ಜಪಾನ್, ಸೆ. ೨೫: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಸ್ಕಾ÷್ವಶ್ ಕ್ರೀಡೆಯಲ್ಲಿ ಮೂಲತಃ ಕೊಡಗಿನವರಾದ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರು ಮಿಕ್ಸ್÷್ಡ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿ ಪದಕ ಖಚಿತಪಡಿಸಿದ್ದಾರೆ.ಫಿಲಿಫೈನ್ಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಜೋಶ್ನಾ - ವೇಲಾವನ್ ಜೋಡಿ ೧೧-೩, ೧೧-೫ ಅಂಕಗಳ ಮೂಲಕ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಸ್ಕಾ÷್ವಶ್‌ನಲ್ಲಿ ಸೆಮಿಫೈನಲ್ ತಲುಪುವ ೨ ತಂಡಗಳಿಗೂ ಕಂಚು ಪದಕ ನೀಡುವುದರಿಂದ ಜೋಶ್ನಾ ಅವರಿಗೆ ಪದಕ ಖಚಿತವಾಗಿದೆ.
೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಇದು ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಅವರ ೬ನೇ ಪದಕವಾಗಲಿದೆ. ಸೆಮಿಫೈನಲ್ ಇಂದು ನಡೆಯಲಿದ್ದು ಗೆದ್ದರೆ ಅಂತಿಮ ಪಂದ್ಯಕ್ಕೆ ಆಯ್ಕೆಯಾಗಲಿದ್ದಾರೆ. ಈ ಮೂಲಕ ಬೆಳ್ಳಿ ಅಥವಾ ಚಿನ್ನದ ಸಾಧನೆಯನ್ನು ಮಾಡುವ ನಿರೀಕ್ಷೆಯಿದೆ.