ಕೂಡಿಗೆ, ಸೆ. ೨೮: ಸಮಾನ ಮನಸ್ಕ ಹಾಗೂ ಹಿತೈಷಿಗಳ ಬಳಗ ಕೊಡಗು ಜಿಲ್ಲೆ ಇದರ ವತಿಯಿಂದ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅವರಿಗೆ ನಾಗರಿಕ ಸನ್ಮಾನ ಕಾರ್ಯವು ಎಸ್.ಎಲ್.ಎನ್. ಗ್ರಾö್ಯಂಡ್ ಕನ್ವೆನ್ಷನ್ ಹಾಲ್‌ನ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು.
ಇದರ ಅಂಗವಾಗಿ ಪ್ರಚಲಿತ ಚುನಾವಣಾ ರಾಜಕಾರಣ ಹಾಗೂ ಪ್ರಜಾಪ್ರಭುತ್ವ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ನೆರವೇರಿತು. ವಿ.ಪಿ. ಶಶಿಧರ್ ಅವರಿಗೆ ನಾಗರಿಕರ ಪ್ರೀತಿ ಹಾಗೂ ಅಭಿಮಾನ ಪೂರಕವಾಗಿ ನಾಗರಿಕ ಸನ್ಮಾನ ಸಮಾರಂಭದ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ನೆರವೇರಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಮಂತರ್, ಅಭಿವೃದ್ಧಿ ಪೂರಕ ಹಲವಷ್ಟು ವಿಚಾರಗಳಲ್ಲಿ ಶಶಿಧರ್ ಅವರು ತಮಗೆ ಸಲಹೆ ನೀಡುತ್ತಿದ್ದು ಯಾವುದೇ ವಿಚಾರದಲ್ಲೂ ರಾಜಿಯಾಗದ ವ್ಯಕ್ತಿತ್ವ ಅವರದು ಎಂದು ಶ್ಲಾಘಿಸಿದರು.
ಸಾನಿಧ್ಯವನ್ನು ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ವಹಿಸಿ ಅಶೀರ್ವಚನ ನೀಡಿ, ಜನಪರ, ಸಾಮಾಜಿಕ ಕಾಳಜಿಯೊಂದಿಗೆ ಅನ್ಯಾಯದ ವಿರುದ್ಧ ಹೋರಾಟದ ಮನಸ್ಥಿತಿಯ ಕಾಳಜಿ ಹೊಂದಿರುವ ವಿ.ಪಿ. ಶಶಿಧರ್ ಕಳೆದ ಮೂರೂವರೆ ದಶಕಗಳಿಂದ ರಾಜಕೀಯ ಛಾಪು ಮೂಡಿಸಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಈ ನಾಗರಿಕ ಸನ್ಮಾನಕ್ಕೆ ಅರ್ಹರು ಎಂದರು.
ಸತ್ಯದ ನಿಲುವು ತೋರುವುದೇ ರಾಜಕಾರಣ, ಪ್ರಜಾಪ್ರಭುತ್ವ ಗಟ್ಟಿಗೊಳಿಸುವುದು ಮತ್ತು ಪ್ರಜಾಪ್ರಭುತ್ವದ ಕೊರತೆಗಳನ್ನು ನೀಗಿಸುವುದು ನಾಗರಿಕ ಕರ್ತವ್ಯವಾಗಿದೆ. ಇದಕ್ಕೆ ರಾಜಕಾರಣ ಉತ್ಕೃಷ್ಟ ಅವಕಾಶವನ್ನು ಕಲ್ಪಿಸಿದೆ ಎಂದರು. ನೈತಿಕತೆಯನ್ನು ಕಳೆದುಕೊಂಡ ರಾಜಕೀಯ, ಸಮಾಜಕ್ಕೆ ವಿನಾಶಕಾರಿಯಾಗುತ್ತದೆ ಎಂದು ಅವರು ಇದೇ ವೇಳೆ ಎಚ್ಚರಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಇಂದಿನ ರಾಜಕೀಯ ಜೀವನದಲ್ಲಿ ನೇರವಾಗಿ ಮಾತನಾಡಿ ಜನರ ಮನಸ್ಸು ಗೆಲ್ಲುವುದು ತುಂಬ ಕಷ್ಟವಾಗಿದೆ. ಆದರೆ, ವಿ.ಪಿ. ಶಶಿಧರ್ ನಿಷ್ಠುರವಾದಿಯಾಗಿ ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಯಾರೇ ದಾರಿ ತಪ್ಪಿದರೂ ನೇರವಾಗಿ ಹೇಳುವ ಧೈರ್ಯ ಇವರಿಗಿದ್ದು, ಸಂವಿಧಾನದ ಆಶಯದ ಪ್ರಜಾಪ್ರಭುತ್ವವನ್ನು ಅವರು ಎತ್ತಿ ಹಿಡಿದಿದ್ದಾರೆ ಎಂದು ಶ್ಲಾಘಿಸಿದರು.
ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಸಂಗಪ್ಪ ಆಲೂರ ಮಾತನಾಡಿ, ನಾಯಕರಾದವರು ಧೈರ್ಯ ಕಳೆದುಕೊಳ್ಳಬಾರದು, ತತ್ವ ಸಿದ್ಧಾಂತದಿAದ ಸಾಗಿದರೆ ನಾಗರಿಕರಿಂದ ಪ್ರೀತಿ, ಗೌರವ ಸಿಗುತ್ತದೆ ಎಂದರು. ೩೫ ವರ್ಷಗಳ ರಾಜಕೀಯ ಜೀವನದಲ್ಲಿ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಶಶಿಧರ್ ತಮ್ಮನ್ನು ಸಮಾಜದ ಸೇವೆಗೆ ಅರ್ಪಿಸಿಕೊಂಡು ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.
ನಾಯಕನಾದವನು ತತ್ವ ಸಿದ್ಧಾಂತಗಳಲ್ಲಿ ರಾಜಿ ಆಗದ ಮನಸ್ಥಿತಿ ಹೊಂದಿರಬೇಕು ಅದು ಶಶಿಧರ್ ಅವರಲ್ಲಿ ಕರಗತವಾಗಿದೆ ಎಂದ ಅಶೋಕ್ ಸಂಗಪ್ಪ ಅವರು, ಸೇವಾ ಮನೋಭಾವ ಉಳ್ಳವರು ಅಧಿಕಾರವನ್ನು ಸಾರ್ವಜನಿಕ ಸೇವೆಗೆ ಬಳಸಬೇಕು ಎನ್ನುವ ನೈತಿಕತೆಯನ್ನು ಶಶಿಧರ್ ಹೊಂದಿದ್ದಾರೆ ಎಂದು ಪ್ರಶಂಶಿಸಿದರು.
ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ ಚಿದ್ವಿಲಾಸ್ ಅವರು ಮಾತನಾಡಿ, ಶಕ್ತಿಪತ್ರಿಕೆ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೂ, ರಾಜಕಾರಣಿಗಳು ಸಾಮಾಜಿಕ ಚಿಂತನೆಯನ್ನು ಹೊಂದಿದ್ದಾಗ ಅವರನ್ನು ಬೆಂಬಲಿಸುತ್ತದೆ ಎಂದರು. ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಹೋದರತ್ವ ಸಮನ್ವಯತೆ, ಸಮಾನತೆ ಇವುಗಳನ್ನು ಬಯಸುವ ಯಾವುದೇ ಜಾತಿ, ಧರ್ಮ, ಮತದ ಜನತೆ ಮತ್ತು ರಾಜಕಾರಣಿಗಳೊಂದಿಗೆ ಶಕ್ತಿಪತ್ರಿಕೆ ಕೈಜೋಡಿಸಲು ಹಿಂಜರಿಯುವುದಿಲ್ಲ ಎಂದು 'ಶಕ್ತಿ'ಯ ಮೂಲ ಉದ್ದೇಶದ ಕುರಿತು ಸ್ಪಷ್ಟನೆ ನೀಡಿದರು.
ಈ ಕಾರಣಕ್ಕಾಗಿ ಸಮಾಜದ ಹಿತ ಚಿಂತನೆಯನ್ನು ಮಾಡುವ ಶಶಿಧರ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಸಂತೋಷವಾಗಿದೆ ಎಂದು ಚಿದ್ವಿಲಾಸ್ ಹೇಳಿದರು.
