ಮಡಿಕೇರಿ, ಅ. ೭: ಮಡಿಕೇರಿ ದಸರಾ ಪ್ರಯುಕ್ತ ಜಿಲ್ಲಾಮಟ್ಟದ ಕ್ರೀಡಾಕೂಟ ತಾ.೧೧ ರಿಂದ ಪ್ರಾರಂಭವಾಗಲಿದೆ ಎಂದು ದಸರಾ ಕ್ರೀಡಾ ಸಮಿತಿಯ ಅಧ್ಯಕ್ಷ ಪ್ರದೀಪ್ ಕರ್ಕೆರ ಅವರು ಮಾಹಿತಿ ನೀಡಿದ್ದಾರೆ.
ಮಡಿಕೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತಾ.೧೧ ರಂದು ಬೆಳಿಗ್ಗೆ ೬ ಗಂಟೆಗೆ ಓಟದ ಸ್ಪರ್ಧೆ ನಡೆಯಲಿದೆ. ಸಾರ್ವಜನಿಕ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಓಟದ ಸ್ಪರ್ಧೆ ಇರಲಿದೆ. ಪುರುಷರಿಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಕ್ಯಾಪಿಟಲ್ ವಿಲೇಜ್ವರೆಗೆ ಹಾಗೂ ಮಹಿಳೆಯರಿಗೆ ಜನರಲ್ ತಿಮ್ಮಯ್ಯ ವೃತ್ತದಿಂದ ನೀರುಕೊಲ್ಲಿಯವರೆಗೆ ಓಟದ ಸ್ಪರ್ಧೆ ಇರಲಿದೆ.
೧ ರಿಂದ ೪ನೇ ತರಗತಿಯ ಬಾಲಕ-ಬಾಲಕಿಯರಿಗೆ ಜಿ.ಟಿ ವೃತ್ತದಿಂದ ಹಾಸ್ಪಿಟಲ್ ಗೇಟ್ವರೆಗೆ, ೫ ರಿಂದ ೭ನೇ ತರಗತಿಯವರಿಗೆ ಜಿ.ಟಿ ವೃತ್ತದಿಂದ ಈಸ್ಟೆಂಡ್ವರೆಗೆ, ೮ ರಿಂದ ೧೦ನೇ ತರಗತಿಯವರಿಗೆ ಜಿ.ಟಿ ವೃತ್ತದಿಂದ ಬಸ್ ಡಿಪ್ಪೋವರೆಗೆ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಜಿ.ಟಿ ವೃತ್ತದಿಂದ ಕಾರ್ಯಪ್ಪ ವೃತ್ತದವರೆಗೆ ಸ್ಪರ್ಧೆ ಇರಲಿದೆ ಎಂದು ಮಾಹಿತಿ ನೀಡಿದರು.
ತಾ.೧೧ ರಂದು ಬೆಳಿಗೆ ೯:೩೦ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ (೫+೨)ಮುಕ್ತ ಫುಟ್ಬಾಲ್ ಪಂದ್ಯಾವಳಿ ಪುರುಷರಿಗೆ ಹಾಗೂ ೧೦ನೇ ತರಗತಿ ಒಳಗಿನ ಬಾಲಕ-ಬಾಲಕಿಯರಿಗೆ ಪ್ರತ್ಯೇಕವಾಗಿ ಫುಟ್ಬಾಲ್ (೫+೨)ಆಯೋಜಿತವಾಗಿದೆ.
ತಾ.೧೨ ರಂದು ನಗರದ ರಾಜದರ್ಶನ ಹೊಟೇಲ್ನಲ್ಲಿ ಚೆಸ್ ಪಂದ್ಯಾಟ ನಡೆಯಲಿದೆ. ೯ ವರ್ಷದೊಳಗಿನವರಿಗೆ, ೧೧, ೧೪, ೧೬ ವರ್ಷದೊಳಗಿನವರಿಗೆ ಹಾಗೂ ಸಾರ್ವಜನಿಕರಿಗೆ ಚೆಸ್ ಪಂದ್ಯಾಟ ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿದೆ. ತಾ.೧೨ ರಂದು ಮುಕ್ತ ವಿಭಾಗದಲ್ಲಿ ಸ್ನೂಕರ್ ಪಂದ್ಯಾಟ ಕೂರ್ಗ್ ಎಂಟರ್ಪ್ರೆöÊಸಸ್ನಲ್ಲಿ ನಡೆಯಲಿದೆ.
