ಮಡಿಕೇರಿ, ಅ. ೧: ಮಡಿಕೇರಿ ಹಿಂದೂ ಮಲಯಾಳಿ ಸಂಘದಿAದ ತಾ. ೪ ರಂದು ಓಣಾಂಘೋಷA - ಓಣಂ ಸಧ್ಯ ಕಾರ್ಯಕ್ರಮವನ್ನು ಮಡಿಕೇರಿಯ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲಯಾಳಿಗರ ಸಂಪ್ರದಾಯಿಕ ಹಬ್ಬವಾದ ಓಣಂ ಅನ್ನು ಸಾರ್ವತ್ರಿಕವಾಗಿ ಸಂಭ್ರಮದಿAದ ಆಚರಿಸಲು ಎಲ್ಲಾ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ೧೧ನೇ ವರ್ಷದ ಆಚರಣೆ ಇದಾಗಿದ್ದು, ತಾ. ೪ ರಂದು ಬೆಳಿಗ್ಗೆ ೯ ಗಂಟೆಗೆ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯ ಬಳಿಯಿಂದ ಹೊರಡುವ ಮೆರವಣಿಗೆಗೆ ಭಾಗಮಂಡಲದ ಗುತ್ತಿಗೆದಾರ ಜಯನ್ ಚಾಲನೆ ನೀಡಲಿದ್ದಾರೆ. ಮುಖ್ಯಬೀದಿಯಲ್ಲಿ ಮೆರವಣಿಗೆ ಸಾಗಿ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಮುಕ್ತಾಯಗೊಳ್ಳಲಿದೆ. ಮಕ್ಕಳಿಂದ ಛದ್ಮವೇಷ, ಕಲಾ ತಂಡಗಳ ಮೆರವಣಿಗೆ ಸೇರಿದಂತೆ ವಿವಿಧ ಆಕರ್ಷಣೆ ಇರಲಿದೆ ಎಂದರು.
ಕೆ.ಎಸ್. ರಮೇಶ್ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದ ಸಾನಿಧ್ಯವನ್ನು ಬಸವಪಟ್ಟಣ ಮುಳ್ಳೂರಿನ ಶ್ರೀ ತೋಟಂದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಮಹಾಸ್ವಾಮಿ ವಹಿಸಿ ಉದ್ಘಾಟಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ವಿಧಾನಸಭಾ ಮಾಜಿ ಸಭಾಪತಿ ಕೆ.ಜಿ. ಬೋಪಯ್ಯ, ಓಣಂ ಆಚರಣಾ ಸಮಿತಿ ಅಧ್ಯಕ್ಷ ಕೆ.ಕೆ. ಅನಿಲ್, ಸಮಾಜಸೇವಕ ಎಡಿಕೇರಿ ಪ್ರಸನ್ನ, ಒಕ್ಕಲಿಗರ ಸಂಘದ ನಿರ್ದೇಶಕ ಹರಪ್ಪಳ್ಳಿ ರವೀಂದ್ರ, ಹಿಂದೂ ಮಲಯಾಳಿ ಸಮಾಜ ಜಿಲ್ಲಾಧ್ಯಕ್ಷ ವಿ.ಎಂ. ವಿಜಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಮಾಜಿ ಸೈನಿಕ ಸಿ.ಕೆ. ಪ್ರಭಾಕರ್, ಸಂಘದ ಗೌರವಾಧ್ಯಕ್ಷ ಕೆ.ವಿ. ಧರ್ಮೇಂದ್ರ, ಗುತ್ತಿಗೆದಾರ ದಿವಾಕರನ್ ಸೇರಿದಂತೆ ಇನ್ನಿತರರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆದು ೧೮ ಬಗೆಯ ಖಾದ್ಯ ಹೊಂದಿರುವ ಓಣಂ ಸಧ್ಯವನ್ನು ಉಣಬಡಿಸಲಾಗುವುದು. ಮಧ್ಯಾಹ್ನದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಇದೇ ಸಂದರ್ಭ ಕೇರಳದ ಪ್ರಸಿದ್ಧ ತಂಡ ಸ್ಯಾನ್ಸ್ ಕ್ರಿಯೇಷನ್ಸ್ನಿಂದ ಹಾಸ್ಯ ಕಾರ್ಯಕ್ರಮ ಮೂಡಿಬರಲಿದೆ. ೨ ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ ಎಂದರು.
ಗೋಷ್ಠಿಯಲ್ಲಿ ಓಣಂ ಆಚರಣಾ ಸಮಿತಿ ಅಧ್ಯಕ್ಷ ಕೆ.ಕೆ. ಅನಿಲ್, ಹಿಂದೂ ಮಲಯಾಳಿ ಸಂಘದ ಉಪಾಧ್ಯಕ್ಷ ಕೆ.ಆರ್. ಪ್ರಮೋದ್, ಕಾರ್ಯದರ್ಶಿ ಎಸ್. ಸಂದೀಪ್, ಖಜಾಂಚಿ ದಿನೇಶ್ ನಾಯರ್, ಸಂಘಟನಾ ಕಾರ್ಯದರ್ಶಿ ಕೆ.ಕೆ. ಮೋಹನ್ ಹಾಜರಿದ್ದರು.