ಬೆಂಗಳೂರು, ಅ. ೫: ಏಷ್ಯನ್ ಗೇಮ್ಸ್ ರಿಲೆಯಲ್ಲಿ ಚಿನ್ನ ಪದಕ ಗೆದ್ದ ಎಂ.ಆರ್. ಪೂವಮ್ಮ ಅವರನ್ನು ಬೆಂಗಳೂರಿನಲ್ಲಿ ಸೋಮವಾರ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸನ್ಮಾನಿಸಿದರು.
ಸಚಿವರ ಆಹ್ವಾನದ ಮೇರೆಗೆ ಮಂಗಳೂರಿನಿAದ ಬೆಂಗಳೂರಿಗೆ ಆಗಮಿಸಿದ ಪೂವಮ್ಮ ಅವರನ್ನು ಹೆಚ್‌ಎಂಟಿ ಭವನದಲ್ಲಿರುವ ತಮ್ಮ ಕಚೇರಿಗೆ ಬರಮಾಡಿಕೊಂಡ ಕೇಂದ್ರ ಸಚಿವರು ಸನ್ಮಾನಿಸಿ ಗೌರವಿಸಿದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪೂವಮ್ಮ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಚಿವರು; “ನಿಮ್ಮ ಸಾಧನೆ ಮತ್ತು ಪರಿಶ್ರಮ ಹೊಸ ತಲೆಮಾರಿನ ಯುವಜನರಿಗೆ ಸ್ಪೂರ್ತಿಯಾಗಲಿ. ನಿಮ್ಮಿಂದ ರಾಜ್ಯದ ಮತ್ತು ರಾಷ್ಟçದ ಕ್ರೀಡೆಗೆ ದೊಡ್ಡ ಕೊಡುಗೆ ದೊರೆಯುವಂತಾಗಲಿ'' ಎಂದು ಹಾರೈಸಿದರು. ಅಲ್ಲದೆ ಪೂವಮ್ಮ ಸಾಧನೆಗೆ ಕೇಂದ್ರ ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಪ್ರೋತ್ಸಾಹ ನೀಡುವುದಾಗಿ ಹೇಳಿದರು. ಪೂವಮ್ಮ ಪೋಷಕರು ಹಾಗೂ ಕುಟುಂಬದವರು ಈ ಸಂದರ್ಭ ಹಾಜರಿದ್ದರು.
ಸಚಿವರು ಹೆಚ್‌ಎಂಟಿ ಕೈಗಡಿಯಾರಗಳನ್ನು ಎಲ್ಲರಿಗೂ ಉಡುಗೊರೆಯಾಗಿ ನೀಡಿದರು. ಕೇಂದ್ರ ಸಚಿವರೆ ನನ್ನನ್ನು ಖುದ್ದಾಗಿ ಬರಮಾಡಿಕೊಂಡು ಗೌರವಿಸಿರುವುದು ನನ್ನ ಬದುಕಿನ ಆವಿಸ್ಮರಣೀಯ ಕ್ಷಣವಾಗಿದೆ ಎಂದು ಪೂವಮ್ಮ ಹರ್ಷ ವ್ಯಕ್ತಪಡಿಸಿದರು.