ಮಡಿಕೇರಿ, ಅ. ೧: ಕೊಡವಲ್ಯಾಂಡ್ ನಮ್ಮ ಪಾರಂಪರಿಕ, ಅಖಂಡ ಮತ್ತು ಪವಿತ್ರ ಮಾತೃಭೂಮಿ. ಇದರ ಪ್ರಾಚೀನ ಭೂಮಿ, ಅರಣ್ಯಗಳು, ನದಿಗಳು ಮತ್ತು ಜಮ್ಮ-ಬಾಣೆ ಹಿಡುವಳಿಗಳು ನಮ್ಮ ಪೂರ್ವಜರ ಮತ್ತು ವಂಶಪಾರAಪರ್ಯ ಆಸ್ತಿಗಳಾಗಿವೆ ಎಂದು ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಅಭಿಪ್ರಾಯಪಟ್ಟರು.

ಸಿದ್ದಾಪುರದಲ್ಲಿ ಏರ್ಪಡಿಸಲಾಗಿದ್ದ ಮಾನವ ಸರಪಳಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಡವಲ್ಯಾಂಡ್ ಸ್ವಾಯತ್ತತೆಯು ಆದಿಮಸಂಜಾತ ಕೊಡವರ ಕಾನೂನುಬದ್ಧ ಹಕ್ಕಾಗಿದೆ ಎಂದು ಪ್ರತಿಪಾದಿಸಿದರು. ಸ್ವಾಯತ್ತತೆಗಾಗಿ, ಸಾಂವಿಧಾನಿಕ ಅಧಿಕಾರಿಗಳ ಮತ್ತು ಇಡೀ ಪ್ರಪಂಚದ ಮುಂದೆ ತನ್ನ ವಿಶಿಷ್ಟ ವಂಶಾವಳಿ, ಗುರುತು, ದೇಶೀಯ ಗುಣಲಕ್ಷಣಗಳನ್ನು ಪ್ರತಿಯೊಂದು ರೀತಿಯಲ್ಲೂ ಸಾಬೀತುಪಡಿಸಿದರೆ, ಆ ಸಮುದಾಯದ ಒಬ್ಬ ವ್ಯಕ್ತಿ ಬೇಡಿಕೆಯಿಟ್ಟರೂ ಅದರ ಪರಿಗಣನೆ ಆಗಬೇಕೆಂದರು.

ವಿಶ್ವದ ಅತಿ ದೊಡ್ಡ ಜನಾಂಗೀಯ ವೈವಿಧ್ಯತೆಯ ರಾಷ್ಟçದಲ್ಲಿ ನಮ್ಮ ಸಾಂಪ್ರದಾಯಿಕ ಮತ್ತು ಅಖಂಡ ಮಾತೃಭೂಮಿಯಲ್ಲಿ ನಮ್ಮ ಭವಿಷ್ಯವನ್ನು ನಿರ್ಧರಿಸಲು ಸಂವಿಧಾನದ ಅಡಿಯಲ್ಲಿ ಸುರಕ್ಷಿತ ಸ್ಥಳ ಮತ್ತು ಸ್ಥಾನವನ್ನು ಕೊಡವರು ಆಶಿಸುತ್ತೇವೆ. ಇದು ನಮ್ಮ ಸಹಜ ಹಕ್ಕು, ಜನ್ಮಸಿದ್ಧ ಹಕ್ಕು, ಮೂಲಭೂತ ಹಕ್ಕು, ಸಾಂವಿಧಾನಿಕ ಹಕ್ಕು ಮತ್ತು ಮಾನವ ಹಕ್ಕು ಎಂದರು.

ಡಾರ್ಜಿಲಿAಗ್ ಗೂರ್ಖಾಲ್ಯಾಂಡ್, ವಿಶಾಖಪಟ್ಟಣಂ ಹಿಲ್ ಟ್ರ‍್ಯಾಕ್ಟ್ ಏಜೆನ್ಸಿ-ಗೋದಾವರಿ ಹಿಲ್ ಟ್ರ‍್ಯಾಕ್ಟ್ ಏಜೆನ್ಸಿಗಳ ಮಾದರಿಯಲ್ಲಿ ಸಂವಿಧಾನದ ೫ನೇ ಅನುಸೂಚಿಯ ಅಡಿಯಲ್ಲಿ “ಕೊಡವಲ್ಯಾಂಡ್” ಅನ್ನು ಪಡೆದುಕೊಳ್ಳುವುದು, ಕೊಡವರು ಅನುಭವಿಸುತ್ತಿರುವ ಭೂ-ರಾಜಕೀಯ ದುರಂತವನ್ನು ಜಯಿಸಲು ಇರುವ ಏಕೈಕ ಪರಿಹಾರವಾಗಿದೆ. ಮುಂಬರುವ ೨೦೨೭ರ ರಾಷ್ಟಿçÃಯ ಜನಗಣತಿಯಲ್ಲಿ ಕೊಡವರನ್ನು ವಿಶಿಷ್ಟ, ಅಪರೂಪದ ಜನಾಂಗೀಯ ಸಮುದಾಯವೆಂದು ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.

