ಪೊನ್ನಂಪೇಟೆ, ಅ. ೩: ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ೮೩ನೇ ಮತ್ತು ೨೦೨೫-೨೦೨೬ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕಾಡ್ಯಮಾಡ ಎಸ್. ಭರತ್ ಅವರ ಅಧ್ಯಕ್ಷತೆಯಲ್ಲಿ ಕಾನೂರಿನ ಸಂಘದ ಸಭಾಂಗಣದಲ್ಲಿ ಜರುಗಿತು.
ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೧೯೩೭ ರಲ್ಲಿ ಸ್ಥಾಪನೆಯಾಗಿ ಇದೀಗ ೮೯ ವರ್ಷ ತುಂಬಿರುತ್ತದೆ. ೨೦೦೯ ರಿಂದ ೨೦೨೬ ರವರೆಗೆ ಆಡೀಟಿನಲ್ಲಿ ಸತತವಾಗಿ ‘ಎ' ತರಗತಿಯನ್ನು ಹೊಂದಿದ್ದು ವರ್ಷದಿಂದ ವರ್ಷಕ್ಕೆ ಸಂಘವು ಅಭಿವೃದ್ಧಿ ಹೊಂದುತ್ತಿದೆ. ಆಡೀಟ್ ವರದಿಯಲ್ಲಿ ಯಾವುದೇ ಆಕ್ಷೇಪಣೆಗಳಿಲ್ಲದೆ ಉತ್ತಮ ವರದಿ ಬರುತ್ತಿರುವುದು ಸಂಘದ ಪಾರದರ್ಶಕತೆಗೆ ಕಾರಣವಾಗಿದೆ ಎಂದು ಅಧ್ಯಕ್ಷರು ಮಹಾಸಭೆಗೆ ತಿಳಿಸಿದರು.
ಸಂಘದಲ್ಲಿ ಇಂದಿಗೆ ೧೫೮೪ ಸದಸ್ಯರಿದ್ದು, ರೂ. ೩,೭೧,೨೦,೬೩೮.೦೦ ಮೊತ್ತದ ಕ್ಷೇಮನಿಧಿ ಇದೆ. ಕಾಫಿ ತೋಟದ ಭಂಡವಾಳ ಮತ್ತು ಅಭಿವೃದ್ಧಿ ನಿಧಿ ರೂ. ೧,೪೫,೮೯,೯೭೫.೦೦ ಇರುತ್ತದೆ. ಸಂಘದಲ್ಲಿ ಕಟ್ಟಡ ನಿಧಿ ಹಾಗೂ ಇತರ ನಿಧಿಗಳು ರೂ. ೧,೧೨,೪೮,೭೫೦.೦೦ ಇರುತ್ತದೆ ಎಂದು ಮಹಾಸಭೆಗೆ ವಿವರಿಸಿದ ಕೆ.ಎಸ್. ಭರತ್ ಅವರು, ಸದಸ್ಯರ ಅನುಕೂಲಕ್ಕಾಗಿ ಜಾಮೀನು ಸಾಲ ಒಂದು ಲಕ್ಷ, ಗೊಬ್ಬರ ಸಾಲ ಒಂದು ಲಕ್ಷ, ಮರಣನಿಧಿ ಒಂದು ಲಕ್ಷ ಸಂಘದಿAದ ನೀಡಲಾಗುತ್ತಿದೆ. ಸಂಘದಲ್ಲಿ ಕೆ.ಸಿ.ಸಿ. ಫಸಲು ಸಾಲ ಪಡೆದ ಸದಸ್ಯರು ಮೃತಪಟ್ಟಲ್ಲಿ, ಕುಟುಂಬದ ವಾರಸುದಾರರು ನಿಗದಿತ ಗಡುಗಿನೊಳಗೆ ಸಾಲ ಮರುಪಾವತಿಸಿದ್ದಲ್ಲಿ ಸದರಿಯವರಿಗೆ ಸಂಘದಿAದ ರೂ. ೨೫೦೦೦ ಪ್ರೋತ್ಸಾಹ ಧನವಾಗಿ ನೀಡಲಾಗುವುದು ಎಂದು ತಿಳಿಸಿದರು.
ಸಂಘದಲ್ಲಿ ಗೊಬ್ಬರ, ಕ್ರಿಮಿನಾಶಕ, ಹತ್ಯಾರು, ದಿನಬಳಕೆ ವಸ್ತು, ಕೋವಿ ತೋಟ, ಕಾಫಿ ಔಟರ್ನ್ ಮತ್ತು ತೇವಾಂಶ ಪರೀಕ್ಷೆ ಸೌಲಭ್ಯವನ್ನು ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಒದಗಿಸಿಕೊಡಲಾಗಿದೆ. ಇದರ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದ ಭರತ್ ಅವರು, ಪ್ರಸ್ತುತ ಸಾಲಿನಲ್ಲಿ ಸಂಘ ಗಳಿಸಿದ ಒಟ್ಟು ಲಾಭದ ಮೊತ್ತದ ಪೈಕಿ ಸದಸ್ಯರಿಗೆ ಶೇ. ೨೫ ಡಿವಿಡೆಂಡ್ ನೀಡಲು ಮಹಾಸಭೆಯ ಅನುಮತಿ ಅಗತ್ಯವಿದೆ ಎಂದು ಪ್ರಸ್ತಾಪ ಮುಂದಿಟ್ಟರು. ಇದನ್ನು ಮಹಾಸಭೆ ಅನುಮೋದಿಸಿತು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಿ.ಬಿ. ಬೆಳ್ಯಪ್ಪ, ನಿರ್ದೇಶಕರುಗಳಾದ ಎ.ಎ. ವಿವೇಕ್, ಎ.ಎಂ. ಅಚ್ಚಯ್ಯ, ಸಿ.ಎನ್. ಬಿದ್ದಪ್ಪ, ಕೆ.ಎಸ್. ಬೋಪಣ್ಣ, ಸಿ.ಪಿ. ಶಮ್ಮಿ, ಕೆ.ಎಂ. ಕುಸುಮ, ಎಂ.ಕೆ. ರವಿ, ಕೆ.ಎನ್. ನಾಚಪ್ಪ, ಹೆಚ್.ಕೆ. ರಾಜ, ಎಂ.ಎA. ಜಗನ್ನಾಥ್, ವಿ.ಎಸ್. ಸುಮಿತ್ರ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.