ಪೈಲಟ್, ಮತ್ತೊಬ್ಬ ಪ್ಲಂಬರ್, ಇನ್ನೊಬ್ಬ ಬ್ಯಾಂಕರ್, ಮತ್ತೋರ್ವ ಉದ್ಯಮಿ ಹಾಗೂ ದಂತವೈದ್ಯರ ಸಮಯಪ್ರಜ್ಞೆ ಹಾಗೂ ಶೌರ್ಯತನದಿಂದಾಗಿ ವಿಮಾನದಲ್ಲಿದ್ದ ೧೭೪ ಮಂದಿಯ ಜೀವ ಉಳಿದಂತಾಗಿದೆ. ಸಿನಿಮೀಯ ರೀತಿಯ ಈ ಘಟನೆ ನಡೆದಿದ್ದು ದುಬೈನಿಂದ ಸೆ.೩೦ ರಂದು ಇಸ್ರೇಲ್ನ ರಾಜಧಾನಿ ಟೆಲ್-ಅವೀವ್ಗೆ ಹೊರಟಿದ್ದ ಫ್ಲೆöÊದುಬೈ ವಿಮಾನದಲ್ಲಿ.
ವಿಮಾನದಲ್ಲಿ ಬಹುತೇಕರು ಇಸ್ರೇಲಿ ಪ್ರಯಾಣಿಕರೇ ಇದ್ದು, ಈ ವಿಮಾನವನ್ನು ಪತನಗೊಳಿಸಬೇಕೆಂಬ ಸಂಚು ರೂಪಿಸಿದ ಓಮನ್ ರಾಷ್ಟçದ ಕೋ-ಪೈಲೆಟ್, ತನ್ನ ಭಾರತೀಯ ಸಹೋದ್ಯೋಗಿ, ಅದೇ ವಿಮಾನದ ಪೈಲೆಟ್ ಸ್ಮಿಟ್ ಮಚ್ಚಾರ್ ಅವರ ಮೇಲೆ ದಾಳಿ ನಡೆಸಿದರೆನ್ನಲಾಗಿದೆ. ತುರ್ತು ಸಂದರ್ಭ ವಿಮಾನದ ಕಾಕ್ಪಿಟ್(ಪೈಲೆಟ್ಗಳಿರುವ ಸ್ಥಳ)ನಲ್ಲಿ ಬಳಕೆಗೆಂದಿರುವ ಸಣ್ಣ ಕೊಡಲಿಯಿಂದ ಓಮನ್ ರಾಷ್ಟçದ ಕೋ-ಪೈಲೆಟ್, ಭಾರತೀಯ ಪೈಲೆಟ್ಅನ್ನು ಕೊಲ್ಲುವ ಹುನ್ನಾರ ರೂಪಿಸಿ ದಾಳಿ ಮಾಡಿ ಗಾಯಗೊಳಿಸಿರುವುದಾಗಿ ತಿಳಿದುಬಂದಿದೆ.
ಗಾಯಗೊಳಗಾದ ಸ್ಮಿಟ್ ಮಚ್ಚಾರ್ ಕುಸಿದಿದ್ದಾರೆ. ವಿಮಾನವು ೨೯ ಸೆಕೆಂಡುಗಳಲ್ಲಿ ೧೫,೦೦೦ ಅಡಿಯಷ್ಟು ಆಳಕ್ಕೆ ಕುಸಿದಿದೆ. ಈ ಸಂದರ್ಭ ಪ್ರಯಾಣಿಕರು ಗಾಬರಿಗೊಂಡು ಕಿರುಚಾಡಲು ಪ್ರಾರಂಭಿಸಿದ್ದರಾದರೂ ಕಾಕ್ಪಿಟ್ನಲ್ಲಿ ಏನಾಗುತ್ತಿದೆ ಎಂಬ ಕುರುಹು ಕೂಡ ಅವರಿಗಿರಲಿಲ್ಲ. ಕಾಕ್ಪಿಟ್ನ ಬಾಗಿಲು ಒಳಗಿಂದ ಮಾತ್ರ ತೆರೆಯಲು ಸಾಧ್ಯವಾಗಿದ್ದು, ಈ ಬಾಗಿಲು ಅಲ್ಪ ತೆರೆದಿದ್ದ ಹಾಗೆ ಪ್ರಯಾಣಿಕರೊಬ್ಬರಿಗೆ ಗೋಚರಿಸಿದೆ.
