ಚೆಟ್ಟಳ್ಳಿ, ಅ. ೬: ೧೮ನೇ ವರ್ಷದ ಓಣಂ ಆಚರಣೆಯು ಇಲ್ಲಿನ ಹಿಂದೂ ಮಲಯಾಳಿ ಸಮಾಜ, ವತಿಯಿಂದ ಮಂಗಳ ಸಭಾಂಗಣದಲ್ಲಿ ಸಂಭ್ರಮದಿAದ ನಡೆಯಿತು.
ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗಾಗಿ ವಿವಿಧ ಮನರಂಜನಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನದ ಬಳಿಕ ಸಂಘದ ಅಧ್ಯಕ್ಷೆ ಪಿ.ಕೆ. ಲೀಲಾ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಎಸ್ಎಲ್ಎನ್ ಪ್ಲಾಂಟೇಷನ್ನ ವ್ಯವಸ್ಥಾಪಕ ಕಣ್ಣನ್ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸದಸ್ಯರನ್ನು ಗೌರವಿಸಲಾಯಿತು.