ಮಡಿಕೇರಿ, ಅ. ೫: ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಕ್ರೀಡೆಗಳ ಸದ್ದು ಸದಾ ಮೊಳಗುತ್ತಲೇ ಇರುತ್ತದೆ. ಕ್ರಿಕೆಟ್, ಹಾಕಿ, ಥ್ರೋಬಾಲ್‌ನಿಂದ ಹಿಡಿದು ಮಳೆಗಾಲದ ಕೆಸರುಗದ್ದೆ ಕ್ರೀಡಾಕೂಟದವರೆಗೆ, ಇತ್ತೀಚಿನ ವರ್ಷಗಳಲ್ಲಿ ಕೌಟುಂಬಿಕ ಹಗ್ಗಜಗ್ಗಾಟ, ಕಬಡ್ಡಿ ಸೇರಿದಂತೆ ನಾನಾ ಬಗೆಯ ಕ್ರೀಡೆಗಳು ಜನರನ್ನು ತನ್ನತ್ತ ಸೆಳೆಯುತ್ತಿವೆ.
ಕೊಡಗಿನ ಮಣ್ಣಿನ ಸಾಂಪ್ರದಾಯಿಕ ಕ್ರೀಡಾ ಸಂಸ್ಕೃತಿಗೆ ಹೊಸ ಆಯಾಮವನ್ನು ನೀಡುವಂತೆ ಕಳೆದ ವರ್ಷದಿಂದ ಆರಂಭಗೊAಡಿರುವ ‘ತೋಕ್ ನಮ್ಮೆ’ (ಶೂಟಿಂಗ್) ಕೂಡ ಇದೀಗ ಕ್ರೀಡಾಸಕ್ತರ ಗಮನ ಸೆಳೆಯುತ್ತಿದೆ. ಕೊಡವರ ಸಾಂಪ್ರದಾಯಿಕ ಜೀವನಶೈಲಿ ಹಾಗೂ ಶೌರ್ಯ ಪರಂಪರೆಯೊAದಿಗೆ ನಂಟು ಹೊಂದಿರುವ ಶೂಟಿಂಗ್ ಕ್ರೀಡೆ, ಗ್ರಾಮೀಣ ಮಟ್ಟದಲ್ಲಿ ಉತ್ಸಾಹದ ವಾತಾವರಣ ಸೃಷ್ಟಿಸುವುದರೊಂದಿಗೆ ಕೊಡಗಿನ ಕ್ರೀಡಾ ವೈವಿಧ್ಯತೆಗೆ ಮತ್ತೊಂದು ವಿಭಿನ್ನ ಸೇರ್ಪಡೆಯಾಗಿದೆ.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಯೋಜಕರು ಮಾಹಿತಿ ನೀಡಿದರು.
ಸದಸ್ಯ ಕೀರ್ತನ್ ತಮ್ಮಯ್ಯ ಮಾತನಾಡಿ, ಈ ಬಾರಿ ಆಲೆಮಾಡ ಕುಟುಂಬ ತೋಕ್ ನಮ್ಮೆಯ ಆತಿಥ್ಯ ವಹಿಸಿದ್ದು, ಸಕಲ ಸಿದ್ಧತೆಯನ್ನು ಕೈಗೊಂಡಿದೆ. ತಾ. ೧೦ ಹಾಗೂ ೧೧ ರಂದು ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ೨೦೫ ಕುಟುಂಬಗಳನ್ನು ಪ್ರತಿನಿಧಿಸುವ ೩೭೯ ತಂಡಗಳ ಒಟ್ಟು ೭೫೮ ಸ್ಪರ್ಧಿಗಳು ನೋಂದಾಯಿಸಿಕೊAಡಿದ್ದಾರೆ. ಸ್ಪರ್ಧೆಯನ್ನು ನಾಲ್ಕು ಗುಂಪುಗಳಾಗಿ ನಡೆಸಲಾಗುತ್ತದೆ. ಪ್ರತಿ ಗುಂಪಿನಿAದ ಅಗ್ರಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದ್ದು, ನಂತರ ಅಂತಿಮ ಹಂತ ನಡೆಯಲಿದೆ. ೧೨ ಬೋರ್ ಹಾಗೂ ಪಾಯಿಂಟ್ ೨೨ ವಿಭಾಗದಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಪ್ರಥಮ ರೂ. ೬೦ ಸಾವಿರ, ದ್ವಿತೀಯ ರೂ. ೫೦ ಸಾವಿರ, ತೃತೀಯ ೪೦ ಸಾವಿರ, ನಾಲ್ಕನೇ ರೂ. ೩೦ ಸಾವಿರ, ಐದನೇ ರೂ. ೨೦ ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.