ಬರಹಗಾರ ಹೆ.ಕೆ. ವಿವೇಕಾನಂದ ಮಾತನಾಡಿ, ಇಂದು ದ್ವೇಷ ಮತ್ತು ಅಸೂಯೆ ಎಂಬ ಮಾರುಕಟ್ಟೆಯಲ್ಲಿ ಪ್ರೀತಿ ಮತ್ತು ವಿಶ್ವಾಸದ ಅಂಗಡಿಯನ್ನು ತೆರೆಯಬೇಕಾದ ಅನಿವಾರ್ಯತೆ ಇದ್ದು ಇದಕ್ಕಾಗಿ ಶಶಿಧರ್ ಅವರು ಪ್ರಯತ್ನಪಟ್ಟಿದ್ದಾರೆ ಎಂದರು. ಸುಮಾರು ೧೫ ವರ್ಷಗಳಿಂದ ನಾಗರಿಕ ಸಮಾಜ ಹಿಂದಕ್ಕೆ ಹೋಗುತ್ತಿದ್ದು ಸಂವೇದನೆ ಇಲ್ಲದೆ ಸೂಕ್ಷö್ಮತೆಯನ್ನು ಕಳೆದುಕೊಳ್ಳುತ್ತಿದೆ, ಮೌಲ್ಯ ಸಂಸ್ಕೃತಿ ಹೋಗಿ ಮೌನ ಸಂಸ್ಕೃತಿ ಈ ಸಮಾಜಕ್ಕೆ ಬಂದಿದೆ ಎಂದು ವಿಷಾದಿಸಿದರು.
ಕೆಪಿಸಿಸಿ ವಕ್ತಾರ ಎಂ. ಲಕ್ಷö್ಮಣ್, ಮಹಾನಗರ ಸಂಸ್ಥೆಯ ಅಧ್ಯಕ್ಷ ನಿಕೇತ್ ರಾಜ್ ಮೌರ್ಯ ಮಾತನಾಡಿದರು. ಸಿಂಚನಾ ಶಶಿಧರ್ ಪಾಲ್ಗೊಂಡಿದ್ದರು. ವಿ.ಪಿ. ಶಶಿಧರ್‌ಗೆ ನೂರಾರು ಸಂಘ-ಸAಸ್ಥೆಗಳು ನಾಗರಿಕ ಸನ್ಮಾನ ನೆರವೇರಿಸಿದವು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾನ ಮನಸ್ಕ ಹಾಗೂ ಹಿತೈಷಿಗಳ ಬಳಗದ ಅಧ್ಯಕ್ಷ ಅಬ್ದುಲ್ ರಜಾಕ್, ಶಶಿಧರ್ ಅವರ ೩೫ ವರ್ಷಗಳ ಸಾರ್ವಜನಿಕ ಬದುಕಿನ ಕುರಿತು ಮಾಹಿತಿ ನೀಡಿದರು. ಬಳಗದ ಪ್ರಮುಖರಾದ ಕೃಷ್ಣೇಗೌಡ ಅವರು ಸ್ವಾಗತಿಸಿ, ನಿವೃತ ಶಿಕ್ಷಕ ನಾಗೇಶ್ ಅವರು ಕಾರ್ಯಕ್ರಮ ನಿರೂಪಿಸಿದರು, ನಂಜುAಡಸ್ವಾಮಿಯವರು ಸ್ವಾಗತ ಗೀತೆಯನ್ನು ಹಾಡಿದರು.
ಕಾರ್ಯಕ್ರಮದ ಆರಂಭಕ್ಕೂ ಮೊದಲು ಗಣಪತಿ ದೇವಾಲಯ ವೃತ್ತದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಗಣಪತಿ ದೇವಸ್ಥಾನ ಮುಂಭಾಗದಿAದ ಮುಖ್ಯ ರಸ್ತೆಯ ಮೂಲಕ ಮೆರವಣಿಗೆ ಸಾಗಿ ಕಾರ್ಯಕ್ರಮ ಸ್ಥಳಕ್ಕೆ ಬರಲಾಯಿತು.