ಮಡಿಕೇರಿ, ಅ. ೩: ಕೊಡಗು ಜಿ.ಪಂ. ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಕೊಡಗು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಓ ಸೋಮಶೇಖರ್ ಎಸ್.ಜೆ. ಅವರ ನೇತೃತ್ವದಲ್ಲಿ ಜರುಗಿತು.

ಈಗಾಗಲೇ ಕೊಡಗು ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದ್ದು, ಗ್ರಾಮ ಪಂಚಾಯಿತಿಗಳಲ್ಲಿ ಮುಂಜಾಗ್ರತೆಯಾಗಿ ಕುಡಿಯುವ ನೀರಿಗೆ ಸಮಸ್ಯೆಗಳು ಬಾರದಂತೆ ಕ್ರಮವಹಿಸಿ ಸಮಸ್ಯೆಗಳು ಬರುವ ಮುಂಚೆಯೇ ಎಚ್ಚೆತ್ತುಕೊಳ್ಳಿ, ಕುಡಿಯುವ ನೀರಿಗೆ ಅಭಾವವಾಗದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಜಲ ಜೀವನ್ ಮಿಷನ್ ಕಾಮಗಾರಿಗಳು ಇನ್ನೂ ಮುಕ್ತಾಯವಾಗದೆ ಇರುವುದನ್ನು ಆದಷ್ಟು ಬೇಗ ಮುಕ್ತಾಯಗೊಳಿಸಿ, ಕುಡಿಯುವ ನೀರಿನ ಸಮಸ್ಯೆಗಳು ಬಾರದ ರೀತಿಯಲ್ಲಿ ನೋಡಿಕೊಳ್ಳಿ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗಳಲ್ಲಿ ಸಮಸ್ಯೆ ಕಂಡುಬAದಿದ್ದು ಸಮಸ್ಯೆಗಳನ್ನು ಬಗೆಹರಿಸಲು ಸಭೆಯಲ್ಲಿ ಚರ್ಚಿಸಲಾಯಿತು.

ವಿಬಿಜಿರಾಮ್‌ಜಿ ಯೋಜನೆಯ ಪ್ರಗತಿ ಸಂಬAಧಿಸಿದAತೆ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ವೈಯಕ್ತಿಕ ಕಾಮಗಾರಿಗಳಿಗೆ ಬೇಡಿಕೆಯಿದ್ದು, ಅದರ ಅನುಸಾರವಾಗಿ ಜನರಿಗೆ ಯೋಜನೆಯ ಸೌಲಭ್ಯ ಒದಗಿಸಿಕೊಡುವಲ್ಲಿ ಕಾರ್ಯನಿರ್ವಹಿಸಿ ಪ್ರಗತಿ ಸಾಧಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.

ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಪ್ಲಾಸ್ಟಿಕ್ ಮಾರಾಟಕ್ಕೆ ಕಡಿವಾಣ ಹಾಕಿ ಹಳ್ಳಿಗಳಿಂದ ಕಸವನ್ನು ತಂದು ನಗರ ಪ್ರದೇಶಕ್ಕೆ ಬಿಸಾಡುತ್ತಿದ್ದಾರೆ, ಅಂತಹ ಪ್ರಕರಣಗಳು ಕಂಡುಬAದರೆ ದಂಡ ಹಾಕಿ ಎಚ್ಚರಿಕೆ ನೀಡಲು ಸಲಹೆ ನೀಡಿದರು.

ಸ್ವಚ್ಛತಾ ಹಿ ಸೇವಾ ಅಭಿಯಾನವನ್ನು ಪ್ರತಿ ಗ್ರಾ.ಪಂ.ಗಳಲ್ಲಿ ಕೈಗೊಂಡು ಸ್ವಚ್ಛತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಇದೇ ಸಂದರ್ಭದಲ್ಲಿ ತಿಳಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚು ಭಾರತ್ ಜೋಡೊ ಯುವ ಸಂಘಗಳ ನೋಂದಣಿಯನ್ನು ಕೈಗೊಳ್ಳುವುದರಿಂದ ಪ್ರತಿ ಸಂಘಕ್ಕೆ ರೂ. ೧೦ ಲಕ್ಷ ಸಹಾಯಧನ ನೀಡಲಾಗುತಿದ್ದು ಯುವ ಶಕ್ತಿಯನ್ನು ಬಲಪಡಿಸಲು ಯೋಜನೆಯು ಸಹಕಾರಿಯಾಗಿದೆ ಎಂದು ನುಡಿದರು.

ಜಿಂ.ಪA. ಉಪ ಕಾರ್ಯದರ್ಶಿ ಅಬ್ದುಲ್ ನಬೀ ಮಾತನಾಡಿ, ಗ್ರಾಮ ಪಂಚಾಯಿತಿಗಳ ತೆರಿಗೆ ವಸೂಲಾತಿ ಹಾಗೂ ನಿಯಮಿತವಾಗಿ ಅಡಾಕ್ ಸಭೆಗಳನ್ನು ನಡೆಸಿ ತಿರುವಳಿಗೆ ಬಾಕಿ ಇರುವ ಪ್ರಕರಣವನ್ನು ಇತ್ಯರ್ಥ್ಯಪಡಿಸಿ ಪ್ರಗತಿ ಸಾಧಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಯೋಜನಾ ನಿರ್ದೇಶಕ ಜೀವನ್ ಕುಮಾರ್, ತಾ.ಪಂ. ಇ.ಒ ಶೇಖರ್, ಸೋಮವಾರಪೇಟೆ ಇ.ಒ. ಪರಮೇಶ್ವರ್, ವೀರಾಜಪೇಟೆ ಇ.ಒ. ರಾಜೇಶ ಕೆ.ಆರ್., ಮಡಿಕೇರಿ ತಾ.ಪಂ. ಸಹಾಯಕ ನಿರ್ದೇಶಕರು (ಗ್ರಾ.ಉ) ಹೇಮಂತ್, ಸೋಮವಾರಪೇಟೆ ಸಹಾಯಕ ನಿರ್ದೇಶಕ (ಪಂ.ರಾಜ್) ಶ್ರೀನಿವಾಸ್, ಜಲಜೀವನ್ ಅಭಿಯಾನದ ಇಂಜಿನಿಯರ್ ಭಾಸ್ಕರ, ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿಬಿಜಿರಾಮ್‌ಜಿ ತಾಂತ್ರಿಕ ಸಿಬ್ಬಂದಿಗಳು ಹಾಗೂ ಜಿ.ಪಂ. ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.