‌ಗೆ ಬಂದ ವಿದ್ಯಾರ್ಥಿ ಮತ್ತು ಪೋಷಕರ ಮುಖದಲ್ಲಿ ಸಮಾಧಾನ ಹಾಗೂ ನಗುವಿನ ಕಳೆಯಿತ್ತು. ಮುಂಚೆ ವಿವರಿಸಿದ ಸಮಸ್ಯೆ ಈಗ ಕಮ್ಮಿಯಾಗಿ ಶಾಲೆಯಲ್ಲಿ ತುಂಟತನ ಮಾಡುವ ಇತರ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ತಿಳುವಳಿಕೆ ಹೇಳಿ, ಈ ವಿದ್ಯಾರ್ಥಿಗೆ ಸಮಸ್ಯೆ ಆಗದಂತೆ ನೋಡಿಕೊಂಡಿದ್ದರಿAದ,

ಈತನ ಮನಸ್ಸಿನಲ್ಲಿ ಇದ್ದ ಆತಂಕ ಕಮ್ಮಿಯಾಗಿ ಕಲಿಕೆಯಲ್ಲಿ ಆಸಕ್ತಿ ಮರುಕಳಿಸಿತ್ತು.ಅಂಕಗಳ ಶ್ರೇಣಿಯೂ ಸಹ ಉತ್ತಮಗೊಂಡಿತ್ತು.

ಕೆಲವು ತಿಂಗಳುಗಳ ನಂತರ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದೇನೆAದು ಆ ವಿದ್ಯಾರ್ಥಿಯೇ ಬಂದು ಸಿಹಿಯನ್ನು ನೀಡಿದನು. ಈ ಘಟನೆಯನ್ನು ವಿಶ್ಲೇಷಣೆ ಮಾಡಿದಾಗ, ವಯಸ್ಕರಲ್ಲಿ ಮತ್ತು ಮಕ್ಕಳಲ್ಲಿ ಕಂಡುಬರುವ ಮಾನಸಿಕ ಆರೋಗ್ಯ ಸಮಸ್ಯೆಗಳು ವಿಭಿನ್ನ ಸ್ವರೂಪಗಳಲ್ಲಿ ಇರುತ್ತವೆ.

ವಯಸ್ಕರಾದರೆ ತಮಗೆ ಆಗುತ್ತಿರುವ ಸಮಸ್ಯೆಗಳು, ಗೊಂದಲಗಳು ಮತ್ತು ಆತಂಕಗಳನ್ನು ಇತರರ ಬಳಿ ಹೇಳಿಕೊಂಡು ಅಥವಾ ಆಪ್ತ ಸಮಾಲೋಚನೆಗೆ ಬಂದು ಚಿಕಿತ್ಸೆಯನ್ನು ಪಡೆಯುತ್ತಾರೆ. ಆದರೆ ಮಕ್ಕಳಲ್ಲಿ ಕಂಡುಬರುವ ಕೋಪ, ಸಿಟ್ಟು ನಿರುತ್ಸಾಹ, ಆಟ ಪಾಠಗಳಲ್ಲಿ ಆಸಕ್ತಿ ಇಲ್ಲದಿರುವುದು, ಕಲಿಕಾ ನ್ಯೂನ್ಯತೆ, ಈ ಎಲ್ಲಾ ಲಕ್ಷಣಗಳು ಮೇಲ್ನೋಟಕ್ಕೆ ಮಕ್ಕಳು ಯಾವುದೋ ಮಾನಸಿಕ ಆರೋಗ್ಯದ ಸಮಸ್ಯೆಯಲ್ಲಿ ಸಿಕ್ಕಿರುವ ಲಕ್ಷಣಗಳಂತೆ ಕಂಡುಬರುತ್ತವೆ.

