ಗೋಣಿಕೊಪ್ಪಲು, ಅ. ೧: ಗೋಣಿಕೊಪ್ಪಲಿನ ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಬಹುಭಾಷಾ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗಿದೆ.
೪೮ನೇ ವರ್ಷದ ದಸರಾ ಜನೋತ್ಸವ ೨೦೨೬ರ ದಸರಾ ಕವಿಗೋಷ್ಠಿ ತಾ. ೧೬ ರಂದು ಬೆಳಿಗ್ಗೆ ೧೦ ಗಂಟೆಗೆ ದಸರಾ ಕಾರ್ಯಕ್ರಮಗಳು ನಡೆಯುವ ಮೈದಾನದ ಕಾವೇರಿ ಕಲಾ ವೇದಿಕೆಯಲ್ಲಿ ನಡೆಸುವಂತೆ ಗೋಣಿಕೊಪ್ಪಲು ಬಹುಭಾಷಾ ಕವಿಗೋಷ್ಠಿ ಆಯೋಜನಾ ಸಮಿತಿಯ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಚಾಲಕರಾಗಿ ರಜನಿ ಎಸ್.ಎಂ, ಕಾರ್ಯದರ್ಶಿಯಾಗಿ ಶೀಲಾ ಬೋಪಣ್ಣ, ಸಹ ಕಾರ್ಯದರ್ಶಿಯಾಗಿ ಟಿ.ಆರ್ ವಿನೋದ್, ನಿರ್ದೇಶಕರಾಗಿ ಚಂದನಾ ಮಂಜುನಾಥ್, ಓಮನ, ಉಳುವಂಗಡ ಕಾವೇರಿ ಉದಯ, ಕೆ.ವಿ.ರಾಮಕೃಷ್ಣ, ಶ್ರೀ ಕಾವೇರಿ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸಂಯೋಜಕ ಎಂ.ಕೆ. ಚಂದನ್ ಕಾಮತ್, ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ ಮತ್ತು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ ಕೇಶವ ಕಾಮತ್ ಅವರನ್ನು ಆರಿಸಲಾಯಿತು.
ಕವನ ವಾಚನ ಮಾಡಲು ಆಸಕ್ತರಾಗಿರುವ ಕವಿ/ ಕವಿಯತ್ರಿಯರಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಕವಿ/ ಕವಿಯಿತ್ರಿಯರು ಯಾವುದೇ ಒಂದು ಭಾಷೆಯ ಒಂದು ಕವನವನ್ನು ತಾ. ೮ರ ಒಳಗಾಗಿ ಕಳಹಿಸಿಕೊಡಬೇಕು. ಆ ನಂತರ ಬರುವ ಕವನಗಳನ್ನು ಪರಿಗಣಿಸಲಾಗುವುದಿಲ್ಲ.
ಈ ಬಾರಿಯ ಕವಿಗೋಷ್ಠಿಯಲ್ಲಿ ಪ್ರತಿವರ್ಷದಂತೆ ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಬ್ಯಾರಿ, ಯರವ, ತೆಲುಗು, ಬೆಟ್ಟಕುರುಬ, ಜೇನುಕುರುಬ, ಕುಂಬಾರ, ಹಿಂದಿ, ಉರ್ದು, ತಮಿಳು, ಮಲೆಯಾಳಂ, ತೆಲುಗು, ಮರಾಠಿ, ಸಂಸ್ಕೃತ ಹೀಗೆ ಯಾವುದೇ ಭಾಷೆಯ ಕವನಗಳನ್ನು ಕನ್ನಡ ಲಿಪಿಯಲ್ಲಿ ಹಾಗೂ ಹಿಂದಿ, ಇಂಗ್ಲಿಷ್ ಕವನವನ್ನು ಅದೇ ಭಾಷೆಯಲ್ಲಿ ಕಳುಹಿಸಿಕೊಡತಕ್ಕದ್ದು.
ಜೆನ್ಜಿ ಕವಿಗೋಷ್ಠಿ
ಕನ್ನಡ ಭಾಷೆಯ ಚುಟುಕು ಕವನ(೪ ಸಾಲಿನ ಗರಿಷ್ಠ ೪ ಕವನಗಳಿಗೆ ಮಾತ್ರ ಅವಕಾಶ)ಗಳು. ಈ ಬಾರಿಯ ಕವಿಗೋಷ್ಠಿಯ ವಿಶೇಷತೆ ಯಾಗಿ “ಜೆನ್ ಜಿ” ಬಹುಭಾಷಾ ಕವನಗಳನ್ನು ಆಹ್ವಾನಿಸಲಾಗಿದೆ ವಿಶೇಷವಾಗಿ ಮಕ್ಕಳ ಕವನ(೬ ರಿಂದ ೧೩ ವರ್ಷ ಒಳಪಟ್ಟವರು)ಗಳಿಗೂ ಅವಕಾಶ ಕಲ್ಪಿಸಲಾಗಿದೆ.