ಕೊಡವ ಜನಾಂಗೀಯ ಜಾಗೃತಿ ಪ್ರಚಾರವನ್ನು ಸಿಎನ್‌ಸಿ ವತಿಯಿಂದ ವಿವಿಧೆಡೆ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾಡಲಾಗುತ್ತಿದೆ. ಸಿಎನ್‌ಸಿಯ ಈ ಜನಾಂಗೀಯ ಜಾಗೃತಿ ಕಾರ್ಯಕ್ರಮವನ್ನು ಮುಖ್ಯವಾಗಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ಸಂವಿಧಾನದ ೩೭೧ನೇ ವಿಧಿ, ೫ನೇ ಮತ್ತು ೬ನೇ ಅನುಸೂಚಿಗಳ ಅಡಿಯಲ್ಲಿ ಸ್ವಯಂ ಆಡಳಿತದ ಮೇಲೆ ಗಮನಹರಿಸುತ್ತಾ ಮಾಡುತ್ತಿದೆ ಎಂದರು.

ದೇವಟ್‌ಪರAಬು ಕೊಡವ ನರಮೇಧದ ದುರಂತ ಸಂಭವಿಸಿದ ಸ್ಥಳದಲ್ಲಿ, ಹಾಗೆಯೇ ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆ ಅರಮನೆಯಲ್ಲಿ ಸಂಚುಗಳ ಮೂಲಕ ನಡೆಸಲಾದ ಕೊಡವ ರಾಜಕೀಯ ಮಾರಣಹೋಮಗಳ ಸ್ಥಳದಲ್ಲಿ ಸಂವಿಧಾನದ ೪೯ನೇ ವಿಧಿ ಮತ್ತು ೧೯೬೪ರ ವಿಶ್ವಸಂಸ್ಥೆಯ ವೆನಿಸ್ ಚಾರ್ಟರ್ ಅಡಿಯಲ್ಲಿ ಅಂತರರಾಷ್ಟಿçÃಯ ನರಮೇಧ ಸ್ಮಾರಕದ ನಿರ್ಮಾಣ, ಕೊಡವ ಅಧ್ಯಾತ್ಮಿಕ ಧಾಮಗಳು (ಮಂದ್), ಪವಿತ್ರ ಕಾಡುಗಳು (ದೇವರಕಾಡು) ಮತ್ತು ಇತರ ಪರಂಪರೆಯ ತಾಣಗಳನ್ನು ಯುನೆಸ್ಕೋ ಪಟ್ಟಿಯಲ್ಲಿ ಸೇರಿಸಬೇಕು, ಸಂವಿಧಾನದ ೮ನೇ ಅನುಸೂಚಿಯಲ್ಲಿ ಕೊಡವ ಭಾಷೆಯನ್ನು ಸೇರಿಸಬೇಕೆಂದು ಆಗ್ರಹಿಸಿದರು.

