ಮಡಿಕೇರಿ, ಅ. ೭: ದೇಶದ ಆಂತರಿಕ ಸುರಕ್ಷತೆಗೆ ಗಂಭೀರ ಅಪಾಯ ತಂದೊಡ್ಡುತ್ತಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರಗಟ್ಟುವಂತೆ ಆಗ್ರಹಿಸಿ ಕೊಡಗು ಜಿಲ್ಲೆಯಾದ್ಯಂತ ೧೨ ದಿನಗಳಿಂದ ನಡೆಯುತ್ತಿರುವ ಜನಜಾಗೃತಿ ವಾಹನ ಜಾಥಾದ ಸಮಾರೋಪ ಕಾರ್ಯಕ್ರಮ ತಾ.೯ ರಂದು(ನಾಳೆ) ಮಡಿಕೇರಿಯಲ್ಲಿ ನಡೆಯಲಿದೆ ಎಂದು ಕೊಡಗು ಸುರಕ್ಷಾ ಆಂದೋಲನ ಸಮಿತಿ ತಿಳಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಮಿತಿಯ ಸಂಯೋಜಕ ಕುಕ್ಕೇರ ಅಜಿತ್, ಸೆಪ್ಟಂಬರ್ ೨೮ ರಂದು ಕೇರಳಂ ಗಡಿಭಾಗ ಕುಟ್ಟದಿಂದ ಆರಂಭಗೊAಡ ಜನಜಾಗೃತಿ ವಾಹನ ಜಾಥಾ ಕಾರ್ಯಕ್ರಮದ ಮೂಲಕ ಕೊಡಗಿನ ೫ ತಾಲೂಕುಗಳ ಪ್ರಮುಖ ೪೫ ಸ್ಥಳಗಳಲ್ಲಿ ಜನಜಾಗೃತಿ ನಡೆದಿದೆ. ತಾ.೯ ರಂದು (ನಾಳೆ) ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನಕ್ಕೆ ಈ ಜಾಥಾ ಆಗಮಿಸಲಿದೆ. ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿ ಗಾಂಧಿ ಮೈದಾನದಿಂದ ಆರಂಭವಾಗುವ ಬೃಹತ್ ಜನಜಾಗೃತಿ ಮೆರವಣಿಗೆಯು ಅಜ್ಜಮಾಡ ದೇವಯ್ಯ ವೃತ್ತದವರೆಗೆ ತೆರಳಲಿದ್ದು ಇಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ಸಾಮಾಜಿಕ ಸಂಘಟನೆಗಳ ಮುಖಂಡರಿAದ ಜಾಗೃತಿ ಭಾಷಣ ನಡೆಯಲಿದೆ ಎಂದು ಮಾಹಿತಿ ನೀಡಿದರು.

ದೇಶದೊಳಗೆ ಅಕ್ರಮವಾಗಿ ನುಸುಳಿರುವ ಎರಡು ಕೋಟಿಯಷ್ಟು ಅಕ್ರಮ ಬಾಂಗ್ಲಾ ವಲಸಿಗರು ಈಗಾಗಲೇ ಅಕ್ರಮವಾಗಿ ಮಾಡಿಸಿಕೊಂಡಿರುವ ಆಧಾರ್ ಕಾರ್ಡ್, ವೋಟರ್ ಐ.ಡಿ., ರೇಷನ್ ಕಾರ್ಡ್, ಪಾನ್ ಕಾರ್ಡ್, ಡ್ರೆöÊವಿಂಗ್ ಲೈಸೆನ್ಸ್, ಬ್ಯಾಂಕ್ ಖಾತೆ, ಅಕ್ರಮ ಆಸ್ತಿಪಾಸ್ತಿ ಇತ್ಯಾದಿಗಳೆಲ್ಲವುಗಳ ಮುಟ್ಟುಗೋಲಿಗೆ ಸರಕಾರವು ವಿಶೇಷ ಕಾರ್ಯಪಡೆ ರಚಿಸಬೇಕು ಎಂದು ಆಗ್ರಹಿಸಿದರು.

