ವೀರಾಜಪೇಟೆ, ಸೆ. ೨೫: ಪುರಸಭೆ ವ್ಯಾಪ್ತಿಯ ಛತ್ರಕೆರೆಯ ರೂ. ೧ ಕೋಟಿ ೩೧ ಲಕ್ಷಗಳ ಹಾಗೂ ಗೌರಿ ಕೆರೆ ಭಾಗದ ರೂ. ೧ ಕೋಟಿ ೩೨ ಲಕ್ಷಗಳ ಅಭಿವೃದ್ಧಿ ಕಾಮಗಾರಿಯನ್ನು ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಒಟ್ಟು ರೂ. ೨ ಕೋಟಿ ೬೩ ಲಕ್ಷಗಳ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕರು, ಕ್ಷೇತ್ರದ ಹಾಗೂ ವಿಶೇಷವಾಗಿ ಈ ಭಾಗಗಳ ಅಭಿವೃದ್ಧಿಗೆ ಸರಕಾರದಿಂದ ವಿಶೇಷ ಅನುದಾನಗಳನ್ನು ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಉತ್ತಮ ಕೆಲಸ ಮಾಡಿದ ಸಂದರ್ಭದಲ್ಲಿ ಜನರು ಸಹ ಅದಕ್ಕೆ ಬೆಂಬಲ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ನೀಡುತ್ತಿರುವುದು ಸಂತಸದ ಸಂಗತಿ. ಕ್ಷೇತ್ರಾದ್ಯಂತ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದ್ದು, ಜನರ ಬೆಂಬಲದೊAದಿಗೆ ಮತ್ತಷ್ಟು ಅನುದಾನವನ್ನು ತಂದು ಜನರ ಆಶೋತ್ತರಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ನಗರ ಅಧ್ಯಕ್ಷ ಮಾಳೇಟಿರ ಬೋಪಣ್ಣ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಮಾದಂಡ ತಿಮ್ಮಯ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಕಾಳಮಂಡ ನೈನಾ ಜಗತ್, ಪುರಸಭೆ ಮಾಜಿ ಉಪಾಧ್ಯಕ್ಷೆ ಫಸಿಯಾ ತಬ್ಸುಂ, ವೀರಾಜಪೇಟೆ ತಾಲೂಕು ಬಗರ್ ಹುಕುಂ ಅಧ್ಯಕ್ಷ ಸಲೀಂ, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷ ರಫೀಕ್, ಶಶಿ, ವೀರಾಜಪೇಟೆ ಬ್ಲಾಕ್ ಉಪಾಧ್ಯಕ್ಷ ಜೋಕಿಂ, ವೀರಾಜಪೇಟೆ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಪುರಸಭೆ ಮಾಜಿ ಸದಸ್ಯರು ರಾಜೇಶ್ ಪದ್ಮನಾಭ, ಪೃಥ್ವಿನಾಥ್, ಆಗಸ್ಟಿನ್ ಬೇನ್ನಿ, ಜಲೀಲ್, ರಜಿನಿಕಾಂತ್, ಮರ್ವಿನ್ ಲೋಬೊ ಕೋಡಿರ ವಿನೋದ್ ನಾಣಯ್ಯ, ಹಮೀದ್, ಕುಂಡಚ್ಚಿರ ಮಂಜು ದೇವಯ್ಯ, ಸತೀಶ್, ಕಾಳಮಂಡ ಜಗತ್, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ ಚಂಗಪ್ಪ, ವೀರಾಜಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಬೀರ್, ಸಂತೋಷ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.