ತಾ.೧೩ ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಸ್ಪರ್ಧೆಗಳು
೧೦೦ ಮೀಟರ್ ಓಟದ ಸ್ಪರ್ಧೆ ಬಾಲಕ ಹಾಗೂ ಬಾಲಕೀಯರಿಗೆ ಪ್ರತ್ಯೇಕವಾಗಿ ಹಾಗೂ ೧ ರಿಂದ ೪ನೇ ತರಗತಿ, ೫ ರಿಂದ ೭, ೮ ರಿಂದ ೧೦, ಪಿಯು.ಸಿ, ಪದವಿ ವಿದ್ಯಾರ್ಥಿಗಳಿಗೆ ಸೇರಿದಂತೆ ಸಾರ್ವಜನಿಕರಿಗೆ ಪ್ರತ್ಯೇಕವಾಗಿ ನಡೆಯಲಿದೆ.
೪೦೦ ಮೀಟರ್ ಓಟದ ಸ್ಪರ್ಧೆ ಸಾರ್ವಜನಿಕರಿಗೆ ಹಾಗೂ ಪದವಿ ವಿದ್ಯಾರ್ಥಿಗಳಿಗೆ, ಪಿಯು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ನಡೆಯಲಿದೆ. ೪೦ ವರ್ಷ ಮೇಲ್ಪಟ್ಟ ಪುರುಷ-ಮಹಿಳೆಯರಿಗೆ ಪ್ರತ್ಯೇಕವಾಗಿ ೧೦೦ ಮೀಟರ್ ಓಟದ ಸ್ಪರ್ಧೆ ಹಾಗೂ ದಸರಾ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಮಿತಿಯವರಿಗೂ ೧೦೦ ಮೀಟರ್ ಓಟದ ಸ್ಪರ್ಧೆ ನಡೆಯಲಿದೆ. ಸಾರ್ವಜನಿಕರಿಗೆ ಹಾಗೂ ದಸರಾ ಸಮಿತಿಯವರಿಗೆ ಭಾರದ ಗುಂಡು ಎಸೆತ ಸ್ಪರ್ಧೆ ನಡೆಯಲಿದೆ. ಈ ಬಾರಿ ಮೊದಲ ಬಾರಿಗೆ ಮುಕ್ತಿ ವಿಭಾಗದಲ್ಲಿ ರಿಂಕ್ ಹಾಕಿ ಆಯೋಜನೆ ಮಾಡಲಾಗಿದೆ ಎಂದು ಪ್ರದೀಪ್ ಅವರು ಮಾಹಿತಿ ನೀಡಿದರು. ೧ ರಿಂದ ೩ ವರ್ಷದ ಮಕ್ಕಳಿಗೆ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಕಾಳು ಹೆಕ್ಕುವ ಸ್ಪರ್ಧೆ, ೪ ರಿಂದ ೬ ವರ್ಷದ ಮಕ್ಕಳಿಗೆ ಕಪ್ಪೆ ಜಿಗಿತ ಹಾಗೂ ಬಾಸ್ಕೆಟ್ ಇನ್ದ ಬಾಲ್ ಆಯೋಜನೆಗೊಂಡಿದೆ.