ಯಾನಿವ್ ಹಯೂನ್ ಹೆಸರಿನ ಈ ಪ್ರಯಾಣಿಕ (ವೃತ್ತಿಯಲ್ಲಿ ಪ್ಲಂಬರ್) ಬಾಗಿಲು ತೆರೆದಿರುವುದನ್ನು ಗಮನಿಸಿ ಒಳಕ್ಕೆ ದೌಡಾಯಿಸಿದ್ದಾನೆ. ಈ ಸಂದರ್ಭ ಭಾರತೀಯ ಪೈಲೆಟ್ ಸ್ಮಿಟ್ ಮಚ್ಚಾರ್ ತೀವ್ರ ರಕ್ತಸ್ರಾವದಿಂದ ಕೆಳಗೆ ಇದ್ದುದನ್ನು ಗಮನಿಸಿದ್ದಾರೆ. ಇವರ ಮೇಲೆ ದಾಳಿ ನಡೆಸಿದ ಕೋ-ಪೈಲೆಟ್ ವಿಮಾನದ ಪರಿಕರಗಳನ್ನು ನಾಶಪಡಿಸಿ ವಿಮಾನದ ಪತನಕ್ಕೆ ಪ್ರಯತ್ನಿಸುತ್ತಿದ್ದ ಸಂದರ್ಭ ಯಾನಿವ್, ಇವನನ್ನು ಹಿಡಿದು ಕಾಕ್ಪಿಟ್ನಿಂದ ಹೊರಕ್ಕೆ ಎಸೆದಿದ್ದಾನೆ. ಬಳಿಕ ಇತರರು ಸಹಾಯಕ್ಕೆ ಆಗಮಿಸಿದ್ದಾರೆ. ಮುಖವನ್ನು ಭೂಮಿಯತ್ತ ಮಾಡಿ ಆಳಕ್ಕೆ ಇಳಿಯುತ್ತಿದ್ದ ವಿಮಾನವನ್ನು ವೃತ್ತಿಯಲ್ಲಿ ಪ್ಲಂಬರ್ ಆಗಿರುವ ಯಾನಿವ್, ನಿಯಂತ್ರಣಕ್ಕೆ ತಂದಿದ್ದಾರೆ. ಟಿವಿ ಸೀರಿಯಲ್ವೊಂದರಲ್ಲಿ ಈ ಬಗ್ಗೆ ವೀಕ್ಷಿಸಿದ್ದು, ವಿಮಾನವನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದು ಯಾನಿವ್ ಹೇಳುತ್ತಾರೆ. ಈ ಮಾಹಿತಿಯನ್ನು ಯಾನಿವ್, ಸ್ವತಃ ಇಸ್ರೇಲಿ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರಲ್ಲಿ ಹಂಚಿಕೊAಡಿದ್ದಾರೆ. ಕಾಕ್ಪಿಟ್ ಬಾಗಿಲು ಒಳಗಿಂದ ಮಾತ್ರ ತೆರೆಯಲು ಸಾಧ್ಯವಾಗಿದ್ದು, ಭಾರತೀಯ ಪೈಲೆಟ್ ಸ್ಮಿಟ್ ಅವರು ತಾವು ಕುಸಿದು ಬೀಳುತ್ತಿದ್ದ ಸಂದರ್ಭ ಬಾಗಿಲನ್ನು ತೆರೆದಿದ್ದಾಗಿ ಯಾನಿವ್ ಅವರು ಮಾಹಿತಿ ಹಂಚಿಕೊAಡಿದ್ದಾರೆ.
ಯಾನಿವ್ ಅವರು ಕೋ-ಪೈಲೆಟ್ಅನ್ನು ಕಾಕ್ಪಿಟ್ನಿಂದ ಹೊರಕ್ಕೆ ಹಾಕುವ ವೇಳೆ ಇನ್ನಿಬ್ಬರು ಪ್ರಯಾಣಿಕರು, ಒಬ್ಬ ಇನ್ಸುö್ಯರೆನ್ಸ್ ಸಂಸ್ಥೆ ಉದ್ಯಮಿ ಅಸ್ಸಫ್ ರಜುಆನ್ ಹಾಗೂ ಮತ್ತೊಬ್ಬ ಬ್ಯಾಂಕರ್ ಝ್ವಿಕಾ ಮೆನೆಸ್ ಅವರುಗಳು ಈ ಕೋ-ಪೈಲೆಟ್ಅನ್ನು ಹಿಡಿದು ಕೇಬಲ್ವೊಂದನ್ನು ಬಳಸಿ ಕಟ್ಟಿ ಹಾಕಿದ್ದಾರೆ.
