ಚೆಯ್ಯAಡಾಣೆ, ಅ. ೩: ಕೂರ್ಗ್ ಮಾಸ್ಟರ್ಸ್ ಕಪ್ ವತಿಯಿಂದ ಮೂರನೇ ವರ್ಷದ ೫೦ ವರ್ಷ ಮೇಲ್ಪಟ್ಟವರ ಫುಟ್ಬಾಲ್ ಪಂದ್ಯಾಟವು ನವೆಂಬರ್ ೨೧ ಮತ್ತು ೨೨ ರಂದು ವೀರಾಜಪೇಟೆ ತಾಲೂಕು ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ನಡೆಯಲಿದೆ ಎಂದು ಕೂರ್ಗ್ ಮಾಸ್ಟರ್ಸ್ ಕಪ್ ಅಧ್ಯಕ್ಷ ಎಲ್.ಜಿ. ಭಾಸ್ಕರ್ ತಿಳಿಸಿದ್ದಾರೆ.
ವೀರಾಜಪೇಟೆಯ ಪತ್ರಕರ್ತರ ವೇದಿಕೆಯಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಪಂದ್ಯಾಟವನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಮೂರನೇ ವರ್ಷದ ಪಂದ್ಯಾಟವನ್ನು ಇನ್ನಷ್ಟು ವಿಶೇಷವಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು.
ಕೂರ್ಗ್ ಮಾಸ್ಟರ್ಸ್ ಕಪ್ ಉಪಾಧ್ಯಕ್ಷ ಸಿ.ಕೆ. ಪೃಥ್ವಿನಾಥ್ ಮಾತನಾಡಿ, ವೀರಾಜಪೇಟೆ ಸುತ್ತಮುತ್ತಲಿನ ೬ ಕಿ.ಮೀ. ವ್ಯಾಪ್ತಿಯೊಳಗಿನ ಕ್ರೀಡಾಪಟುಗಳಿಗೆ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶವಿದೆ. ಒಂದು ತಂಡದಲ್ಲಿ ಐದು ಮಂದಿ ಆಟಗಾರರು ಹಾಗೂ ಇಬ್ಬರು ಹೆಚ್ಚುವರಿ ಆಟಗಾರರು ಸೇರಿದಂತೆ ಒಟ್ಟು ಏಳು ಮಂದಿ ಆಟಗಾರರಿಗೆ ಅವಕಾಶವಿದೆ. ಈಗಾಗಲೇ ಎಂಟು ತಂಡಗಳು ನೋಂದಾಯಿಸಿಕೊAಡಿದ್ದು, ಇನ್ನೂ ಹೆಚ್ಚಿನ ತಂಡಗಳು ಹಾಗೂ ಕ್ರೀಡಾಪಟುಗಳು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಪಂದ್ಯಾಟದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ವಿಜೇತ ತಂಡಕ್ಕೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.
ಕೂರ್ಗ್ ಮಾಸ್ಟರ್ಸ್ ಕಪ್ ಖಜಾಂಚಿ ಅಲ್ತಾಫ್ ಮಾತನಾಡಿ, ಪಂದ್ಯಾಟ ನಡೆಯುವ ಎರಡೂ ದಿನ ಕ್ರೀಡಾಭಿಮಾನಿಗಳು ಹಾಗೂ ಭಾಗವಹಿಸುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ೫೦ ವರ್ಷ ಮೇಲ್ಪಟ್ಟ ಕ್ರೀಡಾಪಟುಗಳಿಗೆ ಮಾತ್ರ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶವಿದ್ದು, ಅಕ್ಟೋಬರ್ ೧೫ ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.
ಈಗಾಗಲೇ ಹಲವು ಆಟಗಾರರು ಹೆಸರು ನೋಂದಾಯಿಸಿಕೊAಡಿದ್ದು, ಇನ್ನೂ ನೋಂದಾಯಿಸಿಕೊಳ್ಳದವರು ಕೂಡಲೇ ಆಯೋಜಕರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವAತೆ ಮನವಿ ಮಾಡಿದರು.
ನೋಂದಣಿಗಾಗಿ: ಅಲ್ತಾಫ್: ೯೯೭೨೯ ೫೯೧೫೬, ಎಲ್.ಜಿ. ಭಾಸ್ಕರ್: ೯೮೮೦೫ ೦೨೬೩೧, ಆನಂದ (ಎಸ್ಬಿಐ): ೯೪೪೮೩ ೨೬೦೩೭ ಇವರನ್ನು ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಆನಂದ (ಎಸ್ಬಿಐ), ಸಹ ಕಾರ್ಯದರ್ಶಿ ಪ್ರಕಾಶ್, ಸಹ ಖಜಾಂಚಿ ಮರ್ವಿನ್ ಲೋಬೊ, ಕಾರ್ಯಕಾರಿ ಸಮಿತಿ ಸದಸ್ಯರಾದ ಉಪೇಂದ್ರ, ಪವಿತ್ರನ್, ಆಂಟೋನಿ, ಮತ್ತಿತರರು ಉಪಸ್ಥಿತರಿದ್ದರು.