ವೀರಾಜಪೇಟೆ, ಸೆ. ೨೫: ವೀರಾಜಪೇಟೆಯ ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಬಳಗ ಮತ್ತು ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ ಮೂರ್ನಾಡು ರಸ್ತೆ ವೀರಾಜಪೇಟೆಯ ಸಹಯೋಗದೊಂದಿಗೆ ಇಲ್ಲಿನ ಗಣಪತಿ ವೇದಿಕೆಯಲ್ಲಿ ಮನೆ ಮನೆ ಕವಿಗೋಷ್ಠಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ನರಸಿಂಹನ್ ವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ವಿಜೇತ ಐಮುಡಿಯಂಡ ರಾಣಿ ಮಾಚಯ್ಯ ಉದ್ಘಾಟಿಸಿದರು. ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನು ಬಳಗದ ಸಂಸ್ಥಾಪಕಾಧ್ಯಕ್ಷ ವೈಲೇಶ ಪಿ.ಎಸ್., ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್, ಹಿರಿಯ ಕವಿ ಗಿರೀಶ್ ಕಿಗ್ಗಾಲು ಉಪಸ್ಥಿತರಿದ್ದರು. ಸುಮಾರು ೨೬ ಕವಿಗಳು ಮತ್ತು ಗಾಯಕರು ಭಾಗವಹಿಸಿದ್ದರು.

ಸುಪ್ರೀತ ದಿಲೀಪ್‌ರ ಪ್ರಾರ್ಥನೆಯ ಜೊತೆಗೆ ಆರಂಭವಾದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಕವನಗಳು ಹೊರ ಹೊಮ್ಮಿದ್ದವು. ಕನ್ನಡದ ಗೀತೆಗಳು ಮೊಳಗಿದವು. ಪದ್ಮಶ್ರೀ ವಿಜೇತ ಐಮುಡಿಯಂಡ ರಾಣಿ ಮಾಚಯ್ಯ, ಕಾರ್ಯಕ್ರಮದ ಅಧ್ಯಕ್ಷ ಡಾ. ನರಸಿಂಹನ್, ಹಿರಿಯ ಕವಯಿತ್ರಿ ಶಿವದೇವಿ ಅವನೀಶ್ಚಂದ್ರ, ಹಿರಿಯ ರಂಗಭೂಮಿ ಕಲಾವಿದ ಚಂದ್ರಶೇಖರಯ್ಯ, ಹಿರಿಯ ಚಿತ್ರಕಲಾವಿದ ಮುಕ್ಕಾಟಿರ ಎ. ಸೋಮಯ್ಯ, ಚಿತ್ರಕಲಾವಿದರು, ಶಿಕ್ಷಕರು, ನಿರೂಪಣಾ ಚತುರ ಉ.ರಾ. ನಾಗೇಶ್ ಹಾಗೂ ರಂಗಭೂಮಿ ಕಲಾವಿದರು, ವೀರಗಾಸೆ ಕಲಾವಿದರು ನಾಟಕ ನಿರ್ದೇಶಕ ಕಿರಣ್ ಕುಮಾರ್ ಅವರನ್ನು ಸಾಹಿತ್ಯ ಸಂವರ್ಧಕ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ನಿರೂಪಣೆಯನ್ನು ಉ.ರಾ ನಾಗೇಶ್ ಮತ್ತು ಭಾಗ್ಯವತಿ ಅಣ್ಣಪ್ಪ ಟಿ.ವಿ. ಮಾಡಿದರೆ ಶಿವಮ್ಮ ಪಿ.ವಿ. ಮತ್ತು ಅಲೀಮಾ ಪಿ.ಹೆಚ್. ನಿರ್ವಹಣೆ ಮಾಡಿದರು. ಗಿರೀಶ್ ಕಿಗ್ಗಾಲು ವಂದಿಸಿದರು.