ಸುಂಟಿಕೊಪ್ಪ, ಅ. ೨: ಆನೆಕಾಡುವಿನಲ್ಲಿ ಇತ್ತೀಚೆಗೆ ಸಂಭವಿಸಿದ ಕಾರು, ಬೈಕ್ ಹಾಗೂ ಪಿಕಪ್ ವಾಹನಗಳ ನಡುವಿನ ಭೀಕರ ಅಪಘಾತದಲ್ಲಿ ಮೃತಪಟ್ಟವರು ಹಾಗೂ ಗಾಯಾಳುಗಳ ಕುಟುಂಬಗಳಿಗೆ ೭ನೇ ಹೊಸಕೋಟೆಯ ಹಿಂದೂ ಗೆಳೆಯರ ಬಳಗದ ವತಿಯಿಂದ ಧನಸಹಾಯ ನೀಡಿ ಸಾಂತ್ವನ ಹೇಳಲಾಯಿತು.
ಅಪಘಾತದಲ್ಲಿ ಮೃತಪಟ್ಟ ಬಳಗದ ಸದಸ್ಯ ರತನ್ ಉಣ್ಣಿ ಅವರ ಕುಟುಂಬಕ್ಕೆ ರೂ.೩೬,೫೦೦, ಆದರ್ಶ್ ಅವರ ಕುಟುಂಬಕ್ಕೆ ರೂ.೩೦,೦೦೦ ಹಾಗೂ ಗಾಯಾಳು ಚಂದ್ರಶೇಖರ್ ಅವರಿಗೆ ರೂ.೨೦,೦೦೦ ಸಹಾಯಧನ ನೀಡಲಾಯಿತು. ಈ ಸಂದರ್ಭ ಹಿಂದೂ ಗೆಳೆಯರ ಬಳಗದ ಅಧ್ಯಕ್ಷ ಶರವಣ ಕುಮಾರ್, ಕಾರ್ಯದರ್ಶಿ ಟಿ.ವಿ. ಪ್ರಕಾಶ್, ಉಪಾಧ್ಯಕ್ಷ ಸತೀಶ್ ಕುಮಾರ್, ಸದಸ್ಯರಾದ ವಿಕ್ರಂ, ರವಿ, ಸಿಜು, ಆಟೋ ರವಿ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.