ಮಡಿಕೇರಿ, ಸೆ. ೬: ಮಡಿಕೇರಿ ದಸರಾ ಉತ್ಸವದ ವಿಜಯದಶಮಿಯಂದು ನಡೆಯುವ ದಶಮಂಟಪಗಳ ಶೋಭಾಯಾತ್ರೆ ಸಂದರ್ಭ ಡಿಜೆ ಧ್ವನಿವರ್ಧಕ ಬಳಸಲು ಅನುಮತಿ ನೀಡಲು ರಾಜ್ಯ ಸರಕಾರ ಹಾಗೂ ಕೊಡಗು ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಕೋರಿ ಮಡಿಕೇರಿ ದಸರಾ ದಶಮಂಟಪ ಸಮಿತಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಪಾಂಡಿರ ಪೂಣಚ್ಚ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೊಡಗು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು (ಕೆಎಸ್ಪಿಎಸ್) ಪ್ರತಿವಾದಿ ಮಾಡಲಾಗಿದೆ. ಅ.೨೧ ಮತ್ತು ೨೨ರಂದು ಮಡಿಕೇರಿಯಲ್ಲಿ ದಸರಾ ಮಹೋತ್ಸವ ಆಚರಣೆ ಮಾಡಲಾಗುತ್ತದೆ.
ಮಡಿಕೇರಿಯಲ್ಲಿ ದಸರಾ ಮಹೋತ್ಸವದಲ್ಲಿ ೧೦ ದೇವಸ್ಥಾನಗಳ ಸಮಿತಿಗಳು ಪ್ರತಿಯೊಂದು ದೇವಸ್ಥಾನದ ಪರಿಕಲ್ಪನೆಯಲ್ಲಿ ಸ್ತಬ್ಧಚಿತ್ರವನ್ನು ಮೆರವಣಿಗೆ ಮಾಡಲಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಪ್ರತಿ ದೇವಸ್ಥಾನದ ಸ್ತಬ್ಧಚಿತ್ರದ ಮೆರವಣಿಗೆಯು ಆಯಾ ದೇವಸ್ಥಾನದ ಆವರಣದಿಂದ ಆರಂಭವಾಗಿ ರಾತ್ರಿ ೧೦ಕ್ಕೆ ತಿಮ್ಮಯ್ಯ ವೃತ್ತದ ಬಳಿ ಸೇರುತ್ತವೆ. ಅಲ್ಲಿಂದ ಬೆಳಿಗ್ಗೆ ಆರು ಗಂಟೆಯವರೆಗೆ ಸ್ತಬ್ಧಚಿತ್ರ ಮೆರವಣಿಗೆಯು ರಾಜಬೀದಿ ಮಾರ್ಗವಾಗಿ ಬನ್ನಿಮಂಟಪವರೆಗೆ ಸಾಗುತ್ತದೆ. ದೀಪಾಲಂಕಾರ ಮತ್ತು ಡಿಜೆ ಧ್ವನಿವರ್ಧಕ ನಡುವೆ ಸಾಗುತ್ತದೆ. ಇದು ಮಡಿಕೇರಿ ದಸರಾ ಸಮಾರಂಭದ ಮುಖ್ಯ ಆಕರ್ಷಣೆಯಾಗಿದ್ದು, ಸ್ತಬ್ಧಚಿತ್ರ ಮೆರವಣಿಗೆಯನ್ನು ಹಲವು ವರ್ಷಗಳಿಂದ ಮಡಿಕೇರಿ ಪಟ್ಟಣದಲ್ಲಿ ನಡೆಸಲಾಗುತ್ತಿದೆ. ಅ.೨೧ ಮತ್ತು ೨೨ರಂದು ಡಿಜೆ ಧ್ವÀನಿವರ್ಧಕ ಬಳಕೆಗೆ ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿ ೧೫ ದಿನ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕಳೆದು ಸರ್ಕಾರದಿಂದ ಈವರೆಗೆ ತಮಗೆ ಅನುಮತಿ ಸಿಕ್ಕಿಲ್ಲ. ಹೀಗಾಗಿ, ನಮ್ಮ ಮನವಿ ಪತ್ರ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.
ಈ ಅರ್ಜಿ ಸಂಬAಧ ಇಂದು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಸರ್ಕಾರದ ವಕೀಲರು, ಹೈಕೋರ್ಟ್ ವಕೀಲ ಅಮೃತೇಶ್ ಹಾಗೂ ದಶಮಂಟಪ ಸಮಿತಿಯ ವಕೀಲರು ತಮ್ಮತಮ್ಮ ವಾದ ಮಂಡಿಸಿದ್ದು, ಈ ಕುರಿತು ವಿಚಾರಣೆ ತಾ. ೯ಕ್ಕೆ ಮುಂದೂಡಲ್ಪಟ್ಟಿದೆ.