ಭಾರತೀಯರು ಕಟ್ಟುವ ತೆರಿಗೆ ಹಣದಿಂದ ಆರಂಭಿಸಿರುವ ಯೋಜನೆಗಳ ಲಾಭವನ್ನು ಅಕ್ರಮ ಬಾಂಗ್ಲಾ ವಲಸಿಗರು ದೋಚಲು ಅವಕಾಶ ನೀಡಬಾರದು. ಅದಕ್ಕಾಗಿ ಅಕ್ರಮ ಬಾಂಗ್ಲಾ ವಲಸಿಗರನ್ನು ಕೂಡಲೇ ಈ ದೇಶದಿಂದ ಹೊರಗಟ್ಟಬೇಕು. ಜಿಲ್ಲೆಯಲ್ಲಿರುವ ಕಾರ್ಮಿಕರ ಕೊರತೆಯನ್ನು ನೀಗಿಸಲು ಸರಕಾರವು ಕಾರ್ಮಿಕ ಇಲಾಖೆಯ ಮೂಲಕ ಕೊಡಗು ಜಿಲ್ಲೆ ಹಾಗೂ ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳು ಹಾಗೂ ವಿವಿಧ ರಾಜ್ಯಗಳ ಕಾರ್ಮಿಕ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಅಲ್ಲಿನ ನಿರುದ್ಯೋಗಿ ಕಾರ್ಮಿಕರಿಗೆ ಕೊಡಗು ಜಿಲ್ಲೆಯ ವಿವಿಧ ಭಾಗಗಳ ಅಗತ್ಯಕ್ಕೆ ತಕ್ಕಂತೆ ಕಾರ್ಮಿಕರ ಪೂರೈಕೆ ಮಾಡಲು ವ್ಯವಸ್ಥಿತ ಯೋಜನೆ ರೂಪಿಸಬೇಕು. ಆ ಮೂಲಕ ಕಾರ್ಮಿಕರ ಕೊರತೆಯನ್ನು ಸುಲಭವಾಗಿ ನೀಗಿಸಲು ಸ್ಥಳೀಯ ರೈತರು ಹಾಗೂ ತಜ್ಞರೊಂದಿಗೆ ಚರ್ಚಿಸಿ ಸರಿಯಾದ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು. ಸಾಮಾಜಿಕ ಕಾರ್ಯಕರ್ತ ಕೆ.ಕೆ. ದಿನೇಶ್ ಕುಮಾರ್ ಮಾತನಾಡಿ, ಅಕ್ರಮ ವಲಸಿಗರಿಂದ ಕೊಡಗು ಸೇರಿದಂತೆ ಇಡೀ ದೇಶದಲ್ಲಿ ಡೆಮಗ್ರಫಿ ಬದಲಾವಣೆ ಆಗುತ್ತಿದೆ. ಸರಕಾರವು ಕಾನೂನುಬದ್ಧವಾಗಿ ಇಂತಹ ಅಕ್ರಮ ವಲಸಿಗರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಸಮಿತಿಯ ಸದಸ್ಯರಾದ ಪಳೆಯಂಡ ರಾಬಿನ್ ದೇವಯ್ಯ ಅವರು ಮಾತನಾಡಿ, ಹೊರರಾಷ್ಟçದ ಕಾರ್ಮಿಕರಿಗೆ ಮಣೆ ಹಾಕಿದರೆ ಕೊಡಗಿನಲ್ಲಿ ಭವಿಷ್ಯದಲ್ಲಿ ಗಂಡಾAತರ ಖಂಡಿತ. ವಾರದ ಸಂತೆಯಲ್ಲಿ ಕೂಡ ಅಕ್ರಮ ವಲಸಿಗರು ವ್ಯಾಪಾರ ನಡೆಸುತ್ತಿರುವ ಪರಿಸ್ಥಿತಿ ಎದುರಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಂತಹವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ತಾ.೯ ರಂದು ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ನವದೆಹಲಿಯ ಡೆಮಗ್ರಫಿ ಬದಲಾವಣೆ ವಿಷಯದ ಪರಿಣಿತರಾದ ಭರತ್ ಭೂಷಣ್ ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ರೂಪಾ ಸತೀಶ್, ಚಂದ್ರ ಉಡೋತ್ತು ಹಾಜರಿದ್ದರು.