ಮಡಿಕೇರಿ, ಅ. ೩: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಲಾಜಿಕಲ್ ಡಿಸ್ಕಿçಪೆನ್ಸಿ ಹಾಗೂ ಅನ್ ಮ್ಯಾಪಿಂಗ್ ಅಡಿಯಲ್ಲಿ ಜಿಲ್ಲೆಯಲ್ಲಿ ೫೮,೮೮೩ ಮತದರಾರನ್ನು ಗುರುತಿಸಲಾಗಿತ್ತು. ಇದೀಗ ಅಂತಹ ಮತದಾರರಿಗೆ ನೋಟೀಸ್ ವಿತರಣೆ ಪೂರ್ಣಗೊಂಡಿದೆ.

೫೮,೮೮೩ ನೋಟೀಸ್‌ಗಳ ಪೈಕಿ ೫೧,೧೭೯ ನೋಟೀಸ್‌ಗಳ ವಿಚಾರಣೆ ಪೂರ್ಣಗೊಂಡಿದ್ದು, ಶೇ.೮೬.೯೨ ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನೂ ೭,೭೦೪ ವಿಚಾರಣೆ ಬಾಕಿ ಇದೆ. ಜೂನ್ ೧೬ ರಿಂದ ಅಕ್ಟೋಬರ್ ೧ ರವರೆಗೆ ಜಿಲ್ಲೆಯಲ್ಲಿ ಒಟ್ಟು ೨೬,೨೫೦ ಅರ್ಜಿಗಳು ಸ್ವೀಕೃತವಾಗಿವೆ. ಅದರಲ್ಲಿ ಹೊಸ ಮತದಾರರ ಸೇರ್ಪಡೆಗಾಗಿ ಫಾರಂ-೬ ಅಡಿ ೬,೧೫೫ ಅರ್ಜಿ, ವಿದೇಶದಲ್ಲಿರುವ ಮತದಾರರ ಫಾರಂ-೬A ಅಡಿ ೨೨ , ಹೆಸರು ತೆಗೆಯುವಿಕೆ/ಆಕ್ಷೇಪಣೆ ಫಾರಂ-೭ ಅಡಿ ೧,೧೪೩ ಹಾಗೂ ತಿದ್ದುಪಡಿ/ಸ್ಥಳಾಂತರದ ಫಾರಂ-೮ ಅಡಿ ೧೮,೯೩೦ ಅರ್ಜಿಗಳು ಸಲ್ಲಿಕೆಯಾಗಿವೆ.