ಮಡಿಕೇರಿ, ಅ. ೫: ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮಾಹಿತಿ - ಮಾರ್ಗಸೂಚನಾ ಫಲಕಗಳನ್ನು ಹೊಸದಾಗಿ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯ ವಿವಿಧೆಡೆಗಳಲ್ಲಿ ಇಂತಹ ಒಟ್ಟು ೮೦ ಬೋರ್ಡ್ (ಫಲಕಗಳು) ಇದ್ದು ಇವೆಲ್ಲವೂ ಬಹುತೇಕ ಮಳೆ - ಗಾಳಿಯ ಪರಿಣಾಮವಾಗಿ ದುರಸ್ತಿಗೀಡಾಗಿ ಅನುಪಯುಕ್ತಗೊಂಡAತಿದ್ದವು.
ಇದೀಗ ಈ ಸೂಚನಾ ಫಲಕಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅನುಮೋದನೆ ಪಡೆದು ಸರಿಪಡಿಸಲಾಗುತ್ತಿದೆ. ರೂ. ೧೨.೩೫ ಲಕ್ಷ ವೆಚ್ಚದಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಈ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇರುವ ಫಲಕಗಳ ಶುಚಿತ್ವ, ಮರು ಸ್ಟಿಕ್ಕರಿಂಗ್ನAತಹ ಕೆಲಸಗಳನ್ನು ಅಲ್ಲಲ್ಲಿನ ಅಗತ್ಯತೆಯಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಶುಚಿತ್ವದಂತಹ ಒಂದು ಸುತ್ತಿನ ಕೆಲಸ ಮುಗಿದಿದ್ದು, ಇತರ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ.