ಸುAಟಿಕೊಪ್ಪ, ಅ. ೧: ದಸರಾ ಅಂಬಾರಿ ಹೊತ್ತಿದ್ದ ಆನೆ ಅರ್ಜುನನ ಸ್ಮರಣಾರ್ಥ ಅ.೧೬ ರಿಂದ ೧೮ರವರೆಗೆ ಸುಂಟಿಕೊಪ್ಪದ ಸರ್ಕಾರಿ ಶಾಲಾ ಮೈದಾನದಲ್ಲಿ ಜಿಲ್ಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಟೀಂ ಅರ್ಜುನ ತಂಡದ ಅಧ್ಯಕ್ಷ ಮಹಮ್ಮದ್ ಆಲಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಂಟಿಕೊಪ್ಪದ ೨೨ ಉತ್ಸಾಹಿ ಯುವಕರು ಒಗ್ಗೂಡಿ ಟೀಂ ಅರ್ಜುನ ಎಂಬ ತಂಡವನ್ನು ರಚಿಸಿದ್ದು, ಇದರ ವತಿಯಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಕೊಡಗು ಜಿಲ್ಲೆಯಾದ್ಯಂತ ಮೊದಲು ನೋಂದಾಯಿಸಿಕೊಳ್ಳುವ ೧೬ ತಂಡಗಳಿಗೆ ಮಾತ್ರ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿದ್ದು, ಪಂದ್ಯಾವಳಿಯನ್ನು ಲೀಗ್ ಮಾದರಿಯಲ್ಲಿ ನಡೆಸಲಾಗುತ್ತದೆ. ಪಂದ್ಯಾವಳಿಯ ವಿಜೇತ ತಂಡಕ್ಕೆ ರೂ. ೩೩,೩೩೩ ನಗದು ಹಾಗೂ ರನ್ನರ್‌ಅಪ್ ತಂಡಕ್ಕೆ ೨೨,೨೨೨ ನಗದು ಸೇರಿದಂತೆ ಆಕರ್ಷಕ ಟ್ರೋಫಿ ನೀಡಲಾಗುವುದು. ಇದರೊಂದಿಗೆ ವಿವಿಧ ವಿಭಾಗಗಳಲ್ಲಿ ವೈಯಕ್ತಿಕ ಬಹುಮಾನಗಳು ಸೇರಿದಂತೆ ೧೦೦ಕ್ಕೂ ಅಧಿಕ ಆಕರ್ಷಕ ಬಹುಮಾನಗಳನ್ನು ಕ್ರೀಡಾಪಟುಗಳಿಗೆ ನೀಡಲಾಗುವುದು ಎಂದರು.

ತAಡಗಳ ನೋಂದಣಿ ಹಾಗೂ ಪಂದ್ಯಾವಳಿಗೆ ಸಂಬAಧಿಸಿದ ಹೆಚ್ಚಿನ ಮಾಹಿತಿಗಾಗಿ ೮೧೨೩೩೦೨೭೬೦ ಅವರನ್ನು ಸಂಪರ್ಕಿಸುವAತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ತಂಡದಿAದ ಸಾಮಾಜಿಕ ಚಟುವಟಿಕೆ ನಡೆಸಲಾಗುವುದು. ದಸರಾ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಪರಿಗಣಿಸಿ ಆಟಗಾರರಿಗೆ ಅವಕಾಶ ನೀಡಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಹರ್ಷತ್, ಕ್ರೀಡಾ ಕಾರ್ಯದರ್ಶಿ ಸಂಶಾದ್ ಪಿ.ಎಸ್. ಹಾಗೂ ಸಮಿತಿ ಸದಸ್ಯರಾದ ಆರಿಫ್, ಇಬ್ರಾಯಿಂ ಮತ್ತು ಜಗತ್ (ಚಿಟ್ಟೆ) ಉಪಸ್ಥಿತರಿದ್ದರು.