ನವದೆಹಲಿ, ಅ. ೩: ಸೆ.೩೦ ರಂದು ದುಬೈನಿಂದ ಇಸ್ರೇಲ್‌ಗೆ ಬಹುತೇಕ ಇಸ್ರೇಲ್ ನಾಗರಿಕರೇ ಇದ್ದ ೧೭೪ ಪ್ರಯಾಣಿಕರನ್ನೊಳಗೊಂಡ ವಿಮಾನದ ಮುಖ್ಯ ಪೈಲೆಟ್ ಭಾರತೀಯ ಸ್ಮಿಟ್ ಮಚ್ಚಾರ್ ಅವರ ಮೇಲೆ ಹಲ್ಲೆ ನಡೆಸಿ ವಿಮಾನದ ಪತನಕ್ಕೆ ಯತ್ನಿಸಿದ್ದ ಕೋ-ಪೈಲೆಟ್‌ಅನ್ನು ಓಮಾನ್ ದೇಶದ ಹಮಾಮ್ ಅಲಹ್ಮಾಮಿ ಎಂದು ಗುರುತಿಸಲಾಗಿದೆ. ಈತ ಈ ಹಿಂದೆಯೇ ಉಗ್ರವಾದಿ ಸಿದ್ಧಾಂತಗಳನ್ನು ಅನುಸರಿಸುತ್ತಿದ್ದ ಎಂಬ ಕಾರಣಕ್ಕೆ ತಮ್ಮ ತಾಯ್ನಾಡಾದ ಓಮಾನ್‌ನಲ್ಲಿಯೇ ವಿಮಾನ ಹಾರಾಟದಿಂದ ನಿರ್ಬಂಧಿಸಲ್ಪಟ್ಟಿದ್ದ ಎಂದು ವರದಿಯಾಗಿದೆ.
‘ವಾಲ್ ಸ್ಟಿçÃಟ್ ಜರ್ನಲ್’ ವರದಿಯ ಪ್ರಕಾರ, ಹಮಾಮ್‌ನ ತಂದೆ ಓಮಾನ್ ದೇಶದವರಾಗಿದ್ದು, ತಾಯಿ ಸಿರಿಯಾದವರೆಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಹಮಾಮ್ ಅಲಹ್ಮಾಮಿ ತನ್ನ ಹೆಚ್ಚಿನ ಸಮಯವನ್ನು ಸಿರಿಯಾದಲ್ಲಿ ಕಳೆದಿದ್ದು, ಅಲ್ಲಿ ಉಗ್ರವಾದಿ ವಿಚಾರಗಳಿಂದ ಪ್ರಭಾವಿತನಾಗಿದ್ದ ಎಂದು ತಿಳಿದುಬಂದಿದೆ.
೨೦೨೪ರಲ್ಲಿ ‘ಓಮಾನ್ ಏರ್’ನಲ್ಲಿ ಸಹ-ಪೈಲಟ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾಗ ಹಮಾಮ್ ಅಲಹ್ಮಾಮಿ ಬಳಿ ಉಗ್ರವಾದಿ ಸಿದ್ಧಾಂತಕ್ಕೆ ಸಂಬAಧಿಸಿದ ಪರಿಕರಗಳು ಪತ್ತೆಯಾಗಿದ್ದವು ಎಂದು ವರದಿಗಳು ತಿಳಿಸಿವೆ.
ಅವನನ್ನು ಆಡಳಿತಾತ್ಮಕ ಹುದ್ದೆಯಲ್ಲಿ ಮುಂದುವರಿಯಲು ಅನುಮತಿಸಲಾಯಿತಾದರೂ, ಭದ್ರತೆಗೆ ಅಪಾಯಕಾರಿ ಎಂದು ಪರಿಗಣಿಸಲಾದ ಕಾರಣ ವಿಮಾನ ಹಾರಾಟದಿಂದ ನಿರ್ಬಂಧಿಸಲಾಯಿತು. ಈ ನಿರ್ಬಂಧದ ಹೊರತಾಗಿಯೂ, ದುಬೈ ಮೂಲದ ವಿಮಾನಯಾನ ಸಂಸ್ಥೆಯಾದ ‘ಫ್ಲೆöÊದುಬೈ’ ಅವನನ್ನು ಕೆಲಸಕ್ಕೆ ನೇಮಿಸಿಕೊಂಡಿತು ಮತ್ತು ಯುಎಇ ಹಾಗೂ ಇಸ್ರೇಲ್‌ಅನ್ನು ಸಂಪರ್ಕಿಸುವ ಸೂಕ್ಷö್ಮ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲು ಅವಕಾಶ ನೀಡಿತು.
ಸೆ.೩೦ ರಂದು ಈತ ಭಾರತೀಯ ಪೈಲೆಟ್‌ಅನ್ನು ಹತ್ಯೆ ಮಾಡಲೆತ್ನಿಸಿ ವಿಮಾನವನ್ನು ಪತನಗೊಳಿಸುವ ಸಂಚು ರೂಪಿಸಿದ್ದ, ಆದರೆ ಭಾರತೀಯ ಪೈಲೆಟ್ ಸ್ಮಿಟ್ ಮಚ್ಚಾರ್ ಅವರು ಕಾಕ್‌ಪಿಟ್ ಬಾಗಿಲನ್ನು ತೆರದು ಪ್ರಯಾಣಿಕರು ಒಳಬರಲು ಅವಕಾಶ ಮಾಡಿ ಈತನನ್ನು ಹಾಗೂ ನಂತರ ವಿಮಾನವನ್ನು ನಿಯಂತ್ರಣಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿ ೧೭೪ ಮಂದಿಯ ಜೀವ ರಕ್ಷಣೆ ಮಾಡಿದರು. ಸ್ಮಿಟ್ ಮಚ್ಚಾರ್ ಸದ್ಯ ಅಬುದಾಬಿಯಲ್ಲಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಇಂದು ಯು.ಎ.ಇ ಉಪ ಪ್ರಧಾನಿ ಹಮ್‌ದನ್ ಬಿನ್ ಮೊಹಮ್ಮದ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.