ಮಡಿಕೇರಿ, ಅ. ೬: ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ವಿಂಗಡಣೆಯಲ್ಲಿ ಆಗಿರುವ ನ್ಯೂನತೆ ಸರಿಪಡಿಸಬೇಕು. ಅದೇ ರೀತಿ ಶಾಲಾ ಜಾಗ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಕರಿಕೆ ಗ್ರಾಮದ ಕೋಡಿ ಕೆ. ಪೊನ್ನಪ್ಪ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ೧ನೇ ವಿಭಾಗ ಎಂದು ಪರಿಗಣಿಸಲ್ಪಟ್ಟ ವಾರ್ಡ್ ಇದೀಗ ಮತಗಟ್ಟೆ ಸಂಖ್ಯೆ ೮ ಆಗಿದೆ. ಈ ಹಿಂದೆ ಇದ್ದ ಮೂರು ಸ್ಥಾನಗಳು ಇದೀಗ ೪ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆ ಮೊದಲಿನಂತೆ ೩ ಸ್ಥಾನಕ್ಕೆ ಮಿತಿಗೊಳಿಸಿ ಹೆಚ್ಚುವರಿ ಸ್ಥಾನವನ್ನು ೬ನೇ ವಾರ್ಡ್ಗೆ ಸೇರಿಸಬೇಕು. ಈ ಕುರಿತು ಆಕ್ಷೇಪಣೆಗಳು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬAಧಿಸಿದವರು ತಕ್ಷಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಇದೊಂದು ಅವೈಜ್ಞಾನಿಕ ನೀತಿಯಾಗಿದ್ದು, ಇದರ ಹಿಂದೆ ಕಾಣದ ಕೈಗಳ ಕೈವಾಡ ಇರುವ ಅನುಮಾನವಿದೆ ಎಂದು ಆರೋಪಿಸಿದರು.

ಅದೇ ರೀತಿ ಗ್ರಾಮದ ಶಾಲೆಗೆ ಸೇರಿದ ೮.೪೦ ಎಕರೆ ಜಾಗದ ಪೈಕಿ ಬಹುತೇಕ ಒತ್ತುವರಿಯಾಗಿದ್ದು, ಆ ಜಾಗವನ್ನು ತೆರವುಗೊಳಿಸಿ ಪೂರ್ತಿ ಜಾಗವನ್ನು ಶಾಲೆ ಹೆಸರಿಗೆ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಕೆ.ಬಿ. ರಾಜೇಶ್, ಕೆ.ಎಂ. ಅಬ್ದುಲ್ಲಾ ಹಾಜರಿದ್ದರು.