ಮಡಿಕೇರಿ, ಅ. ೭ : ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಬೆಟ್ಟಗೇರಿ ಉದಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ದಿನಾಂಕ ೨೦-೦೯-೨೦೨೬ ರ ಭಾನುವಾರ ಸಂಘದ ಅಧ್ಯಕ್ಷರಾದ ತಳೂರು ಎ ಕಿಶೋರ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು ೨೦೨೫-೨೦೨೬ ನೇ ಸಾಲಿಗೆ ರೂ. ೨೪,೯೦,೬೮೩.೨೮/-ಲಾಭ ಗಳಿಸಿದೆ. ಸಂಘದಲ್ಲಿ ಒಟ್ಟು ೧೦೯೧ ಸದಸ್ಯರುಗಳು ಇದ್ದಾರೆ. ಇವರ ಪಾಲು ಬಂಡವಾಳ ರೂಪಾಯಿ ೯೧,೬೮,೦೨೨.೫೦/-ರೂಪಾಯಿಗಳಾಗಿರುತ್ತದೆ. ಸದಸ್ಯತ್ವ ಪಡೆಯದೆ ಇರುವವರನ್ನು ಸದಸ್ಯರಾಗಿ ನೊಂದಾಯಿಸಿಕೊಳ್ಳಲು ಹೆಚ್ಚಿನ ಮಾಹಿತಿ ನೀಡಲಾಗುತ್ತದೆ. ನಮ್ಮ ಸಂಘದಲ್ಲಿ ಸದಸ್ಯರು ಮತ್ತು ಸದಸ್ಯರೇತರರಿಂದ ರೂಪಾಯಿ ೭,೮೧,೫೧,೭೪೦/- ಠೇವಣಿಗಳಿರುತ್ತದೆ. ವರದಿ ಸಾಲಿನಲ್ಲಿ ಸದಸ್ಯರಿಗೆ ರೂಪಾಯಿ ೬,೯೫,೭೨,೦೦೦/- ಕೆ.ಸಿ.ಸಿ ಸಾಲ ವಿತರಿಸಿದ್ದು, ಯಾವುದೇ ಸಾಲ ಸುಸ್ತಿಯಾಗಿರುವುದಿಲ್ಲ. ಕೆ.ಸಿ.ಸಿ ಸಾಲವನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿAದ ಪಡೆದುಕೊಂಡು ಸಮಯಕ್ಕೆ ಸರಿಯಾಗಿ ಮರುಪಾವತಿಸಿದ್ದು ಯಾವುದೇ ಸುಸ್ತಿ ಸಾಲ ಇರುವುದಿಲ್ಲ. ಸಂಘವು ಕಳೆದ ಹಿಂದಿನ ಸಾಲಿನಲ್ಲಿ ೪೫ ಲಕ್ಷ ರೂಪಾಯಿ ಸಾಲವನ್ನು ನಬಾರ್ಡ್ ಎಂ.ಎಸ್.ಸಿ ಸ್ಕೀಮ್‌ನಿಂದ ಕೆ.ಡಿ.ಸಿ.ಸಿ. ಬ್ಯಾಂಕಿನ ಮುಖಾಂತರ ಪಡೆದುಕೊಂಡು ರೈತರಿಗಾಗಿ ಉತ್ತಮ ಗೋದಾಮನ್ನು ನಿರ್ಮಾಣ ಮಾಡಿರುತ್ತೇವೆ. ಹಿಂದಿನ ಜನಪ್ರತಿನಿಧಿಗಳಿಂದ ಕಛೇರಿ ಕಟ್ಟಡಕ್ಕಾಗಿ ಲೋಕಸಭಾ ಸದಸ್ಯರ ಅನುದಾನ, ಹಿಂದಿನ ಶಾಸಕರ ಅನುದಾನ, ವಿಧಾನ ಪರಿಷತ್ ಸದಸ್ಯರ ಅನುದಾನದಿಂದ ಒಟ್ಟು ರೂಪಾಯಿ ೨೪ ಲಕ್ಷವನ್ನು ಪಡೆದುಕೊಂಡು ಕಟ್ಟಡವನ್ನು ನಿರ್ಮಾಣ ಮಾಡಿರುತ್ತೇವೆ ಎಂದು ಅವರು ತಿಳಿಸಿದರು. ಸಂಘದಲ್ಲಿ ರೂಪಾಯಿ ೨,೧೮,೯೮,೯೪೦/- ಆಭರಣ ಸಾಲವನ್ನು ನೀಡಲಾಗಿದೆ. ರೂಪಾಯಿ ೪೦,೩೩,೮೦೬/- ಪಿಗ್ಮಿ ಓವರಡ್ರಾಫ್ಟ್ ಸಾಲವನ್ನು ನೀಡಲಾಗಿದೆ. ಸ್ವಸಹಾಯ ಸಂಘದ ಸಾಲಕ್ಕೆ ರೂಪಾಯಿ ೭೮,೧೦,೬೮೪/- ಸಾಲವನ್ನು ನೀಡಲಾಗಿದೆ. ರೂಪಾಯಿ ೨,೬೪,೯೨,೦೦೦/- ಗೊಬ್ಬರ ಸಾಲವನ್ನು ನೀಡಲಾಗಿದೆ. ಅಲ್ಲದೆ ಸಂಘದ ಸದಸ್ಯರ ಅನುಕೂಲಕ್ಕಾಗಿ ವಾಹನ ಸಾಲ ರೂಪಾಯಿ ೩೯,೬೨,೩೦೪/- ಮತ್ತು ಗೃಹ ಸಾಲ ರೂಪಾಯಿ ೨೧,೭೭,೦೭೪/- ನೀಡಲಾಗಿರುತ್ತದೆ. ಸಂಘದ ಸದಸ್ಯರಿಗೆ ಮರಣ ನಿಧಿಯನ್ನು ವ್ಯವಸ್ಥೆ ಮಾಡಲಾಗಿರುತ್ತದೆ.
ಸಂಘದ ಅಭಿವೃದ್ಧಿ ದೃಷ್ಟಿಯಿಂದ ಕೊಡಗು ಮೈಸೂರು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ೪ ಲಕ್ಷ ಹಣವನ್ನು ಬಿಡುಗಡೆ ಮಾಡಿದ್ದು, ಸಂಘದ ಹಿತದೃಷ್ಟಿಯಿಂದ ಆಧುನಿಕ ಲಾಕರ್‌ಗಳನ್ನು ಸಂಸ್ಥೆಯಲ್ಲಿ ಅಳವಡಿಸಲಾಗಿದೆ. ರೈತರ ಅನುಕೂಲಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಇನ್ನಿತರ ಸಾಲವನ್ನು ನಿಯಮಾನುಸಾರ ಕೊಡಲಾಗುವುದು. ಅಲ್ಲದೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರ ಸಹಕಾರದಿಂದ ಸಂಘದ ಅಭಿವೃದ್ಧಿಗಾಗಿ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿಗಳು ದುಡಿಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಸಂಘವು ಕಳೆದ ೨-೩ ವರ್ಷಗಳಿಂದ ಲೆಕ್ಕ ಪರಿಶೋಧನೆಯಲ್ಲಿ ಎ ತರಗತಿಯಲ್ಲಿ ಇದ್ದು ಸಂಘವು ೨೦೨೫-೨೦೨೬ನೇ ಸಾಲಿಗೆ ರೂಪಾಯಿ ೨೪,೯೦,೬೮೩.೨೮/- ಲಾಭ ಗಳಿಸಿರುತ್ತದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ನಿರ್ದೇಶಕರು ತಿಳಿಸಿದ್ದಾರೆ.