ಗೋಣಿಕೊಪ್ಪ ವರದಿ, ಅ. ೩: ಗೋಣಿಕೊಪ್ಪದಲ್ಲಿ ಯುವ ದಸರಾ ಆಚರಣೆ ಕಾರ್ಯಕ್ರಮ ತಾ. ೧೯ ರಂದು ನಡೆಯಲಿದೆ.
ತಾ. ೧೮ ರಂದು ದಸರಾ ಚಾಂಪಿಯನ್ಸ್ ಜಿಲ್ಲಾ ಮಟ್ಟದ ಸೆವೆನ್ ಸೈಡ್ ಫುಟ್ಬಾಲ್ ಟೂರ್ನಿ ಬೈಪಾಸ್ ರಸ್ತೆಯ ವೆಂಬ್ಸಿ ಟರ್ಫ್ ಮೈದಾನದಲ್ಲಿ ನಡೆಯಲಿದೆ. ತಾ. ೧೯ ರಂದು ಬೆಳಗ್ಗೆ ೬ ಗಂಟೆಗೆ ಜಿಲ್ಲಾ ಮಟ್ಟದ ಸೈಕಲ್ ರೇಸ್ ನಡೆಯಲಿದ್ದು, ೧೬ ವರ್ಷದೊಳಗಿನ ಬಾಲಕ, ಬಾಲಕಿಯರು ಮುಕ್ತವಾಗಿ ಭಾಗವಹಿಸಬಹುದಾಗಿದೆ.
ಫುಟ್ಬಾಲ್ ಸೆಮಿಫೈನಲ್ ಪಂದ್ಯ ತಾ. ೧೯ ರಂದು ಮಧ್ಯಾಹ್ನ ೧೨ ಗಂಟೆಗೆ ನಡೆಯಲಿದೆ. ಮಧ್ಯಾಹ್ನ ೨ ಗಂಟೆಗೆ ಗೋಣಿಕೊಪ್ಪ ಕೊಳ್ಳಿಮಾಡ ಕರುಂಬಯ್ಯ ಬಸ್ ನಿಲ್ದಾಣದ ಎದುರು ಕೊಡಗು ಸೂಪರ್ ಬೈಕ್ ಎಕ್ಸೊ÷್ಪÃ ನಡೆಯಲಿದೆ. ಸಂಜೆ ೬ ಗಂಟೆಗೆ ಕಾವೇರಿ ಕಲಾ ವೇದಿಕೆಯಲ್ಲಿ ದಸರಾ ನೃತ್ಯ ವೈಭವ, ಹಾಗೂ ಯುವ ಜನೋತ್ಸವ ಅಂತರ ಕಾಲೇಜು ನೃತ್ಯ ಸ್ಪರ್ಧೆ ನಡೆಯಲಿದೆ ಎಂದು ಯುವ ದಸರಾ ಸಮಿತಿ ಅಧ್ಯಕ್ಷ ನಾಮೇರ ಅಂಕಿತ್ ಪೊನ್ನಪ್ಪ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ೮೦೮೮೯೭೮೮೦೮, ೯೬೧೧೬೪೦೫೫೨ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಮಹಿಳಾ ದಸರಾ
ಗೋಣಿಕೊಪ್ಪ ಮಹಿಳಾ ದಸರಾ ತಾ. ೧೪ ರಂದು ಕಾವೇರಿ ಕಲಾ ವೇದಿಕೆಯಲ್ಲಿ ನಡೆಯಲಿದೆ ಎಂದು ಮಹಿಳಾ ದಸರಾ ಅಧ್ಯಕ್ಷೆ ಮಂಜುಳ ತಿಳಿಸಿದ್ದಾರೆ. ವಿವಾಹಿತ ಮಹಿಳೆಯರಿಗೆ ಮಾತ್ರ ಭಾಗವಹಿಸಲು ಅವಕಾಶ ಇದೆ. ಮಾರಾಟ ಮಳಿಗೆ, ಥ್ರೋಬಾಲ್, ಹಗ್ಗಜಗ್ಗಾಟ, ಕಪ್ ಜೋಡಣೆ, ಬಾಂಬ್ ಇನ್ ದ ಸಿಟಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಗೀತೆ, ರೆಟ್ರೊ ಶೈಲಿಯ ಗುಂಪು ನೃತ್ಯ, ಛದ್ಮವೇಷ ಸ್ಪರ್ಧೆ ನಡೆಯಲಿದೆ.
