ಕೂಡಿಗೆ, ಆ. ೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ವ್ಯಾಪ್ತಿಯಲ್ಲಿ ಹಾರಂಗಿ ಮುಖ್ಯ ನಾಲೆಯ ಸೋರಿಕೆ ನೀರನ್ನು ಬಳಕೆ ಮಾಡಿಕೊಂಡು ಬೇಸಾಯ ಮಾಡಿದ ಭತ್ತದ ಗದ್ದೆಗಳಲ್ಲಿ ಈಗಾಗಲೇ ಬೆಂಕಿ ರೋಗ ಕಾಣಿಸಿಕೊಂಡು ಬೆಳೆ ಹಾಳಾಗುತ್ತಿರುವುದು ಕಂಡುಬರುತ್ತಿದೆ.
ವ್ಯಾಪ್ತಿಯ ರೈತರುಗಳಾದ ಗಣೇಶ, ರವೀಂದ್ರ, ಶಿವಣ್ಣ, ಗಿರೀಶ್, ನಿಂಗಪ್ಪ, ಕಾಳಪ್ಪ, ಜವರಪ್ಪ, ಸೇರಿದಂತೆ ೧೦ ಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಸಣ್ಣ ಮಧು, ಓಂಕಾರ, ಭತ್ತದ ತಳಿಯ ಸಸಿಮಡಿಗಳನ್ನು ಮಾಡಿ ನಾಟಿ ಕಾರ್ಯ ಮುಗಿಸಿದ್ದು, ಒಂದು ತಿಂಗಳಲ್ಲೇ ಬೆಂಕಿ ರೋಗ ಕಾಣಿಸಿಕೊಂಡಿದೆ, ಭತ್ತದ ತಳಿಗಳನ್ನು ರೈತರು ಖಾಸಗಿ ರಸ ಗೊಬ್ಬರ ಮಾರಾಟ ಕೇಂದ್ರದ ಮೂಲಕ ಖರೀದಿಸಿರುತ್ತಾರೆ. ಸಂಬAಧಿಸಿದ ಕೃಷಿ ಇಲಾಖೆಯವರು ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ರೈತರು ಅಗ್ರಹಿಸಿದ್ದಾರೆ.