ಪುರುಷರಿಗೆ ವಾಲಿಬಾಲ್, ಪುರುಷ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್ ಆಟ ಆಯೋಜನೆಗೊಂಡಿದೆ. ಪುರುಷರಿಗೆ ನಿಧಾನ ದ್ವಿಚಕ್ರ ವಾಹನ(ಗೇರ್) ಚಾಲನಾ ಸ್ಪರ್ಧೆ ಕೂಡ ನಡೆಯಲಿದೆ. ಮಹಿಳೆಯರಿಗೆ ನಿಂಬೆ-ಚಮಚ ಓಟ (೨೫ ವರ್ಷ ಮೇಲ್ಪಟ್ಟವರಿಗೆ) ಹಾಗೂ ವಿಷದ ಚೆಂಡು ಆಟ ನಡೆಯಲಿದೆ.
ತಾ.೧೪ ರಂದು ರಾಜ್ದರ್ಶನ ಹೊಟೇಲ್ನಲ್ಲಿ ಕ್ಯಾರಂ ಪಂದ್ಯಾಟ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ನಡೆಯಲಿದೆ.
ತಾ.೧೫ ರಂದು ಪತ್ರಕರ್ತರಿಗೆ ಕ್ಯಾರಂ ಕ್ರೀಡಾಕೂಟ ಆಯೋಜಿಸಲಾಗಿದೆ.ತಾ.೧೫ ರಂದು ರಾಜದರ್ಶನದಲ್ಲಿ ಸಾಮೂಹಿಕ ನೃತ್ಯ ಸ್ಪರ್ಧೆ (೬+೨), ತಾ.೧೬ ರಂದು ೧ ರಿಂದ ೩ನೇ ತರಗತಿಯವರಿಗೆ ಸ್ತಬ್ದಚಿತ್ರ ಬಿಡಿಸುವ ಸ್ಪರ್ಧೆ, ೪ ರಿಂದ ೭ನೇ ತರಗತಿಯವರಿಗೆ ಸ್ತಬ್ದ ಚಿತ್ರ ರಚನೆ ಹಾಗೂ ಬಣ್ಣ ಹಚ್ಚುವ ಸ್ಪರ್ಧೆ ಆಯೋಜಿಸಲಾಗಿದೆ.
ತಾ.೧೭ ರಂದು ಕಬಡ್ಡಿ ಪಂದ್ಯಾಟ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಹಾಗೂ ಶಾಲಾ ಮಕ್ಕಳ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ತಾ.೧೮ ರಂದು ಗಾಂಧಿ ಮೈದಾನದಲ್ಲಿ ಹೋರಿ ಪ್ರದರ್ಶನ ನಡೆಯಲಿದೆ. ಹೋರಿಗಳು ಕುಂದುರುಮೊಟ್ಟೆ ದೇವಾಲಯದಿಂದ ಗಾಂಧಿ ಮೈದಾನದವರಗೆ ಸಾಗಿ ಅಲ್ಲಿ ತಂಗಲಿವೆ.
ತಾ.೧೯ ರಂದು ದೇಹದಾರ್ಢ್ಯ ಸ್ಪರ್ಧೆ ರಾಜ್ದರ್ಶನ ಹೊಟೇಲ್ನಲ್ಲಿ ನಡೆಯಲಿದೆ ಎಂದು ಪ್ರದೀಪ್ ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಸಮಿತಿಯ ಸಹ ಕಾರ್ಯದರ್ಶಿ ಚರಣ್, ಪ್ರಧಾನ ಕಾರ್ಯದರ್ಶಿ ವಾಗೇಶ್, ಕ್ರೀಡಾ ಸಂಚಾಲಕ ಕಾವೇರಿಮನೆ ಭರತ್, ಖಜಾಂಚಿ ಯೇಣುಕುಮಾರ್, ಗೌರವ ಸಲಹೆಗಾರ ಕ್ರಿಸ್ಟಫರ್ ಹಾಜರಿದ್ದರು. ಹೆಚ್ಚಿನ ಮಾಹಿತಿಗಾಗಿ ಮೊ:೭೩೩೮೫೪೭೮೯೭, ೮೦೭೩೯೬೨೩೨೪ ಸಂಪರ್ಕಿಸಬಹುದಾಗಿದೆ.