ಶ್ರೀಮಂಗಲ, ಸೆ. ೨೭: ಕೊಡಗಿನ ಪವಿತ್ರ ಕ್ಷೇತ್ರವಾದ ಶ್ರೀ ತಲಕಾವೇರಿ ಸನ್ನಿಧಾನ ತುಲಾ ಸಂಕ್ರಮಣ ಜಾತ್ರೋತ್ಸವಕ್ಕೆ ಸಜ್ಜುಗೊಳ್ಳುತ್ತಿದೆ. ಜಿಲ್ಲಾಡಳಿತದ ಪೂರ್ವಸಿದ್ಧತೆಗಳು ಒಂದೆಡೆಯಾದರೆ, “ತಿಂಗಕೋರ್ ಮೊಟ್ಟ್ ತಲಕಾವೇರಿಕ್'' ಎಂಬ ಕಾವೇರಿ ಭಕ್ತಾದಿಗಳ ಕೂಟದಿಂದ ಇಡೀ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಬೃಹತ್ ಸ್ವಚ್ಛತಾ ಆಂದೋಲನ ನಡೆಸಲಾಯಿತು.
ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸುಮಾರು ೫೦೦ ಕ್ಕೂ ಅಧಿಕ ಭಕ್ತಾದಿಗಳು ಕ್ಷೇತ್ರವನ್ನು ಸ್ವಯಂಸೇವಕರಾಗಿ ಶುಚಿಗೊಳಿಸುವ ಮೂಲಕ ತಮ್ಮ ಕರ್ತವ್ಯ ಮಾಡಿದ್ದಾರೆ. ಈ ಸಂಘಟನೆ ಜಾತ್ರೋತ್ಸವ ಸಂದರ್ಭದಲ್ಲಿ ವಿಶೇಷ ರೀತಿಯಲ್ಲಿ ಈ ಸ್ವಚ್ಛತಾ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದು, ಇದು ೬ನೇ ವರ್ಷದ ಸೇವೆಯಾಗಿದೆ. ಇದಲ್ಲದೆ ಪ್ರತಿತಿಂಗಳು ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಕ್ಕೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಧಾರ್ಮಿಕ ಕ್ಷೇತ್ರದ ಪರಿಸರ ಹಾಗೂ ಪಾವಿತ್ರ್ಯತೆಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ "ತಿಂಗಕೊರ್ ಮೊಟ್ಟ್ ತಲಕಾವೇರಿಕ್" ಎಂಬ ಕಾವೇರಿ ಭಕ್ತಾದಿಗಳ ಕೂಟ ಪ್ರಾಮುಖ್ಯತೆ ನೀಡುತ್ತಾ ಬರುತ್ತಿರುವುದು ವಿಶೇಷವಾಗಿದೆ.
ಭಾನುವಾರ ನಡೆದ ಸ್ವಚ್ಛತಾ ಕಾರ್ಯದಲ್ಲಿ ಜಿಲ್ಲೆಯ ಮತ್ತು ಹೊರ ಜಿಲ್ಲೆಯಿಂದ ಭಕ್ತಜನ ಆಗಮಿಸಿದ್ದರು. ೯ ವಿಶೇಷ ಬಸ್ ವ್ಯವಸ್ಥೆ ಮೂಲಕ ಕ್ಷೇತ್ರದ ಸೇವೆಗೆ ಜನರು ಉತ್ಸುಕತೆಯಿಂದ ಭಾಗಿಗಳಾದರು. ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಕೊಡಗಿನ ಹಾಗೂ ಕೊಡಗಿನ ಹೊರಗಿನಿಂದಲೂ ಭಕ್ತಾದಿಗಳನ್ನು ಸಂಘಟಿಸಿ ಈ ಕಾರ್ಯವನ್ನು ಕೈಗೊಂಡಿದ್ದು, ೫೦೦ಕ್ಕೂ ಹೆಚ್ಚು ಜನ ಭಕ್ತಾದಿಗಳು ಕ್ಷೇತ್ರದಲ್ಲಿ "ತಿಂಗಕೋರ್ ಮೊಟ್ಟ್ ತಲಕಾವೇರಿಕ್" ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕೂಟ ನೀಡಿದ ಕರೆಗೆ ಸ್ವಯಂಪ್ರೇರಿತರವಾಗಿ ಆಗಮಿಸಿ ಸೇವೆಯಲ್ಲಿ ಪಾಲ್ಗೊಂಡಿದ್ದರು
"ತಿಂಗಕೋರ್ ಮೊಟ್ಟ್ ತಲಕಾವೇರಿಕ್" ಕೂಟ ಆಯೋಜನೆ ಮಾಡಿದ್ದ ಸೇವೆಯಲ್ಲಿ ಸ್ವಚ್ಛತಾ ಕೆಲಸವನ್ನು ಕಾರ್ವಾಷರ್ಗಳು, ಪವರ್ ಸ್ಪೆçÃಮಿಷನ್ಗಳು ಇತ್ಯಾದಿ ಬಳಸಿ ಸ್ವಚ್ಛತಾ ಸೇವೆ ನಡೆಸಿದರು. ಸ್ವಚ್ಛತಾ ಸೇವೆಗೆ ತೆರಳಲು ಟಿ.ಶೆಟ್ಟಿಗೇರಿಯ ರೂಟ್ಸ್ ಎಜುಕೇಶನಲ್ ಟ್ರಸ್ಟ್ ೪ ಬಸ್ ಗಳನ್ನು, ಪೊನ್ನಂಪೇಟೆಯ ಕೂರ್ಗ್ ಇನ್ಸಿ÷್ಟಟ್ಸುಶನ್ ಆಫ್ ಟೆಕ್ನಾಲಜಿ (ಸಿಐಟಿ) ಕಾಲೇಜು ೩ ಬಸುಗಳನ್ನು, ನಾಪೋಕ್ಲುವಿನ ಸೇಕ್ರೆಡ್ ಹಾರ್ಟ್ ಶಾಲೆ ೧ ಬಸ್ ಅನ್ನು, ನಾಪೋಕ್ಲುವಿನ ಎಕ್ಸೆಲ್ ಶಾಲೆ ೧ ಬಸ್ ಅನ್ನು ಕೂಟದ ಮನವಿ ಮೇರೆಗೆ ಪ್ರಾಯೋಜನೆ ಮಾಡಿತ್ತು. ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಭಾಗಮಂಡಲ -ತಲಕಾವೇರಿ ದೇವಸ್ಥಾನದಿಂದ ಕಲ್ಪಿಸಲಾಗಿತ್ತು. ದಿನವಿಡೀ ಶ್ರಮದಾನ ನಡೆಯಿತು.