ಸಿದ್ದಾಪುರ, ಅ. ೧: ಹುಲಿ ದಾಳಿ ನಡೆಸಿ ಕೊಂದು ಹಾಕಿದ್ದ ಕೋಣದÀ ಕಳೇಬರವನ್ನು ಮತ್ತೆ ಹೊತ್ತೊಯ್ದಿದೆ. ಕೊಂಡAಗೇರಿ ಗ್ರಾಮದ ಎಲಿಯಂಗಡಿ ಗ್ರಾಮ ನಿವಾಸಿ ಕೆ.ವೈ ಅಹಮ್ಮದ್ ಎಂಬವರಿಗೆ ಸೇರಿದ ಕೋಣವನ್ನು ಸೋಮವಾರದಂದು ಮೇಯಲು ಬಿಟ್ಟಿದ್ದ ಸಂದರ್ಭ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಅರ್ಧಭಾಗದಷ್ಟು ತಿಂದುಹೋಗಿತ್ತು. ಹುಲಿಯ ಚಲನವಲನ ಕಂಡುಹಿಡಿಯುವ ನಿಟ್ಟಿನಲ್ಲಿ ಕೋಣದ ಅರ್ಧಭಾಗದ ಕಳೇಬರವನ್ನು ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದರು. ಬುಧವಾರ ರಾತ್ರಿ ಅದೇ ಸ್ಥಳಕ್ಕೆ ಬಂದು ಕಳೇಬರವನ್ನು ಎಳೆದುಕೊಂಡು ಹೋಗಿದೆ. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನುತ ಚೌಹಾಣ್ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ಮತ್ತು ಉಪವಲಯ ಅರಣ್ಯ ಅಧಿಕಾರಿ ಮನೋಜ್ ನೇತೃತ್ವದಲ್ಲಿ ಎಲಿಯಂಗಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಫಿ ತೋಟಗಳಲ್ಲಿ ಕೂಂಬಿAಗ್ ನಡೆಸಲಾಯಿತು.

ಹುಲಿಯ ಚಲನವಲನ ಕಂಡುಹಿಡಿಯುವ ನಿಟ್ಟಿನಲ್ಲಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಈ ಸಂದರ್ಭ ಹಾಲುಗುಂದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಂದಾಯಿ ಅಬ್ದುಲ್ ರಹಿಮಾನ್, ಅರಣ್ಯ ಸಿಬ್ಬಂದಿಗಳು ಮತ್ತು ಆರ್.ಆರ್.ಟಿ .ತಂಡದ ಸಿಬ್ಬಂದಿ ಪಾಲ್ಗೊಂಡಿದ್ದರು.