ಮಾರಾಟ ಮಳಿಗೆಯಲ್ಲಿ ಮಹಿಳೆಯರು ಉತ್ಪಾದಿಸಿದ ಉತ್ಪನ್ನ ಪ್ರದರ್ಶನ, ಮಾರಾಟ ನಡೆಯಲಿದೆ. ಥ್ರೋಬಾಲ್‌ನಲ್ಲಿ ಕನಿಷ್ಟ ೭ ಜನರು ಭಾಗವಹಿಸಬಹುದಾಗಿದೆ. ಮುಕ್ತ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.
ಹಗ್ಗಜಗ್ಗಾಟದಲ್ಲಿ ಮುಕ್ತ ವಿಭಾಗದಲ್ಲಿ ೭ ಸ್ಪರ್ಧಿಗಳು ಭಾಗವಹಿಸಬಹುದಾಗಿದೆ. ಕಪ್ ಜೋಡಣೆ ಮುಕ್ತ ಸ್ಪರ್ಧೆಯಲ್ಲಿ ೫೦ ವರ್ಷ ಮೇಲ್ಪಟ್ಟವರಿಗೆ ಅವಕಾಶ ಇದೆ. ಬಾಂಬ್ ಇನ್ ದ ಸಿಟಿ ಸ್ಪರ್ಧೆ ಮುಕ್ತ ವಿಭಾಗದಲ್ಲಿ ನಡೆಯಲಿದೆ. ಜಾನಪದ ಗೀತೆ ಸ್ಪರ್ಧೆಯಲ್ಲಿ ೮ ರಿಂದ ೧೦ ಜನರಿಗೆ ಅವಕಾಶವಿದೆ. ಕನಿಷ್ಠ ೪, ಗರಿಷ್ಠ ೫ ನಿಮಿಷ ಗೀತೆ ಹಾಡಲು ಸಮಯ ನೀಡಲಾಗಿದೆ. ಗುಂಪು ನೃತ್ಯದಲ್ಲಿ ೮ ರಿಂದ ೧೨ ಜನರು ಪಾಲ್ಗೊಳ್ಳಬಹುದಾಗಿದ್ದು, ೧೯೭೦, ೮೦, ೯೦ ದಶಕಗಳ ಹಾಡುಗಳಿಗೆ ನೃತ್ಯ ಮಾಡಬೇಕಿದೆ. ಗೌರವಯುತ ಉಡುಪುಗಳಲ್ಲಿ ಛದ್ಮವೇಷದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ೯೪೪೮೭೨೧೦೧೭, ೯೬೧೧೬೩೬೦೫೪ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ರೀಲ್ಸ್ ಸ್ಪರ್ಧೆ
೪೮ನೇ ಗೋಣಿಕೊಪ್ಪ ದಸರಾ ಜನೋತ್ಸವ ೨೦೨೬ರ ಪ್ರಯುಕ್ತ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ವೈಭವದ ದಸರಾ ಪ್ರಮೋಷನಲ್ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧಿಗಳು ಹಿಂದಿನ ದಸರಾ ವೈಭವ, ಹೊಸ ಪರಿಕಲ್ಪನೆ ಅಥವಾ ತಮ್ಮದೇ ಸೃಜನಾತ್ಮಕ ಕಲ್ಪನೆಯನ್ನು ಬಳಸಿಕೊಂಡು ಗೋಣಿಕೊಪ್ಪ ದಸರೆಯ ಸೊಬಗನ್ನು ತಮ್ಮ ರೀಲ್ಸ್ನಲ್ಲಿ ಮೂಡಿಸಬಹುದಾಗಿದೆ.
ಸ್ಪರ್ಧೆಯಲ್ಲಿ ರೀಲ್ಸ್ಗೆ ಬಂದಿರುವ ಲೈಕ್ಸ್ ಮತ್ತು ವೀವ್ಸ್ ಜೊತೆಗೆ ತೀರ್ಪುಗಾರರ ಆಯ್ಕೆಯನ್ನು ಅಂತಿಮ ಫಲಿತಾಂಶದಲ್ಲಿ ಪರಿಗಣಿಸಲಾಗುತ್ತದೆ. ಆಸಕ್ತ ಸ್ಪರ್ಧಿಗಳು ತಾ. ೬ರ ಸಂಜೆ ೫ ಗಂಟೆಯೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಮೊಬೈಲ್ ಸಂಖ್ಯೆ ೯೪೮೩೩೯೪೫೧೫, ೭೦೨೨೯೩೪೬೩೪ ನ್ನು ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಕಾವೇರಿ ದಸರಾ ಸಮಿತಿ ಪ್ರಕಟಣೆ ತಿಳಿಸಿದೆ.