ಕವನಗಳನ್ನು ಕಳುಹಿಸುವವರು ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರವನ್ನು ತಪ್ಪದೆ ಕಳುಹಿಸಿಕೊಡಬೇಕು. ಮಾಹಿತಿಗಳಿಲ್ಲದ ಕವನಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಕವನಗಳನ್ನು ಮತ್ತು ಮಾಹಿತಿಯನ್ನು ಈ ಕೆಳಗೆ ಸೂಚಿಸಿದ ವಾಟ್ಸಾö್ಯಪ್- ಇ.ಮೇಲ್ ಮೂಲಕ ಕಳುಹಿಸಬಹುದು. ಕವನಗಳನ್ನು ಟೈಪ್ ಮಾಡಿ ಕಳುಹಿಸಬೇಕು. ವಾಟ್ಸಾö್ಯಪ್ ಅಥವಾ ಇಮೇಲ್ನಲ್ಲಿ ಕವನದ ಛಾಯ ಪ್ರತಿಯನ್ನು ಕಳುಹಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಈ ಸೌಲಭ್ಯ ಇಲ್ಲದಿರುವವರು ಅಂಚೆ ಮೂಲಕ ಈ ವಿಳಾಸಕ್ಕೆ ಅಗತ್ಯ ಮಾಹಿತಿಯೊಂದಿಗೆ ಕಳುಹಿಸಿಕೊಡಬಹುದು. ಅಧ್ಯಕ್ಷರು, ಗೋಣಿಕೊಪ್ಪಲು ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ, ಕೇರಾಫ್ ಕಾಮತ್ ನವಮಿ, ಗೋಣಿಕೊಪ್ಪಲು.-೫೭೧೨೧೩
(ಕವನಗಳನ್ನು ಅಂಚೆ ಮೂಲಕ ಕಳುಹಿಸುವವರು ಲಕೋಟೆಯ ಮೇಲೆ ದೊಡ್ಡದಾಗಿ ‘ಗೋಣಿಕೊಪ್ಪಲು ದಸರಾ ಬಹುಭಾಷಾ ಕವಿಗೋಷ್ಠಿ ಕವನ’ ಎಂದು ನಮೂದಿಸಬೇಕು).
ನಿಬಂಧನೆಗಳು: ಯಾವುದೇ ಭಾಷೆಯಲ್ಲಿ ಸ್ವರಚಿತ, ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಿಯೂ ಪ್ರಕಟವಾಗದ ಕವನಗಳನ್ನು ಮಾತ್ರ ಕಳುಹಿಸಬೇಕು. ಕವನಗಳು ಗರಿಷ್ಠ ೧೬ ಸಾಲುಗಳನ್ನು ಮೀರಬಾರದು. ಯಾವುದೇ ಭಾಷೆಯ ಒಂದು ಕವನವನ್ನು ಮಾತ್ರ ಆಯ್ಕೆಗೆ ಕಳುಹಿಸಬೇಕು. ಎರಡೆರಡು ಭಾಷೆಗಳಲ್ಲಿ ಒಬ್ಬರೇ ಕವನಗಳನ್ನು ಕಳುಹಿಸಿದಲ್ಲಿ ಅವರ ಎಲ್ಲಾ ಕವನಗಳನ್ನು ತಿರಸ್ಕರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಸಮಿತಿಯ ಸಂಚಾಲಕಿ ರಜನಿ ಎಸ್.ಎಂ -೯೪೮೩೮ ೨೬೧೨೦. ಕಾರ್ಯದರ್ಶಿ ಶೀಲಾ ಬೋಪಣ್ಣ - ೯೯೪೫೭೯೪೪೧೪ ಸದಸ್ಯೆ ಚಂದನಾ ಮಂಜುನಾಥ್ - ೯೯೮೬೯೩೯೩೫೭ ಇವರುಗಳನ್ನು ಸಂಪರ್ಕಿಸಬಹುದು. ಇ-ಮೇಲ್ goಟಿiಞoಠಿಠಿಚಿಟಜಚಿsಚಿಡಿಚಿ@gmಚಿiಟ.ಛಿom ಆಯ್ಕೆಯಾದ ಕವನಗಳ ವಾಚನಕ್ಕೆ ಬಹುಭಾಷಾ ಕವಿಗೋಷ್ಠಿಯಂದು ಅವಕಾಶ ಒದಗಿಸಲಾಗುತ್ತದೆ. ಗೋಷ್ಠಿಯಲ್ಲಿ ಕವಿಗಳು ಕಡ್ಡಾಯವಾಗಿ ಆಯ್ಕೆಯಾದ ಕವನವನಷ್ಟೇ ವಾಚಿಸಬೇಕು. ಕವನಗಳನ್ನು ಹಾಡುವಂತಿಲ್ಲ ಮತ್ತು ಯಾವುದೇ ಪೀಠಿಕೆಗಳಿಗೆ ಅವಕಾಶವಿಲ್ಲ. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.