ಮಡಿಕೇರಿ, ಅ. ೭: ರಾಜ್ಯದ ೩೧ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಿಗೆ ಮೀಸಲಾತಿ ನಿಗದಿಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.
ಕೊಡಗು ಜಿಲ್ಲಾ ಪಂಚಾಯತ್‌ನ ಒಟ್ಟು ೨೯ ಸ್ಥಾನಗಳಲ್ಲಿ ೧೫ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಅನುಸೂಚಿತ ಜಾತಿಗೆ ೪ ಸ್ಥಾನ ಇದ್ದು, ಇದರಲ್ಲಿ ೨ ಸ್ಥಾನ ಮಹಿಳೆಯರಿಗೆ, ಅನುಸೂಚಿತ ಪಂಗಡಕ್ಕೆ ೩ ಸ್ಥಾನಗಳಿದ್ದು, ಇದರಲ್ಲಿ ೨ ಸ್ಥಾನ ಮಹಿಳೆಯರಿಗೆ, ಹಿಂದುಳಿದ ವರ್ಗ ‘ಅ’ಗೆ ೬ ಸ್ಥಾನವಿದ್ದು, ಇದರಲ್ಲಿ ೩ ಸ್ಥಾನ ಮಹಿಳೆಯರಿಗೆ, ಹಿಂದುಳಿದ ವರ್ಗ ‘ಬ’ ೧ ಸ್ಥಾನವಿದ್ದು, ಅದನ್ನು ಮಹಿಳೆಗೆ ಮೀಸಲಿರಿಸಲಾಗಿದೆ. ಸಾಮಾನ್ಯ ವರ್ಗಕ್ಕೆ ಒಟ್ಟು ೧೫ ಸ್ಥಾನವಿದ್ದು, ಅದರಲ್ಲಿ ೭ ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ.
ತಾಲೂಕು ಪಂಚಾಯಿತಿ
ಮಡಿಕೇರಿ ತಾಲೂಕು ಪಂಚಾಯಿತಿಯಲ್ಲಿ ೧೨ ಸ್ಥಾನಗಳಿದ್ದು, ಇದರಲ್ಲಿ ಮಹಿಳೆಯರಿಗೆ ೬ ಸ್ಥಾನ ಮೀಸಲಾಗಿದೆ. ಅನುಸೂಚಿತ ಜಾತಿಗೆ ೧, ಅನುಸೂಚಿತ ಪಂಗಡಕ್ಕೆ ೧ ಸ್ಥಾನವಿದ್ದು, ಅದನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಹಿಂದುಳಿದ ವರ್ಗ ‘ಅ’ಕ್ಕೆ ೩ ಸ್ಥಾನಗಳಿದ್ದು, ೨ ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಹಿಂದುಳಿದ ವರ್ಗ ‘ಬ’ ೧ ಸ್ಥಾನವಿದ್ದು, ಅದು ಪುರುಷರಿಗೆ ನಿಗದಿಯಾಗಿದೆ. ೬ ಸಾಮಾನ್ಯ ಸ್ಥಾನಗಳಿದ್ದು, ಇದರಲ್ಲಿ ೨ ಮಹಿಳೆಯರಿಗೆ ಮೀಸಲಾಗಿದೆ.
ಸೋಮವಾರಪೇಟೆ ತಾಲೂಕು ಪಂಚಾಯಿತಿಯಲ್ಲಿ ೯ ಸ್ಥಾನಗಳಿದ್ದು, ೫ ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿಗೆ ೨ ಸ್ಥಾನವಿದ್ದು, ೧ ಮಹಿಳೆಯರಿಗೆ ಮೀಸಲು, ಅನುಸೂಚಿತ ಪಂಗಡಕ್ಕೆ ೧ ಹಾಗೂ ಹಿಂದುಳಿದ ವರ್ಗ ‘ಬ’ಕ್ಕೆ ೧ ಸ್ಥಾನಗಳಿದ್ದು, ಅವು ಮಹಿಳೆಯರಿಗೆ ಮೀಸಲಾಗಿದೆ. ೫ ಸಾಮಾನ್ಯ ಸ್ಥಾನಗಳಿದ್ದು, ೨ ಮಹಿಳೆಯರಿಗೆ ಮೀಸಲಾಗಿದೆ.
ಕುಶಾಲನಗರ ತಾ.ಪಂ.ನಲ್ಲಿ ೯ ಸ್ಥಾನಗಳಿದ್ದು, ೫ ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿಗೆ ೧, ಅನುಸೂಚಿತ ಪಂಗಡಕ್ಕೆ ೧ ಸ್ಥಾನವಿದ್ದು, ಮಹಿಳೆಯರಿಗೆ ಮೀಸಲಾಗಿದೆ. ಹಿಂದುಳಿದ ವರ್ಗ ‘ಅ’ಕ್ಕೆ ೨ ಸ್ಥಾನಗಳಿದ್ದು, ೧ ಸ್ಥಾನ ಮಹಿಳೆಗೆ ಮೀಸಲಾಗಿದೆ. ೫ ಸಾಮಾನ್ಯ ಸ್ಥಾನಗಳಿದ್ದು, ೨ ಮಹಿಳೆಯರಿಗೆ ಮೀಸಲಾಗಿದೆ.
ವೀರಾಜಪೇಟೆ ತಾ.ಪಂ.ನಲ್ಲಿ ೯ ಸ್ಥಾನಗಳಿದ್ದು, ೫ ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿಗೆ ೧ ಮತ್ತು ಅನುಸೂಚಿತ ಪಂಗಡಕ್ಕೆ ೧ ಸ್ಥಾನಗಳಿದ್ದು, ಅವು ಮಹಿಳೆಯರಿಗೆ ಮೀಸಲಾಗಿವೆ. ಹಿಂದುಳಿದ ವರ್ಗ ‘ಅ’ಕ್ಕೆ ೨ ಸ್ಥಾನವಿದ್ದು, ೧ ಮಹಿಳೆಯರಿಗೆ ಮೀಸಲಾಗಿದೆ. ಸಾಮಾನ್ಯ ೫ ಸ್ಥಾನಗಳಿದ್ದು, ೨ ಮಹಿಳೆಯರಿಗೆ ಮೀಸಲಾಗಿದೆ. ಪೊನ್ನಂಪೇಟೆ ತಾ.ಪಂ.ನಲ್ಲಿ ೯ ಸ್ಥಾನಗಳ ಪೈಕಿ ಮಹಿಳೆಯರಿಗೆ ೫ ಸ್ಥಾನ ನಿಗದಿಯಾಗಿದೆ. ಅನುಸೂಚಿತ ಜಾತಿಗೆ ೧ ಸ್ಥಾನವಿದ್ದು, ಅದು ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಪಂಗಡಕ್ಕೆ ೩ ಸ್ಥಾನವಿದ್ದು, ೨ ಮಹಿಳೆಯರಿಗೆ ಮೀಸಲಾಗಿದೆ. ಸಾಮಾನ್ಯ ವರ್ಗಕ್ಕೆ ೫ ಸ್ಥಾನಗಳಿದ್ದು, ೨ ಮಹಿಳೆಯರಿಗೆ ಮೀಸಲಾಗಿದೆ.