ಮಡಿಕೇರಿ, ಸೆ. ೨೫: ತಲಕಾವೇರಿ-ಭಾಗಮಂಡಲ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ಸೂಕ್ತ - ಅರ್ಹತೆಯುಳ್ಳವರನ್ನು ನೇಮಕ ಮಾಡುವಂತೆ ಹಿರಿಯ ಮುಖಂಡ, ಮಾಜಿ ಸಚಿವರಾದ ಯಂ.ಸಿ. ನಾಣಯ್ಯ ಅವರು ರಾಜ್ಯದ ಮುಜರಾಯಿ ಇಲಾಖಾ ಸಚಿವರು ಹಾಗೂ ಕ್ಷೇತ್ರ ವ್ಯಾಪ್ತಿಯ ಶಾಸಕರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ದತ್ತಿಗಳ ಇಲಾಖೆ (ಮುಜರಾಯಿ ಖಾತೆ) ಸಚಿವ ಕೆ.ಎಸ್. ಬಸವಂತಪ್ಪ ಹಾಗೂ ಶಾಸಕ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಎ.ಎಸ್. ಪೊನ್ನಣ್ಣ ಅವರಿಗೆ ಪತ್ರ ಮುಖೇನ ಈ ಕುರಿತು ನಾಣಯ್ಯ ಅವರು ಗಮನ ಸೆಳೆದಿದ್ದಾರೆ.

ಈ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಗೆ ೯ ಮಂದಿಯನ್ನು ನಾಮಕರಣ ಮಾಡಲು ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಇದರ ವ್ಯವಸ್ಥಾಪನಾ ಸಮಿತಿಗೆ ಅರ್ಚಕರಿಗೆ - ೧ ಸ್ಥಾನ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ- ೧ ಸ್ಥಾನ, ಮಹಿಳೆಯರಿಗೆ ೨ ಸ್ಥಾನ, ದೇವಸ್ಥಾನದ ಸ್ಥಳೀಯರಿಗೆ - ೧ ಸ್ಥಾನ, ಇತರರಿಗೆ- ೪ ಸ್ಥಾನ (ಒಟ್ಟು ೯ ಸ್ಥಾನ) ಇವಿಷ್ಟು ಸ್ಥಾನಗಳಿಗೆ ನಾಮಕರಣ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಈಗಾಗಲೇ ಈ ಸ್ಥಾನಗಳನ್ನು ತುಂಬಲು ಸಾರ್ವಜನಿಕ ಭಕ್ತಾದಿಗಳಿಂದ ಸ್ವೀಕೃತವಾಗಿರುವ ಅರ್ಜಿಗಳ ಬಗ್ಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ ೧೯೯೭ ರ ಸೆಕ್ಷನ್ ೨೫ ರಂತೆ ಅರ್ಜಿದಾರರ ವಯಸ್ಸು, ವಿದ್ಯಾರ್ಹತೆ, ನಡತೆ ಮತ್ತು ಪೂರ್ವವೃತ್ತಾಂತದ ಬಗ್ಗೆ ಪರಿಶೀಲಿಸಿ ಸತ್ಯಾಪನಾ ವರದಿ ಕಳುಹಿಸಿಕೊಡಲು ಉಪ ಆಯುಕ್ತರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿಕ ಇಲಾಖೆಯವರು ಕೋರಿದ ಹಿನ್ನಲೆಯಲ್ಲಿ ಕೊಡಗು ಜಿಲ್ಲಾಧಿಕಾರಿಯವರು ವಿವರವಾದ ವರದಿಯನ್ನು ಸಲ್ಲಿಸಲು ಕ್ರಮ ಕೈಗೊಂಡಿದ್ದಾರೆAದು ತಿಳಿದು ಬಂದಿದೆ.

