ಮಡಿಕೇರಿ, ಅ. ೫: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗದ ವತಿಯಿಂದ ಕಾವೇರಿ ದರ್ಶನ - ಕೊಡಗಿನ ಸೊಬಗು ಎಂಬ ವಿಶೇಷ ಪ್ರಯಾಣ ಪ್ಯಾಕೇಜ್ ಅನ್ನು ಸಾರ್ವಜನಿಕರಿಗಾಗಿ ಘೋಷಿಸಲಾಗಿದೆ. ಕೊಡಗಿನ ಅನುಭವ ಭಕ್ತಿಯ ಪಯಣ, ಪ್ರಕೃತಿಯ ಮಡಿಲು ಎಂಬ ಚಿಂತನೆಯನ್ನು ಒಳಗೊಂಡAತೆ ಅಕ್ಟೋಬರ್ ೧೧ ರಿಂದ ೨೫ರ ತನಕ ಈ ವಿಶೇಷ ಪ್ರಯಾಣದ ಅನುಭವವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.
ಪ್ರಯಾಣ ಮಾರ್ಗ
ಮಡಿಕೇರಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪ್ರಾರಂಭದ ಸ್ಥಳವಾಗಿದೆ. ಕಾವೇರಿ ದರ್ಶನ ಪ್ಯಾಕೇಜ್‌ನಂತೆ, ಓಂಕಾರೇಶ್ವರ ದೇವಸ್ಥಾನ, ಇಗ್ಗುತಪ್ಪ ದೇವಸ್ಥಾನ, ಭಾಗಮಂಡಲ, ತಲಕಾವೇರಿ, ಅಬ್ಬಿಫಾಲ್ಸ್, ರಾಜಾಸೀಟ್ ಪ್ರಯಾಣ ಮಾರ್ಗವಾಗಿದೆ.
ಕೊಡಗಿನ ಸೊಬಗು ಪ್ರಯಾಣ ಮಾರ್ಗದಲ್ಲಿ ಓಂಕಾರೇಶ್ವರ ದೇವಸ್ಥಾನ, ಹಾರಂಗಿ ಡ್ಯಾಮ್, ಆನೆಕ್ಯಾಂಪ್, ಗೋಲ್ಡನ್ ಟೆಂಪಲ್, ನಿಸರ್ಗಧಾಮ, ಕಾಫಿ ಪ್ಲಾಂಟೇಶನ್ ಟೂರ್, ಅಬ್ಬಿಫಾಲ್ಸ್, ರಾಜಾಸೀಟ್ ಈ ಪ್ಯಾಕೇಜ್‌ನ ಪ್ರಯಾಣದ ಮಾರ್ಗವಾಗಿದೆ.
ಟಿಕೆಟ್ ದರ
ಟಿಕೆಟ್ ದರ ದೊಡ್ಡವರಿಗೆ ರೂ. ೪೦೦ ಹಾಗೂ ಮಕ್ಕಳಿಗೆ ರೂ. ೩೦೦ ಎಂದು ನಿಗದಿಪಡಿಸಲಾಗಿದೆ.
ಪ್ರಾರಂಭದ ಸಮಯ
ಈ ಪ್ರಯಾಣದ ಪ್ರಾರಂಭದ ಸಮಯ ಬೆಳಿಗ್ಗೆ ೬.೩೦ ಆಗಿರುತ್ತದೆ. ಹೆಚ್ಚಿನ ವಿವರಕ್ಕೆ ೬೩೬೦೩೦೮೯೬೩, ೯೪೮೧೧೦೬೩೫೧ ಅಥವಾ ೯೭೩೧೦೬೮೬೩೭ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು. ರಿಸರ್ವೇಶನ್‌ಗಾಗಿ ತಿತಿತಿ.ಞsಡಿಣಛಿ.iಟಿ ಅನ್ನು ಗಮನಿಸಬಹುದು.