ಹೆಚ್ಚಿನ ಸಂದರ್ಭದಲ್ಲಿ ಇವುಗಳನ್ನು ಗುರುತಿಸುವುದು ಕಷ್ಟವಾಗಿ ಆ ಮಕ್ಕಳು ತಮ್ಮೊಳಗೆ ಕುಗ್ಗಿ ಹೋಗುತ್ತಾರೆ.

ಅಂತಹ ಸಂದರ್ಭಗಳಲ್ಲಿ ಮಕ್ಕಳೊಂದಿಗೆ ಸಮಾಧಾನ ಚಿತ್ತರಾಗಿ ಕುಳಿತು, ಸೂಕ್ಷö್ಮವಾಗಿ ವಿಚಾರಿಸಿದಾಗ ಸಮಸ್ಯೆಯ ಸ್ವರೂಪವನ್ನು ತಿಳಿದು ಚಿಕಿತ್ಸೆಯನ್ನು ಪಡೆಯಲು ಸುಲಭವಾಗುತ್ತದೆ.

ಈ ನಿಟ್ಟಿನಲ್ಲಿ ಈ ವರ್ಷದ ಅಕ್ಟೋಬರ್ ೧೦, ವಿಶ್ವ ಮಾನಸಿಕ ಆರೋಗ್ಯ ದಿನದ ಘೋಷವಾಕ್ಯ ಮಹತ್ವವನ್ನು ಪಡೆದುಕೊಂಡಿದೆ. ಅದರಂತೆ, "ಜೀವಂತ ಅನುಭವಗಳನ್ನು ಕೇಳಿಸಿಕೊಳ್ಳೋಣ: ನೈಜ ಮಾತುಗಳು, ನಿಜವಾದ ಬದಲಾವಣೆ" ಎಂಬುದಾಗಿದೆ.

("ಐiveಜ ಇxಠಿeಡಿieಟಿಛಿes ಊeಚಿಡಿಜ: ಖeಚಿಟ ಗಿoiಛಿes, ಖeಚಿಟ ಅhಚಿಟಿge")

ಮಾನಸಿಕ ಆರೋಗ್ಯ ಸಮಸ್ಯೆ ಇರುವವರು ಹಾಗೂ ಈ ಸಮಸ್ಯೆಯಿಂದ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವವರ ಜೀವಂತ ಅನುಭವಗಳನ್ನು ನಾವು ಕೇಳಿದಾಗ, ಎಷ್ಟೋ ವಿಚಾರಗಳನ್ನು ಕಲಿಯ ಬಹುದಾಗಿದೆ ಮತ್ತು ಇತರರು ಸಹ ಇಂಥ ಸಮಸ್ಯೆಗೆ ಒಳಗಾದಾಗ, ಆದಷ್ಟು ಬೇಗನೆ ವೈದ್ಯರನ್ನು ಕಂಡು ಆಪ್ತ ಸಮಾಲೋಚನೆ ಅಥವಾ ಚಿಕಿತ್ಸೆಯನ್ನು ಪಡೆದು, ಬೇಗನೆ ಚೇತರಿಸಿಕೊಂಡು, ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಇರುವ ತಪ್ಪು ಕಲ್ಪನೆಯ ಬಗ್ಗೆ ಒಂದು ಮಹತ್ತರ ಬದಲಾವಣೆಯನ್ನು ತರಬಹುದಾಗಿದೆ. ಹಾಗಾದರೆ, ಬನ್ನಿ ಮಾನಸಿಕ ಆರೋಗ್ಯದ ಬಗೆಗಿನ ವ್ಯಕ್ತಿಗಳ ನೈಜ ಅನುಭವಗಳಿಗೆ ಕಿವಿಯಾಗೋಣ.

- ಡಾ.ಸತೀಶ್ ಕುಮಾರ್ ಎಸ್.ವಿ., ಮನೋವೈದ್ಯರು

ಮಾನಸಿಕ ಆರೋಗ್ಯ ವಿಭಾಗ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ

ಭೋದಕ ಆಸ್ಪತ್ರೆ, ಮಡಿಕೇರಿ.