ಮಡಿಕೇರಿ, ಅ. ೭: ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಸುವರ್ಣ ಮಹೋತ್ಸವದ ಅಂಗವಾಗಿ ‘ಯುವಪೀಳಿಗೆಯ ಮುಂದಿನ ಭವಿಷ್ಯಕ್ಕಾಗಿ ಡ್ರಗ್ಸ್ ಮುಕ್ತ ಕೊಡಗು’ ಎಂಬ ಆಶಯದೊಂದಿಗೆ ನಗರದಲ್ಲಿ ವಾಹನ ಜಾಥಾ ನಡೆಯಿತು.

ಜಾಥಾವು ನಗರದ ಫೀ.ಮಾ. ಕಾರ್ಯಪ್ಪ ವೃತ್ತದಿಂದ ಆರಂಭಗೊAಡು ಜನರಲ್ ತಿಮ್ಮಯ್ಯ ವೃತ್ತ, ಹಳೆಯ ಖಾಸಗಿ ಬಸ್ ನಿಲ್ದಾಣ, ಇಂದಿರಾಗಾAಧಿ ವೃತ್ತ, ಕಾಲೇಜು ರಸ್ತೆ, ಹಿಲ್ ರೋಡ್, ಮಾರುಕಟ್ಟೆ ಮಾರ್ಗವಾಗಿ ಮಹದೇವಪೇಟೆ ಮೂಲಕ ಕೋಟೆ ಆವರಣ ತಲುಪಿತು.

ಖ್ಯಾತ ವೈದ್ಯರು ಹಾಗೂ ಸಮಿತಿಯ ಹಿರಿಯ ಸದಸ್ಯರಾದ ಡಾ. ಮನೋಹರ ಪಾಟ್ಕರ್ ಅವರು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಯುವಸಮೂಹ ದೇಶದ ಆಸ್ತಿಯಾಗಿದ್ದು, ದುಶ್ಚಟಗಳಿಗೆ ಬಲಿಯಾಗದೆ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಯುವಜನತೆ ಮಾದಕ ವ್ಯಸನದಿಂದ ದೂರವಿದ್ದು, ಆರೋಗ್ಯಕರ ಬದುಕಿನತ್ತ ಹೆಜ್ಜೆ ಹಾಕಬೇಕು. ಕೊಡಗಿನ ಪರಿಸರ ಸಂರಕ್ಷಣೆಯ ಬಗ್ಗೆಯೂ ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕು. ಹಸಿರು ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ

೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಜವಾಬ್ದಾರಿಯಾಗಬೇಕು ಎಂದು ಕರೆ ನೀಡಿದರು.

ಜಾಥಾದಲ್ಲಿ ಡ್ರಗ್ಸ್ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಟ್ಯಾಬ್ಲೋ ಗಮನ ಸೆಳೆಯಿತು. ಸಮಿತಿಯ ಅಧ್ಯಕ್ಷ ಅವರೆಮಾದಂಡ ಶರಣು ಪೂಣಚ್ಚ, ಗೌರವಾಧ್ಯಕ್ಷ ಬಿ.ಎಂ. ರಾಜೇಶ್, ಖಜಾಂಚಿ ಪುನೀತ್, ಉಪಾಧ್ಯಕ್ಷೆ ಮಿನಾಜ್ ಪ್ರವೀಣ್, ಪ್ರಮುಖರಾದ ಹರೀಶ್ ಅಣ್ವೇಕರ್, ಸವಿತಾ ರಾಕೇಶ್ ಸೇರಿದಂತೆ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.