ಇದು ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು, ಈ ವ್ಯವಸ್ಥಾಪನಾ ಸಮಿತಿಗೆ ವ್ಯಕ್ತಿಗಳನ್ನು ನಾಮಕರಣ ಮಾಡುವ ಸಂದರ್ಭದಲ್ಲಿ ಆ ವ್ಯಕ್ತಿಯ ಧಾರ್ಮಿಕ ಹಿನ್ನೆಲೆ, ಯೋಗ್ಯತೆ, ಅರ್ಹತೆ, ಜನಸಾಮಾನ್ಯರ ಮನಸ್ಸಿನಲ್ಲಿ ಇವರ ಬಗ್ಗೆ ಇರುವ ನಂಬಿಕೆ, ಇವರ ಶ್ರೇಷ್ಠತೆ, ಪಾರದರ್ಶಕತೆ - ಇವೆಲ್ಲದರ ಕುರಿತಂತೆ ಕೂಲಂಕಷವಾಗಿ ಮತ್ತು ಗಹನವಾಗಿ ವಿಚಾರ ವಿನಿಮಯ ಮಾಡಿ ಅಂತಹ ವ್ಯಕ್ತಿಗಳನ್ನು ಮಾತ್ರ ಈ ವ್ಯವಸ್ಥಾಪನಾ ಸಮಿತಿಗೆ ನಾಮಕರಣ ಮಾಡಬೇಕೆಂದು ಅವರು ಈ ಪ್ರಮುಖರ ಗಮನಕ್ಕೆ ತಂದಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಈ ಪವಿತ್ರ ಯಾತ್ರಾ ಕ್ಷೇತ್ರಕ್ಕೆ ನಾಮಕರಣ ಮಾಡಿರುವಂತಹ ಕೆಲವು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರುಗಳು ಮತ್ತು ಕೆಲವು ಸದಸ್ಯರ ಚಾರಿತ್ರ‍್ಯದ ಬಗ್ಗೆ ಸಾರ್ವಜನಿಕರು ಮತ್ತು ಭಕ್ತಾದಿಗಳ ವಲಯದಲ್ಲಿ ಸದ್ಭಾವನೆ ಇಲ್ಲದೆ ಮತ್ತು ಪಾರದರ್ಶಕತೆ ಮತ್ತು ಧಾರ್ಮಿಕತೆಗೆ ಕಳಂಕ ತರುವ ವಾತಾವರಣವನ್ನು ಸೃಷ್ಟಿಸಿದ್ದಾರೆಂಬುದು ಇಂದಿಗೂ ಕೂಡ ಸಾರ್ವಜನಿಕ ವಲಯದಲ್ಲಿ ಹಾಗೂ ಭಕ್ತಾದಿಗಳ ಮನಸ್ಸಿನಲ್ಲಿ ಕಂಡುಬAದಿರುವುದು ಕೊಡಗು ಜಿಲ್ಲಾಡಳಿತದ ಮತ್ತು ಸರ್ಕಾರದ ಗಮನಕ್ಕೆ ಬಂದಿರಬಹುದೆAದು ಭಾವಿಸುತ್ತೇನೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಮುಂದಿನ ಮೂರು ವರ್ಷಕ್ಕೆ ಈ ಕ್ಷೇತ್ರಕ್ಕೆ ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸುವ ಸಂದರ್ಭದಲ್ಲಿ ಉತ್ತಮ ಚಾರಿತ್ರ‍್ಯವಿಲ್ಲದ ವ್ಯಕ್ತಿಗಳನ್ನು ನಾಮಕರಣ ಮಾಡಬಾರದಾಗಿಯೂ ಹಾಗೂ ಈ ಸ್ಥಾನಗಳಿಗೆ ಉತ್ತಮ ಸಚ್ಚಾರಿತ್ರ‍್ಯದ ಧಾರ್ಮಿಕ ಭಾವನೆಯುಳ್ಳ ಮತ್ತು ಪಾರದರ್ಶಕತೆಯಿಂದ ಈ ತೀರ್ಥ ಕ್ಷೇತ್ರವನ್ನು ಇನ್ನೂ ಹೆಚ್ಚು ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಇರುವವರನ್ನೇ ನಾಮಕರಣ ಮಾಡುವಂತಾಗಬೇಕೆAದು ನಾಣಯ್ಯ ಅವರು ಆಗ್ರಹಿಸಿದ್ದಾರೆ.