ಸುಂಟಿಕೊಪ್ಪ, ಅ. ೪: ಕುವೈತ್‌ನಿಂದ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿ ಕೆಂಪೇಗೌಡ ಅಂತರರಾಷ್ಟಿçÃಯ ವಿಮಾನ ನಿಲ್ದಾಣದಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಸುಂಟಿಕೊಪ್ಪದ ಕೆಇಬಿ ಸಮೀಪದ ಮಾಸ್ಟರ್ ಬಡಾವಣೆ ನಿವಾಸಿ, ದಿ. ಮಮ್ಮದ್ ಅವರ ಪುತ್ರ ಬಶೀರ್ (೫೨) ಮೃತ ದುರ್ದೈವಿ.

ಉದ್ಯೋಗ ನಿಮಿತ್ತ ಕೆಲವು ವರ್ಷಗಳ ಹಿಂದೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕುವೈತ್‌ಗೆ ತೆರಳಿದ್ದ ಬಶೀರ್ ಅವರಿಗೆ ರಜೆ ದೊರೆತ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ಮರಳಿದ್ದರು. ಆದರೆ ಮನೆ ಸೇರುವ ಮುನ್ನವೇ ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಘಟನೆ ಕುರಿತು ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಸುಂಟಿಕೊಪ್ಪಕ್ಕೆ ತರಲಾಗುತ್ತದೆ. ಬಳಿಕ ೭ನೇ ಹೊಸಕೋಟೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿದುಬಂದಿದೆ. ಮೃತÀರು ಪತ್ನಿ ಹಾಗೂ ಪುತ್ರಿಯರನ್ನು ಅಗಲಿದ್ದಾರೆ.