ಈ ದಾಳಿಕೋರ ಕೋ-ಪೈಲೆಟ್ ಅನ್ನು ನಿಯಂತ್ರಣಕ್ಕೆ ತಂದ ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ ಶೋಟ್ಹಾ ಮುಸ್ಸಾಯಿವ್ ಹೆಸರಿನ ದಂತವೈದ್ಯರೋರ್ವರು ಕಾಕ್ಪಿಟ್ನಲ್ಲಿ ಕುಸಿದು ಬಿದ್ದಿದ್ದ ಭಾರತೀಯ ಪೈಲೆಟ್ ಸ್ಮಿಟ್ ಅವರ ರಕ್ತಸ್ರಾವವನ್ನು ನಿಯಂತ್ರಿಸಲು ಸಫಲರಾಗಿದ್ದಾರೆ. ಅವರ ತಲೆ ಹಾಗೂ ಕೈಗಳಲ್ಲಿ ಗಾಯಗಳಾಗಿದ್ದಾಗಿ ಶೋಟ್ಹಾ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ವಿಮಾನವನ್ನು ಪ್ಲಂಬರ್ ಯಾನಿವ್ ನಿಯಂತ್ರಣಕ್ಕೆ ತಂದರಾದರೂ ಲ್ಯಾಂಡ್ ಮಾಡಲು ಅವರಿಂದ ಆಗುತ್ತಿರಲಿಲ್ಲ. ಈ ಸಂದರ್ಭ ಅದೇ ವಿಮಾನದಲ್ಲಿ ಪ್ರಯಾಣಿಕರಾಗಿ ಕುಳಿತಿದ್ದ ಫ್ಲೆöÊದುಬೈ ಸಂಸ್ಥೆಯ ಈರ್ವರು ಪೈಲೆಟ್ಗಳು ವಿಮಾನದ ನಿಯಂತ್ರಣವನ್ನು ಪಡೆದು ಸೌದಿ ಅರೇಬಿಯಾದಲ್ಲಿ ಲ್ಯಾಂಡ್ ಮಾಡಿದ್ದಾರೆ. ನಂತರ ಮತ್ತೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಇಸ್ರೇಲ್ಗೆ ತಲುಪಿಸಲಾಗಿದೆ. ದಾಳಿಕೋರ ಓಮನ್ ರಾಷ್ಟçದ ಕೋ-ಪೈಲೆಟ್ ಹಾಗೂ ವಿಮಾನವನ್ನು ಸೌದಿಯಲ್ಲಿ ಲ್ಯಾಂಡ್ ಮಾಡಿದ ಈರ್ವರು ಪೈಲೆಟ್ಗಳ ಹೆಸರುಗಳು ಇನ್ನೂ ಬಹಿರಂಗಗೊAಡಿಲ್ಲ. ಗಾಯಾಳು ಭಾರತೀಯ ಸ್ಮಿಟ್ ಮಚ್ಚಾರ್ ಅವರು ಸೌದಿ ಅರೇಬಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖರಾಗಲಿದ್ದಾರೆ ಎಂದು ತಿಳಿದುಬಂದಿದೆ. ಜೀವನ್ಮರಣ ಸ್ಥಿತಿಯಲ್ಲಿಯೂ ಕಾಕ್ಪಿಟ್ನ ಬಾಗಿಲನ್ನು ತೆರೆದು ಸಮಯಪ್ರಜ್ಞೆ ಮೆರೆದ ಸ್ಮಿಟ್ ಮಚ್ಚಾರ್ ಹಾಗೂ ದಾಳಿಕೋರ ಕೋ-ಪೈಲೆಟ್ಅನ್ನು ನಿಯಂತ್ರಣಕ್ಕೆ ತಂದ ಪ್ರಯಾಣಿಕರ ಶೌರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಸ್ಮಿಟ್ ಮಚ್ಚಾರ್ ಅವರ ಕುಟುಂಬದ ಸದಸ್ಯರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸಂಪರ್ಕಿಸಿದ್ದಾರೆ. ಸ್ಮಿಟ್ ಮಚ್ಚಾರ್ ಅವರ ಶೌರ್ಯವು ದೇಶದ ಎಲ್ಲರಿಗೆ ಮಾದರಿಯಾಗಲಿ ಎಂಬುದಾಗಿ ಪ್ರಧಾನಿ ಮೋದಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ಹೇಳಿದ್ದಾರೆ. ಅಮೇರಿಕಾ ಅಧ್ಯಕ್ಷ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರುಗಳು ಕೂಡ ಭಾರತೀಯ ಪೈಲೆಟ್ ಸ್ಮಿಟ್ ಮಚ್ಚಾರ್ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.