ಜನಜಾಗೃತಿ ಕಾರ್ಯಕ್ರಮದಲ್ಲಿ ಬಿದ್ದಂಡ ರಾಧಾ ಮಾದಯ್ಯ, ಪುಟ್ಟಿಚಂಡ ಇಂದಿರಾ ಸನ್ನು, ಬುಟ್ಟಿಯಂಡ ಪ್ರಿಯಾ, ಚೋಳಪಂಡ ಜ್ಯೋತಿ ನಾಣಯ್ಯ, ಪಟ್ಟಮಾಡ ಲಲಿತಾ, ಸಿದ್ದಾಪುರ ಕೊಡವ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕಮಾಂಡರ್ ಕುಕ್ಕೆರ ಕೇಶು ಉತ್ತಪ್ಪ, ಅರೆಕಾಡು ಕೊಡವ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕುಕ್ಕೆರ ಜಯ ಚಿಣ್ಣಪ್ಪ, ಮಂಡೇಪAಡ ಬಾಬ್ ಕುಶಾಲಪ್ಪ, ಚೇರಂಡ ಸುಭಾಷ್, ಮೂಕೊಂಡ ದಿಲೀಪ್ ತಮ್ಮಯ್ಯ, ಬಿದ್ದಂಡ ಮಾದಯ್ಯ, ಪಾಲಚಂಡ ಜಾಲಿ ತಮ್ಮಯ್ಯ, ಮಂಡಿರ ಬಬ್ಬು ಉತ್ತಯ್ಯ, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಪುಟ್ಟಿಚಂಡ ಸನ್ನು, ಕಾಡುಮಂಡ ತಮ್ಮಯ್ಯ, ಚೇರಂಡ ಸುನಿಲ್ ಪೂಣಚ್ಚ, ಬಲ್ಲಾರಂಡ ಅಭಿನ್ ಮುತ್ತಣ್ಣ, ಚೇನಂಡ ಅಜಿತ್ ಪೂಣಚ್ಚ, ಮಂಡೇಪAಡ ಅರ್ಜುನ್ ತಿಮ್ಮಯ್ಯ, ಪಾಲೆಕಂಡ ಪ್ರಧಾನ್ ಪೂಣಚ್ಚ, ಐತಿಚಂಡ ಪೂವಯ್ಯ, ಚಾರಿಮಂಡ ತಮ್ಮಯ್ಯ, ಪಾಂಡAಡ ಗಣಪತಿ, ಬಲ್ಲಚಂಡ ಪೂವಯ್ಯ, ಬಲ್ಲಚಂಡ ಚಂದನ್ ಅಪ್ಪಯ್ಯ, ಬಿದ್ದಂಡ ಭೀಮಯ್ಯ, ಆಲೆಮಾಡ ಪೂವಯ್ಯ, ಆಲೆಮಾಡ ನವೀನ್, ಆಲೆಮಾಡ ರೋಷನ್, ಆಲೆಮಾಡ ರಮೇಶ್, ನಾಯಡ ಉತ್ತಪ್ಪ, ಮೂಕೊಂಡ ಸುಬ್ರಮಣಿ, ಮಂಡೇಪAಡ ಮುತ್ತಣ್ಣ, ಅಜ್ಜಿನಿಕಂಡ ರಘು ಕರುಂಬಯ್ಯ, ಅಜ್ಜಿನಿಕಂಡ ಕುಶಾಲಪ್ಪ, ಮೇಕೇರಿರ ದೇವಯ್ಯ, ಅಜ್ಜಿನಿಕಂಡ ಪೂವಯ್ಯ, ಚಂಬAಡ ಚಿಮ್ಮಿ ಉತ್ತಪ್ಪ, ಬೊಡ್ಡಂಡ ಶಂಭಯ್ಯ, ಬೊಡ್ಡಂಡ ಮಿಥುನ್ ಮಂದಣ್ಣ, ನೆಲ್ಲಮಕ್ಕಡ ರವಿ ಪೂಣಚ್ಚ, ಉದ್ದಪಂಡ ಚೆಂಗಪ್ಪ, ಅಪ್ಪಚೆಟ್ಟೋಳಂಡ ಹರೀಶ್ ಸೋಮಯ್ಯ, ಬಟ್ಟೀರ ಉತ್ತಯ್ಯ, ಪಾಲಚಂಡ ಅಚ್ಚಯ್ಯ, ಮುದ್ದಿಯಡ ಸುಬ್ಬಯ್ಯ, ಬಲ್ಲಚಂಡ ಸುನಿಲ್, ಅಣ್ಣಾರಕಂಡ ವಿಜು ದೇವಯ್ಯ, ಚೇನಂಡ ದಯಾ ಉತ್ತಯ್ಯ, ಪುಟ್ಟಿಚಂಡ ವಿಜು ಕಾಳಪ್ಪ, ಚೋಳಪಂಡ ನಾಣಯ್ಯ, ಐಚೋಡಿಯಂಡ ಕುಶಾಲಪ್ಪ, ಚೇರಂಡ ನಂದ, ಬಲ್ಲಚಂಡ ಚೆಂಗಪ್ಪ, ಬಲ್ಲಚಂಡ ಮುತ್ತಣ್ಣ, ಬುಟ್ಟಿಯಂಡ ನಿಖಿಲ್ ಸೋಮಯ್ಯ, ಬುಟ್ಟಿಯಂಡ ಬೋಪಣ್ಣ, ನೆಲ್ಲಮಕ್ಕಡ ಪೂವಯ್ಯ. ಅರೆಕಾಡು ಕೊಡವ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕುಕ್ಕೆರ ಜಯ ಚಿಣ್ಣಪ್ಪ ಸ್ವಾಗತಿಸಿದರು, ಸಿದ್ಧಾಪುರ ಕೊಡವ ಸಾಂಸ್ಕೃತಿಕ ಕ್ರೀಡಾ ಸಂಘದ ಅಧ್ಯಕ್ಷ ಕಮಾಂಡರ್ ಕುಕ್ಕೆರ ಕೇಶು ಉತ್ತಪ್ಪ ವಂದಿಸಿದರು.