(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಅ. ೬: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ಕೊಡಗು ಜಿಲ್ಲೆಯ ಎರಡು ಕ್ಷೇತ್ರ ಸೇರಿ ಇದೀಗ ಹೊಸದಾಗಿ ೪,೪೩೬ ಮತದಾರರು ಸೇರ್ಪಡೆಯಾಗಿದ್ದಾರೆ.
ಆಗಸ್ಟ್ ೨೪ರಂದು ಪ್ರಕಟಗೊಂಡ ಕರಡು ಮತದಾರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೪,೦೫,೮೦೩ ಮತದಾರರು ಇದ್ದರು. ಇದೀಗ ಮತದಾರರ ಪಟ್ಟಿಯಲ್ಲಿ ೪,೧೦,೨೩೯ ಮತದಾರರು ಇದ್ದಾರೆ. ಪುರುಷ ಮತದಾರರ ಸಂಖ್ಯೆ ೧,೯೮,೨೯೪ ರಿಂದ ೨,೦೦,೩೧೫ಕ್ಕೆ (೨,೦೨೧ ಹೆಚ್ಚಳ) ಏರಿಕೆಯಾಗಿದೆ. ಮಹಿಳೆ ಮತದಾರರ ಸಂಖ್ಯೆ ೨,೦೭,೫೦೫ ರಿಂದ ೨,೦೯,೯೨೦ಕ್ಕೆ (೨,೪೧೫ ಹೆಚ್ಚಳ) ಏರಿಕೆಯಾಗಿದೆ.
೫೨,೨೦೨ ಮಂದಿಯ ವಿಚಾರಣೆ ಪೂರ್ಣ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ ಅನ್ ಮ್ಯಾಪಿಂಗ್ ಅಡಿಯಲ್ಲಿ ಕೊಡಗು ಜಿಲ್ಲೆಯಲ್ಲಿ ೫೮,೮೮೩ ಮತದಾರರಿಗೆ ನೋಟಿಸ್ ಜನರೇಟ್ ಆಗಿದ್ದು, ಇದೀಗ ಎಲ್ಲಾ ನೋಟಿಸ್‌ಗಳ ವಿತರಣೆ ಪೂರ್ಣಗೊಂಡಿದೆ. ವಿತರಿಸಲಾದ ನೋಟಿಸ್‌ಗಳ ಪೈಕಿ ೫೨,೨೦೨ ಮಂದಿಯ ವಿಚಾರಣೆ ಪೂರ್ಣಗೊಂಡಿದ್ದು, ಶೇ.೮೮.೬೫ ಪ್ರಗತಿ ಸಾಧಿಸಲಾಗಿದೆ. ಇನ್ನೂ ೬,೬೮೧ ಮಂದಿಯ ವಿಚಾರಣೆ ಬಾಕಿ ಇದೆ.
೪ ತಿಂಗಳಲ್ಲಿ ೨೬,೬೯೯ ಅರ್ಜಿ ಸಲ್ಲಿಕೆ
ಮತದಾರರ ಪಟ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಜೂನ್ ೧೬ ರಿಂದ ಅಕ್ಟೋಬರ್ ೪, ೨೦೨೬ ರವರೆಗೆ ಕೊಡಗು ಜಿಲ್ಲೆಯಲ್ಲಿ ಒಟ್ಟು ೨೬,೬೯೯ ಫಾರಂಗಳು ಸ್ವೀಕೃತವಾಗಿವೆ. ಹೊಸ ಮತದಾರರ ಸೇರ್ಪಡೆಗೆ ಸಂಬAಧಿಸಿದ ಫಾರಂ-೬ ಮೂಲಕ ೬,೨೫೬ ಅರ್ಜಿಗಳು, ವಿದೇಶದಲ್ಲಿರುವ ಮತದಾರರ ಫಾರಂ-೬A ಮೂಲಕ ೨೨ ಅರ್ಜಿಗಳು ಸಲ್ಲಿಕೆಯಾಗಿವೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಫಾರಂ-೭ ಮೂಲಕ ೧,೧೭೮ ಆಕ್ಷೇಪಣಾ ಅರ್ಜಿಗಳು ಬಂದಿದ್ದರೆ, ತಿದ್ದುಪಡಿ ಮತ್ತು ವರ್ಗಾವಣೆಗೆ ಸಂಬAಧಿಸಿದ ಫಾರಂ-೮ ಮೂಲಕ ಅತಿ ಹೆಚ್ಚು ೧೯,೨೪೩ ಅರ್ಜಿಗಳು ಸಲ್ಲಿಕೆಯಾಗಿವೆ.
ಪ್ರಕರಣ ದಾಖಲು
ಬ್ಯಾಡಗೊಟ್ಟ ಮತಗಟ್ಟೆ ೨೧ರಲ್ಲಿ ೬೪ ಮುಸ್ಲಿಮ್ ಮತದಾರರನ್ನು ಡಿಲೀಟ್ ಮಾಡುವಂತೆ ಸುಳ್ಳು ಮಾಹಿತಿ ನೀಡಿ, ಫಾರಂ೭ ಬಳಸಿ ಬಿಎಲ್‌ಓಗಳಿಗೆ ಆಕ್ಷೇಪಣೆ ಸಲ್ಲಿಸಿದ ಆರೋಪದ ಮೇಲೆ ಬ್ಯಾಡಗೊಟ್ಟ ಗ್ರಾಮದ ಬೂತ್ ಅಧ್ಯಕ್ಷ ಸೇರಿಸಿ ಐವರ ವಿರುದ್ಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಡಗೊಟ್ಟ ಮತಗಟ್ಟೆಯ ಮತದಾರ ಸಫ್ವಾನ್ ಜಿ.ಎಂ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಃಓS ೨೦೨೩ ಕಲಂ ೧೯೦, ೧೯೨, ೩೫೩(೧), ೩೫೩(೨), ೬೧(೨) ಕಾಯ್ದೆ ಅಡಿಯಲ್ಲಿ ಲೋಕೇಶ್ ಯು.ಹೆಚ್, ರಜನಿ, ನಾಗರಾಜ್, ಸವಿತಾ ಮಳಲಿ, ಬಿ.ಎನ್ ಬಸವರಾಜ್, ಬ್ಯಾಡಗೊಟ್ಟ ಇವರ ಮೇಲೆ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?