ಇದರೊಂದಿಗೆ ಏರ್‌ಗನ್ ವಿಭಾಗದಲ್ಲೂ ಸ್ಪರ್ಧೆ ನಡೆಯಲಿದ್ದು, ಈ ವಿಭಾಗಕ್ಕೆ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲು ಅವಕಾಶ ಮಾಡಿಕೊಳ್ಳಲಾಗಿದೆ. ಈ ವಿಭಾಗದಲ್ಲಿ ವಿಜೇತರಿಗೆ ಪ್ರಥಮ ರೂ. ೧೦ ಸಾವಿರ, ದ್ವಿತೀಯ ೭,೫೦೦, ತೃತೀಯ ರೂ. ೫ ಸಾವಿರ ಬಹುಮಾನ ನೀಡಲಾಗುವುದು. ಉತ್ತಮ ಗನ್ ನಿರ್ವಹಣೆ, ಉದಯೋನ್ಮುಖ ಶೂಟರ್, ಹಿರಿಯ ಶೂರ‍್ಸ್ಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದರು.
೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ತಾ. ೧೦ ರ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಶಾಸಕ ಎ.ಎಸ್. ಪೊನ್ನಣ್ಣ, ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ, ಉದ್ಯಮಿ ಆಲೆಮಾಡ ಎಸ್. ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ಕ್ರೀಡಾ ಸಾಧಕರಾದ ಬೊಪ್ಪಂಡ ದಿಯಾ ಭೀಮಯ್ಯ, ತೀತಮಾಡ ಸಿಂಚಲ್ ಕಾವೇರಮ್ಮ, ಚಂದುರ ಪೂವಣ್ಣ, ಮಂಡೇಟಿರ ತಿಲಕ್ ಅವರುಗಳನ್ನು ಸನ್ಮಾನಿಸಲಾಗುವುದು ಎಂದು ಕೀರ್ತನ್ ವಿವರಿಸಿದರು.
ತಾ. ೧೧ ರಂದು ಸಂಜೆ ೫ ಗಂಟೆಗೆ ಭಾರತೀಯ ಮಾಜಿ ಹಾಕಿ ಆಟಗಾರ ಚೆಪ್ಪುಡಿರ ಎಸ್. ಪೂಣಚ್ಚ, ಮೂಕಳೇರ ಕುಶಾಲಪ್ಪ, ಪೆಮ್ಮಂಡ ಕುಟುಂಬದ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ಆಲೆಮಾಡ ಬಬ್ಬು ಕಾರ್ಯಪ್ಪ, ಆಲೆಮಾಡ ಲಲಿತಾ ಶ್ರೀನಿವಾಸ್ ಭಾಗವಹಿಸಲಿದ್ದಾರೆ ಎಂದು ಹೇಳಿದ ಅವರು, ಸುಮರು ೨ ಸಾವಿರ ಮಂದಿ ಸೇರುವ ನಿರೀಕ್ಷೆಯಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಗೋಷ್ಠಿಯಲ್ಲಿ ಆಲೆಮಾಡ ಕುಟುಂಬದ ಅಧ್ಯಕ್ಷ ಎ.ಎನ್. ದೇವಯ್ಯಮ ಉಪಾಧ್ಯಕ್ಷ ಮುತ್ತಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಸೋಮಣ್ಣ, ಉಪಾಧ್ಯಕ್ಷ ಆಲೆಮಾಡ ಸುಧೀರ್ ಹಾಜರಿದ್ದರು.