“ನಾನು ದೊಡ್ಡಕುಂದ ಗ್ರಾಮದ ನಿವಾಸಿಯಾಗಿದ್ದು, ಮಡಿಕೇರಿ ವಿಧಾನಸ¨s
Á ಕ್ಷೇತ್ರದ ಭಾಗ ಸಂಖ್ಯೆ-೨೧ ಬ್ಯಾಡಗೊಟ್ಟ ಮತಗಟ್ಟೆಯ ಮತದಾರನಾಗಿದ್ದೇನೆ. ನಾನು ಮತ್ತು ನನ್ನ ಕುಟುಂಬದ ಒಟ್ಟು ೧೯ ಮಂದಿ ನಮ್ಮ ತಂದೆ-ತಾಯಿ ಹುಟ್ಟಿ ಬೆಳೆದ ಬ್ಯಾಡಗೊಟ್ಟದಲ್ಲಿಯೇ ಹಲವು ವರ್ಷಗಳಿಂದ ವಾಸವಾಗಿದ್ದು ಇದೇ ಸ್ಥಳದ ಮತದಾರರಾಗಿದ್ದೇವೆ. ವಿವಿಧ ಚುನಾವಣೆಗಳಲ್ಲಿ ನಿರಂತರವಾಗಿ ಮತದಾನ ಮಾಡುತ್ತಾ ಬಂದಿದ್ದೇವೆ.
ಆದರೆ ನಮ್ಮ ೧೯ ಮಂದಿಯ ಹೆಸರನ್ನು ಅಳಿಸುವ ಉದ್ದೇಶದಿಂದ ಬ್ಯಾಡಗೊಟ್ಟದ ಬಿಜೆಪಿ ಬೂತ್ ಅಧ್ಯಕ್ಷ ಯು.ಹೆಚ್ ಲೋಕೇಶ್, ಅವರ ಪತ್ನಿ ರಜನಿ, ಬೂತ್ ಏಜೆಂಟ್ ಎ.ಸಿ ನಾಗರಾಜ್ @ ನಾಗೇಶ್, ಅವರ ಪತ್ನಿ ಸವಿತಾ ಮಳಲಿ ಮತ್ತು ಬಿ.ಎನ್ ಬಸವರಾಜ್ ಅವರು ನಮ್ಮ ವಾಸಸ್ಥಳದ ಬಗ್ಗೆ ತಿಳಿದಿದ್ದರೂ, ೦೧.೧೦.೨೦೨೬ ರಂದು ರಾತ್ರಿ ೮.೩೦ಕ್ಕೆ ವಿಚಾರಣೆಗೆ ಬಂದಿದ್ದೆವು ಎಂದು ಸುಳ್ಳು ಕಾರಣ ನೀಡಿ, ಮತಗಟ್ಟೆ ಅಧಿಕಾರಿ ನಿರ್ಮಲ ಅವರಿಗೆ ಫಾರಂ-೭ ಸಲ್ಲಿಸಿದ್ದಾರೆ.
ನಾವು ಗ್ರಾಮದಲ್ಲಿಯೇ ವಾಸವಿದ್ದರೂ ಗೈರು ಹಾಜರು ಅಥವಾ ಅರ್ಹರಲ್ಲ ಎಂದು ಸುಳ್ಳು ಹೇಳಿ ಹೆಸರು ಅಳಿಸಲು ಯತ್ನಿಸಿರುವುದು ಸಂವಿಧಾನಬದ್ಧ ಮತದಾನದ ಹಕ್ಕಿಗೆ ಧಕ್ಕೆ ತರುವ ಗಂಭೀರ ಕೃತ್ಯ. ಗ್ರಾಮದಲ್ಲಿ ವಿಚಾರಿಸಿದಾಗ ನಮ್ಮ ೧೯ ಮಂದಿ ಸೇರಿ ಬ್ಯಾಡಗೊಟ್ಟ ಮತ್ತು ದೊಡ್ಡಕುಂದದ ಒಟ್ಟು ೬೪ ಜನರ ಹೆಸರನ್ನು ಇದೇ ರೀತಿ ಅಳಿಸಲು ಫಾರಂ-೭ ಸಲ್ಲಿಸಿರುವುದು ಗೊತ್ತಾಗಿದೆ. ಇದು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೋಮು ದ್ವೇಷ ಹರಡಿ ದ್ವೇಷ ರಾಜಕಾರಣ ಮಾಡುವ ಉದ್ದೇಶದ ಹುನ್ನಾರವಾಗಿದೆ. ಆದ್ದರಿಂದ ಮೇಲ್ಕಂಡ ವ್ಯಕ್ತಿಗಳು ಮತ್ತು ಪೂರ್ವ ಮುದ್ರಿತ ಫಾರಂ-೭ ಸೃಷ್ಟಿಸಿ ಕುಮ್ಮಕ್ಕು ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಸಫ್ವಾನ್ ದೂರಿನಲ್ಲಿ ತಿಳಿಸಿದ್ದಾರೆ.